Advertisement

ಅಕ್ಷರ ದಾಸೋಹ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

05:39 PM Feb 09, 2020 | Suhan S |

ಯಲಬುರ್ಗಾ: ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಪ್ರಜಾಸತ್ತಾತ್ಮಕ, ಸಂವಿಧಾನಾತ್ಮಕ ಹೋರಾಟಗಳ ಮೇಲಿನ ನಿಷೇಧಾಜ್ಞೆ ಮತ್ತು ಬಂಧನ ಕುರಿತು ಆದೇಶದಲ್ಲಿರುವ ಅಸರ್ಮಪಕ ಅಂಶಗಳನ್ನು ಹಿಂಪಡೆಯಲು ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಸಮಿತಿ ಪದಾ ಧಿಕಾರಿಗಳು ತಹಶೀಲ್ದಾರ್‌ ಶ್ರೀಶೈಲ ತಳವಾರ ಅವರಿಗೆ ಮನವಿ ಸಲ್ಲಿಸಿದರು.

Advertisement

ಸಿಪಿಎಂ ಮುಖಂಡ ಶಿವನಗೌಡ ಮಾತನಾಡಿ, ಕಾನೂನು ಬದ್ಧವಾಗಿ ಅಕ್ಷರದಾಸೋಹ ನೌಕರರು ಹೋರಾಟ ಮಾಡುತ್ತಿದ್ದು ವಿನಾಕಾರಣ ನೌಕರರ ಮೇಲೆ ನಿಷೇಧಾಜ್ಞೆ ಹೇರಿದ್ದು, ಸರಿಯಲ್ಲ ಸರಕಾರ ಶೀಘ್ರದಲ್ಲಿ ಆ ನಿರ್ಧಾರ ಹಿಂಪಡೆಯಬೇಕು. 2001ರಿಂದ ಕಡಿಮೆ ವೇತನದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ಕಡಿಮೆ ವೇತನದಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು, ನಿವೃತ್ತಿ ನಂತರ ವೇತನ ನೀಡಬೇಕು. 6:00 ಗಂಟೆ ಕರ್ತವ್ಯಎಂದು ನಮೂದಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸಬೇಕು. ಇಲ್ಲದಿದ್ದರೆ ಬಿಸಿಯೂಟ ನೌಕರರು ರಾಜ್ಯಾದ್ಯಂತಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಶ್ರೀಶೈಲ ತಳವಾರ ಮಾತನಾಡಿ, ತಮ್ಮ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂಬ ಭರವಸೆ ನೀಡಿದರು. ಬಿಸಿಯೂಟ ನೌಕರರಾದ ಪದ್ಮಾವತಿ, ಜಯಶ್ರೀ, ಎಸ್‌ಎಫ್‌ಐ ಮುಖಂಡರಾದ ಎಂ.ಸಿದ್ದಪ್ಪ, ಭೀಮಪ್ಪ ಮೇಟಿ, ವಿರೇಶ ಕುಂಬಾರ, ಪಂಚಾಕ್ಷರಿ, ಪರಶುರಾಮ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next