Advertisement

ಆಳ್ವಾಸ್‌ನ ದೀಕ್ಷಾ , ಆಕಾಶ್‌ ನಾಯಿರಿಗೆ 623 ಅಂಕ

10:55 AM May 13, 2017 | |

ಮೂಡಬಿದಿರೆ : ಆಳ್ವಾಸ್‌ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ  ದೀಕ್ಷಾ ಎಂ. ಎನ್‌. ಮತ್ತು ಆಕಾಶ್‌ ಎಂ. ನಾಯಿರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳಿಸುವ ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ್ದಾರೆ.

Advertisement

ಚಾಮರಾಜನಗರ ಜಿಲ್ಲೆಯ ಎಲಂದೂರು  ತಾಲೂಕು ಮದ್ದೂರಿನ ನಂದೀಶ್‌ ಮೂರ್ತಿ ಸಿ. (ಕೊಳ್ಳೇಗಾಲ ಸರಕಾರಿ ಐಟಿಐಯಲ್ಲಿ ಜೆಟಿಒ)  ಹಾಗೂ ಮಂಜುಳಾ ಬಿ.ಎನ್‌. ದಂಪತಿಯ ಪುತ್ರಿ ದೀಕ್ಷಾ ಎಂ.ಎನ್‌. ಅವರು ಗಣಿತ, ಇಂಗ್ಲಿಷ್‌ನಲ್ಲಿ 99, ಕನ್ನಡದಲ್ಲಿ 125 ಹಾಗೂ  ಉಳಿದೆಲ್ಲ ವಿಷಯಗಳಲ್ಲಿ  100ಕ್ಕೆ 100 ಅಂಕ ಗಳಿಸಿದ್ದಾರೆ.

ಯಲಹಂಕ ನ್ಯೂ ಟೌನ್‌ನಲ್ಲಿ ಬೇಕರಿ ಉದ್ಯಮ ನಡೆಸುತ್ತಿರುವ ಮಂಜುನಾಥ ಎನ್‌. ನಾಯಿರಿ ಮತ್ತು ಗೀತಾ ಎಂ. ಇವರ ಪುತ್ರ ಆಕಾಶ್‌ ಎಂ. ನಾಯಿರಿ ಗಣಿತ, ವಿಜ್ಞಾನ, ಇಂಗ್ಲಿಷ್‌, ಸಮಾಜ ವಿಜ್ಞಾನ ಇವುಗಳಲ್ಲಿ ತಲಾ 100, ಪ್ರಥಮ ಭಾಷೆ ಸಂಸ್ಕೃತದಲ್ಲಿ 125ರಲ್ಲಿ  124 ಹಾಗೂ  ಕನ್ನಡದಲ್ಲಿ  100ಕ್ಕೆ 99 ಅಂಕ ಪಡೆದಿದ್ದಾರೆ.

4 ತಾಸು ಅಭ್ಯಾಸ ಮಾಡಿರುವೆ
ದಿನದಲ್ಲಿ 4 ತಾಸು ಅಭ್ಯಾಸ ಮಾಡಿದ್ದೇನೆ. ವಿಶೇಷ ತರಬೇತಿ ಪಡೆದಿಲ್ಲ. ಆಳ್ವಾಸ್‌ ಪ್ರೌಢಶಾಲಾ ವಾತಾವರಣ ಕಲಿಕೆಗೆ ಪೂರಕವಾಗಿದೆ. ಉಚಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿರುವ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮುಖ್ಯೋಪಾಧ್ಯಾಯರಾದ ವಸಂತ್‌ ಕುಮಾರ್‌ ನಿಟ್ಟೆ, ಶಿಕ್ಷಕರು ಹಾಗೂ ನನ್ನ ಹಾಸ್ಟೆಲ್‌ ಸ್ನೇಹಿತರು ನನ್ನ ಈ ಅಂಕಗಳಿಕೆಗೆ ಸ್ಫೂರ್ತಿಯಾಗಿದ್ದಾರೆ. ಮುಂದಕ್ಕೆ ಆಳ್ವಾಸ್‌ನಲ್ಲಿಯೇ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮಾಡುವ ಯೋಚನೆ ಮಾಡಿದ್ದೇನೆ     
– ದೀಕ್ಷಾ ಎಂ.ಎನ್‌.

ಶಿಕ್ಷಕರ ಮಾತು ಪಾಲಿಸಿದರೆ ಯಶಸ್ಸು 
ಪೋಷಕರು, ಆಡಳಿತ ಮಂಡಳಿ ಮತ್ತು ಶಿಕ್ಷಕರ ನಿರಂತರ ನಿಗಾ ಆಳ್ವಾಸ್‌ನಲ್ಲಿ ದೊರಕಿದ್ದರಿಂದ ಗರಿಷ್ಠ ಅಂಕ ಗಳಿಸಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಶಿಕ್ಷಕರ ಮಾತನ್ನು  ಚಾಚೂ ತಪ್ಪದೇ ಪಾಲಿಸಿದಲ್ಲಿ ಯಶಸ್ಸು ಪಡೆಯಬಹುದು. ಶಿಕ್ಷಕರು ಸೂಚಿಸುವುದೆಲ್ಲವೂ ತಮ್ಮ ಒಳಿತಿಗೇ ಎಂದು ಭಾವಿಸಿದರೆ ಅದರ ಫಲ ಖಂಡಿತ ಸಿಗುತ್ತದೆ.  ವಿಶೇಷವಾಗಿ ಉಚಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿರುವ ಆಳ್ವಾಸ್‌ ಅಧ್ಯಕ್ಷ ಡಾ| ಮೋಹನ ಆಳ್ವರಿಗೆ ಕೃತಜ್ಞನಾಗಿದ್ದೇನೆ.    
– ಆಕಾಶ್‌ ಎಂ. ನಾಯರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next