Advertisement

ಅಕ್ಷರ ದಾಸೋಹ ಕಾರ್ಮಿಕರ ಪ್ರತಿಭಟನೆ

12:04 PM Nov 28, 2019 | Suhan S |

ಧಾರವಾಡ: ಜಿಲ್ಲೆಯಲ್ಲಿ 3-4 ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಿ ಎಐಯುಟಿಯುಸಿ ವತಿಯಿಂದ ಅಕ್ಷರ ದಾಸೋಹ ಕಾರ್ಮಿಕರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ಕಲಾಭವನ ಮೈದಾನದಿಂದ ಜಿಪಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡು, ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಲಾಯಿತು. ಎಐಯುಟಿಯುಸಿಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ವತಿಯಿಂದ ಜಿಲ್ಲೆಯಲ್ಲಿ ಅಕ್ಷರ ದಾಸೋಹ ಕಾರ್ಮಿಕರ 3-4 ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು. ವರ್ಷಕ್ಕೆ 2 ಸಮವಸ್ತ್ರ, ಅಧಿಕೃತ ಗುರುತಿನ ಪತ್ರ ಕೊಡುವುದರ ಜೊತೆಗೆ ಕಾರ್ಮಿಕೆಂದು ಪರಿಗಣಿಸಿ ಕನಿಷ್ಠ ವೇತನ, ಪಿಎಫ್‌, ಇಎಸ್‌ಐ, ಪಿಂಚಣಿ ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.

ಎಐಯುಟಿಯುಸಿ ಜಿಲ್ಲಾ ಸಂಚಾಲಕರಾದ ಗಂಗಾಧರ ಬಡಿಗೇರ, ಸಂಘಟನೆಯ ಮುಖಂಡರಾದ ಭುವನಾ ಹಾಗೂ ರಮೇಶ ಹೊಸಮನಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಅಕ್ಷರ ದಾಸೋಹ ಕಾರ್ಮಿಕರಿಗೆ 3-4 ತಿಂಗಳುಗಳ ಬಾಕಿಯಿರುವ ವೇತನವನ್ನು ಈ ಕೂಡಲೇ ಒಂದೇ ಬಾರಿಗೆ ಪಾವತಿಸಬೇಕು. ಅಧಿಕೃತ ಗುರುತಿನ ಪತ್ರ ಒದಗಿಸಬೇಕು. ವರ್ಷಕ್ಕೆ 2 ಜೊತೆ ಸಮವಸ್ತ್ರ, ಅಗತ್ಯ ಎಪ್ರಾನ್‌, ಕೈಗವಸು ಕೊಡಬೇಕು.

ಇವರನ್ನು ಕಾರ್ಮಿಕರೆಂದು ಪರಿಗಣಿಸಿ, ಸೇವಾಭದ್ರತೆ ನೀಡಿ, ಕನಿಷ್ಟ ವೇತನ ಜಾರಿಗೊಳಿಸಬೇಕು. ಆರೋಗ್ಯ ಹಾಗೂ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿ ಹಾಗೂ ಎರಡೂ ಕಡೆಯ ಬಾಬತ್ತನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಜಿಪಂ ಸಿಇಒ ಡಾ| ಬಿ.ಸಿ. ಸತೀಶ್‌ ಮಾತನಾಡಿ, ಎರಡು ದಿನಗಳಲ್ಲಿ ಬಾಕಿ ಇರುವ ವೇತನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಗುರುತಿನ ಪತ್ರ,ಸಮವಸ್ತ್ರಗಳ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜ್ಯೋತಿ ಆಟದ, ಶೋಭಾ ಕೊಟಬಾಗಿ, ರೇಣುಕಾ ಕರಿಗಾರ, ಸುನಿತಾ ಹೊಂಗಲ್‌, ದಿಲ್‌ಶಾದ್‌, ಮಂಜುಳಾ, ಅನುಸೂಯ, ರತ್ನ, ರೇಣುಕಾ ಲಮಾಣಿ, ಲಕ್ಷ್ಮೀ ಮುತ್ತಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next