Advertisement
ಡಿ. 25ರಂದು ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಶನ್‌ನ ಸಭಾಗೃಹದಲ್ಲಿ ನಿರ್ಮಿಸಲಾದ ದಿ| ಆದಿರಾಜ ಜೈನಿ ವೇದಿಕೆಯಲ್ಲಿ ನಡೆದ ಅಖೀಲ ಕರ್ನಾಟಕ ಜೈನ ಸಂಘ ಮುಂಬಯಿ ಸಂಸ್ಥೆಯ ದ್ವಿದಶ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯ ಸಮಾಜಪರ ಯೋಜನೆಗಳು ಸಮಾಜ ಬಾಂಧವರ ಮನೆ-ಮನಗಳಿಗೆ ತಲುಪಿಸುವ ಕಾರ್ಯವನ್ನು ನಾವು ಮಾಡಬೇಕು ಎಂದರು.
Related Articles
Advertisement
ಸಮಾರಂಭದಲ್ಲಿ ಮಹಾನಗರದಲ್ಲಿನ ಪ್ರಸಿದ್ಧ ಶಿಕ್ಷಕರೂ, ಸಂಸ್ಥೆಯ ಹಿರಿಯ ಮುತ್ಸದ್ದಿಗಳಾದ ಜಯರಾಜ ಜೈನ್, ಎಂ. ಸನತ್ ಕುಮಾರ್ ಜೈನ್, ಕು| ನಿವೇದಿತಾ ಜೈನ್ ಮತ್ತು ಮಾ| ಶ್ರೇಯಂಸ್ ಆರ್. ಜೈನ್ ಅವರನ್ನು ಅತಿಥಿಗಳು ಗೌರವಿಸಿದರು. ಸಮಾಜದ ಸುಮಾರು 14 ಜೇಷ್ಠ ನಾಗರಿಕರಿಗೆ, 13 ಮಂದಿ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು. ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಕೊಲ್ಯಾರು ರಾಜು ಶೆಟ್ಟಿ, ರವಿ ಹೆರ್ಮುಂಡೆ, ಭಾಗವತರಾದ ಧೀರಜ್ ರೈ, ಹರೀಶ್ ಶೆಟ್ಟಿ, ಹಿರಿಯ ಕಲಾವಿದ ಅನಂತರಾಜ್, ರತ್ನಾಕರ ಅಧಿಕಾರಿ, ನೇಮಿರಾಜ್ ಜೈನ್ ಡೊಂಬಿವಲಿ, ವತ್ಸಲಾ ಅಧಿಕಾರಿ, ಸುಕುಮಾರ ಜೈನ್ ಅಂಧೇರಿ, ನಲ್ಲೂರು ಧನಂಜಯ ಅಧಿಕಾರಿ, ವೈವಾಹಿಕ ಜೀವನದ ರಜತೋತ್ಸವ ಪೂರೈಸಿದ ಭರತ್‌ಕುಮಾರ್ ವೈದ್ಯ ಮತ್ತು ವಾಣಿ ವೈದ್ಯ ಹಾಗೂ ಪವಕುಮಾರ್ ಜೈನ್ ಮತ್ತು ವಿಮಲಾ ಜೈನ್ ದಂಪತಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ಬೆಳಗ್ಗೆ ನಮೋಕರ್ ಮಂತ್ರ ಮತ್ತು ಪ್ರಾರ್ಥನೆಯೊಂದಿಗೆ ವಾರ್ಷಿಕೋತ್ಸವ ಆರಂಭಗೊಂಡಿತು. ಬಳಿಕ ಸಂಘದ ಸದಸ್ಯರು ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಸಂಘದ ಕಲಾ ವಿಭಾಗದ ಶ್ರೀ ವೀರ ಯಕ್ಷಕಲಾ ಬಳಗದ ಕಲಾವಿದರಿಂದ “ಜಿನ ಭಕ್ತೆ ಆಗ್ನಿಲೆ’ ಯಕ್ಷಗಾನ ಪ್ರದರ್ಶನಗೊಂಡಿತು. ವಾರ್ಷಿಕ ಉತ್ಸವದಲ್ಲಿ ಡಾ| ಶರ್ಮಿಳಾ ಎಂ. ಜೈನ್ ಬರೋಡಾ ಸೇರಿದಂತೆ ಸಂಘದ ಸದಸ್ಯರು, ಶ್ರಾವಕ ಶ್ರಾವಕಿಯರು ಪಾಲ್ಗೊಂಡು ಸಹಕರಿಸಿದರು.
ಜೊತೆ ಕಾರ್ಯದರ್ಶಿಗಳಾದ ರಘುವೀರ್ ಹೆಗ್ಡೆ ಸ್ವಾಗತಿಸಿದರು. ಮಲ್ಲಿಕಾ ಜಯರಾಜ್, ಮಂಜುಳಾ ಜೈನ್ ಮತ್ತು ವಿನೋದಾ ಹೆಗ್ಡೆ ಬಳಗದವರು ಸ್ವಾಗತಗೀತೆಗೈದರು. ಲೋಕನಾಥ್ ಎಸ್. ಜೈನ್ ಮತ್ತು ವಾಣಿ ವೈದ್ಯ ಅತಿಥಿಗಳನ್ನು ಪರಿಚಯಿಸಿದರು. ಮಲ್ಲಿಕಾ ಜೈನ್ ಕ್ರೀಡಾ ವಿಜೇತ ಹಾಗೂ ಪುರಸ್ಕೃತರ ಯಾದಿ ವಾಚಿಸಿದರು. ಸುಜಯಾ ಎಲ್. ಜೈನ್ ಪ್ರಾರ್ಥನೆಗೈದು, ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪವನಂಜಯ ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.
ಚಿತ್ರ – ವರದಿ : ರೋನ್ಸ್ ಬಂಟ್ವಾಳ್