Advertisement

10-15 ವರ್ಷಗಳಲ್ಲಿ ಅಖಂಡ ಭಾರತ ನನಸು: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

10:18 PM Apr 15, 2022 | Team Udayavani |

ಹರಿದ್ವಾರ: ಸ್ವಾಮಿ ವಿವೇಕಾನಂದರು, ಮಹರ್ಷಿ ಅರಬಿಂದೋ ಅವರು ಕಂಡ ಅಖಂಡ ಭಾರತದ ಕನಸು ಮುಂದಿನ 10-15 ವರ್ಷಗಳಲ್ಲೇ ನನಸಾಗಲಿದೆ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಅಖಿಲ ಭಾರತ ಅಖಾಡ ಪರಿಷತ್‌ ಅಧ್ಯಕ್ಷ ಸ್ವಾಮಿ ರವೀಂದ್ರ ಪುರಿ ಅವರು ಹರಿದ್ವಾರದಲ್ಲಿ ಸಾಧು- ಸಂತರನ್ನು ಉದ್ದೇಶಿಸಿ ಮಾತನಾಡುವಾಗ, “ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಮುಂದಿನ 20-25 ವರ್ಷಗಳಲ್ಲಿ ಅಖಂಡ ಭಾರತದ ಕನಸು ನನಸಾಗಲಿದೆ’ ಎಂದಿದ್ದರು. ಇದಕ್ಕೆ ಭಾಗವತ್‌ ಪ್ರತಿಕ್ರಿಯಿಸುತ್ತಾ, “20-25 ವರ್ಷಗಳು ಎನ್ನುವುದು ನನ್ನ ಪ್ರಕಾರ ಬಲು ಸುದೀರ್ಘ‌. ನಾವು ನಮ್ಮ ಕಾರ್ಯದ ವೇಗ ಹೆಚ್ಚಿಸಿದ್ದೇ ಆದಲ್ಲಿ, ಅಖಂಡ ಭಾರತವಾಗಲು 10- 15 ವರ್ಷಗಳು ಸಾಕು. ಈ ಅವಧಿಯೊಳಗೆ ನಾವು ಸ್ವಾಮಿ ವಿವೇಕಾನಂದರ, ಮಹರ್ಷಿ ಅರಬಿಂದೋರ ಕನಸನ್ನು ತಲುಪಲಿದ್ದೇವೆ’ ಎಂದರು.

ಇದನ್ನೂ ಓದಿ:ಮಳೆ ಅವಾಂತರಕ್ಕೆ 10ಕ್ಕೂ ಮನೆಗಳಿಗೆ ಹಾನಿ, ಸಿಡಿಲಿಗೆ ತೆಂಗಿನ ಮರ ಭಸ್ಮ

“ಎಲ್ಲವನ್ನೂ ಒಂದೇ ಸಲ ಸಾಧಿಸಲಾಗದು. ನಮ್ಮ ಬಳಿ ಅಧಿಕಾರವಿಲ್ಲ, ಅದು ಜನತೆಯ ಬಳಿ ಇದೆ. ಅವರಿಗೆ ಅದರ ಮೇಲೆ ಹಿಡಿತವಿದೆ. ಅವರು ಯಾವಾಗ ಸಿದ್ಧರಾಗುತ್ತಾರೋ, ಆಗ ದೇಶದ ಪ್ರತಿ ಪ್ರಜೆಗಳ ಸ್ವಭಾವವೂ ಖಂಡಿತಾ ಬದಲಾಗುತ್ತದೆ. ಸ್ವಾಮಿ ವಿವೇಕಾನಂದರು ಧರ್ಮವೇ ಭಾರತದ ಜೀವಾಳ ಎಂದಿದ್ದರು. ಧರ್ಮದ ಅಭಿವೃದ್ಧಿ ಇಲ್ಲದೆ, ಭಾರತದ ಅಭಿವೃದ್ಧಿ ಅಸಾಧ್ಯ. ಹಿಂದೂರಾಷ್ಟ್ರದ ಕನಸು ಕೈಗೂಡಿದಾಗ ಮಾತ್ರವೇ ಭಾರತ ಪ್ರಗತಿ ಸಾಧ್ಯ’ ಎಂದು ಪ್ರತಿಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next