Advertisement

ಕನ್ನಡ ಸಾಹಿತ್ಯಕ್ಕೆ ಅಕ್ಕಮಹಾದೇವಿ ಕೊಡುಗೆ ಅಪಾರ

01:45 PM Apr 02, 2018 | |

ಔರಾದ: ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ 432 ವಚನಗಳನ್ನು ಬರೆದು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಠಾಣಾಕುಶನೂರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.

Advertisement

ಠಾಣಾಕುಶನೂರಿನ ಮಹಾದೇವ ಮಂದಿರದಲ್ಲಿ ವಿರಕ್ತಮಠ ಹಾಗೂ ವಲಯ ಕನ್ನಡ ಸಾಹಿತ್ಯ ಪರಿಷತ್‌ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಮತ್ತು ಎಡೆಯೂರು ಸಿದ್ದಲಿಂಗೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ಮಹಿಳೆಯರು ಅಕ್ಕಮಹಾದೇವಿಯಂತೆ ಹೆಣ್ಣು ಮಕ್ಕಳ ಏಳ್ಗೆಗಾಗಿ ದುಡಿಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ ನಡೆಯುತ್ತಿರುವ ಶೋಷಣೆ, ಅನ್ಯಾಯ, ಅಕ್ರಮಗಳು ಶಾಶ್ವತವಾಗಿ ನಾಶವಾಗಲು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಶರಣರ, ಸಂತರ ಆಚಾರ ವಿಚಾರ ಅನುಕರಣೆ ಮಾಡಬೇಕು. ಆಗ ಮಾತ್ರ ರೋಗ ಮುಕ್ತ ಹಾಗೂ ಸ್ವಾರ್ಥಮುಕ್ತ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ದೇವರು ಮಾತನಾಡಿ, 12ನೇ ಶತಮಾನದಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳಲ್ಲಿನ ತಾರತಮ್ಯ ಹೋಗಲಾಡಿಸಲು ಶರಣರು ಕೀರ್ತನೆ ಭಜನೆಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು. ಸಾಹಿತಿಗಳು ತಮ್ಮ ಬರವಣಿಗೆ ಮೂಲಕ ಸಮಾಜ ತಿದ್ದುವಂ ಕೆಲಸವನ್ನು ಅಂದಿನ ದಿನಗಳಲ್ಲಿ ಮಾಡಿದ್ದಾರೆ. ಅದರಂತೆ ಇಂದಿನ ಯುವಕರು ಸಂಘ ಸಂಸ್ಥೆಗಳ ಮೂಲಕ ದೇಶದಲ್ಲಿ ನಡೆಯುತ್ತಿರುವ ಅನ್ಯಾಯ ಹಾಗೂ ಅಕ್ರಮಗಳನ್ನು ಅಳಿಸಿ ಹಾಕಬೇಕು. ಆ ಮೂಲಕ ಶರಣರು ಕಂಡ ಬಸವನಾಡು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.

ಯೋಗ ಶಿಕ್ಷಕ ಜಗದೀಶ ಬುಟ್ಟೆ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಶರಣರ ಸಂದೇಶಗಳು ಎಷ್ಟು ಮುಖ್ಯವೋ ಅವುಗಳಂತೆ ಉತ್ತಮ ದೇಹ ನಿರ್ಮಾಣಕ್ಕೆ ಯೋಗ ಅಷ್ಟೆ ಮುಖ್ಯವಾಗಿದ್ದು ಪ್ರತಿಯೊಬ್ಬರು ನಿತ್ಯ ಯೋಗ ಮಾಡಿದರೆ ರೋಗ ಮುಕ್ತವಾಗಿ ಜೀವಿಸಲು ಸಾಧ್ಯವಾಗುತ್ತದೆ ಎಂದರು.

Advertisement

ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ, ಜಾನಪದ ಪರಿಷತ್‌ ತಾಲೂಕು ಅಧ್ಯಕ್ಷ ಸಂಜುಕುಮಾರ ಜುಮ್ಮಾ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಕಾಶ ದೇಶಮುಖ ಹಾಗೂ ಯೋಗ ಶಿಕ್ಷಕ ಬುಟ್ಟೆ ಅವರನ್ನು ಸನ್ಮಾನಿಸಲಾಯಿತು. ಕಮಲನಗರ ಸಿಪಿಐ ದಿಲೀಪಸಾಗರ, ಕಸಾಪ ತಾಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ, ಅಮೃತರಾವ್‌ ಬಿರಾದಾರ, ಶಿವಶರಣಪ್ಪ ವಲ್ಲೆಪುರೆ, ಸತೀಶ ಜೀರ್ಗೆ, ಜಗನ್ನಾಥ ಜಿರ್ಗೆ,
ಶಿವಕುಮಾರ ಸಜ್ಜನ, ಗುರುಲಿಂಗ ಪಸಾರಗೆ, ಉಮಾಕಾಂತ ಬಿರಾದರ, ಶಂಕ್ರೆಪ್ಪ ಪರಶೆಟ್ಟೆ, ಬಾಲಾಜಿ ವಾಘಮೊಡೆ, ಸಿದ್ದಪ್ಪ ಜಿರ್ಗೆ, ಮಲ್ಲಪ್ಪ ಬಿರಾದರ ವೇದಿಕೆಯಲ್ಲಿದ್ದರು. ಶಾಂತಕುಮಾರ ಬೋಚರೆ ನಿರೂಪಿಸಿದರು. ರಾಜಕುಮಾರ ಬೆಣ್ಣೆ ಸ್ವಾಗತಿಸಿದರು. ಬಾಲಾಜಿ ವಾಘಮೊಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next