Advertisement

INDvsENG; ಆರ್ ಸಿಬಿ ಬೌಲರ್ ವೇಗಕ್ಕೆ ಕಂಗಾಲಾದ ಆಂಗ್ಲರು; ಮೊದಲ ಪಂದ್ಯದಲ್ಲೇ ಆಕಾಶ್ ಮಿಂಚು

11:40 AM Feb 23, 2024 | Team Udayavani |

ರಾಂಚಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಶುಕ್ರವಾರ ರಾಂಚಿಯಲ್ಲಿ ಆರಂಭವಾಗಲಿದೆ. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರು.

Advertisement

ಭಾರತದ ಪರ ವೇಗಿ ಆಕಾಶ್ ದೀಪ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ರಾಂಚಿ ಪಂದ್ಯಕ್ಕೆ ವಿಶ್ರಾಂತಿ ನೀಡಿದ ಕಾರಣ ಅವರ ಜಾಗಕ್ಕೆ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡಲಾಗಿದೆ.

ಬೆಂಗಾಳದ ವೇಗಿ ಆಕಾಶ್ ದೀಪ್ ಅವರು ಐಪಿಎಲ್ ನಲ್ಲಿ ಆರ್ ಸಿಬಿ ತಂಡರ ಪರವಾಗಿ ಆಡುತ್ತಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೂರು ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದ ಆಕಾಶ್ ದೀಪ್ ಅವರ ಅದ್ಭುತ ಪ್ರದರ್ಶನವು ಅವರಿಗೆ ಟೆಸ್ಟ್ ತಂಡಕ್ಕೆ ಕರೆ ಸಿಗಲು ಕಾರಣವಾಯಿತು.

ಆರಂಭದಲ್ಲಿಯೇ ಮಿಂಚು

ಕೋಚ್ ದ್ರಾವಿಡ್ ಅವರಿಂದ ಕ್ಯಾಪ್ ಪಡೆದ ಆಕಾಶ್, ಆರಂಭದಲ್ಲಿಯೇ ಮಿಂಚು ಹರಿಸಿದರು. ಕ್ರಾಲಿ ಅವರನ್ನು ಆಕಾಶ್ ಬೌಲ್ಡ್ ಮಾಡಿದರೂ, ಅದರು ನೋ ಬಾಲ್ ಆಗಿತ್ತು. ಆದರೆ ತನ್ನ ಆರನೇ ಓವರ್ ನಲ್ಲಿ ಬೆನ್ ಡಕೆಟ್ ಮತ್ತು ಒಲಿ ಪೋಪ್ ವಿಕೆಟ್ ಕಬಳಿಸಿ ಡ್ರೀಮ್ ಡೆಬ್ಯೂ ಮಾಡಿದರು.

Advertisement

ಆರಂಭದಲ್ಲಿ ತಪ್ಪಿದ್ದ ಕ್ರಾಲಿ ವಿಕೆಟ್ ಕೊನೆಗೂ ಆಕಾಶ್ ಪಾಲಾಯಿತು. 42 ರನ್ ಮಾಡಿದ್ದ ಇಂಗ್ಲೆಂಡ್ ಆರಂಭಿಕ ಆಟಗಾರ ಆಕಾಶ್ ಎಸೆತದಲ್ಲಿ ಬೌಲ್ಡ್ ಆದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಮೊದಲ ಸೆಶನ್ ನಲ್ಲಿಯೇ ಸಂಕಷ್ಟಕ್ಕೆ ಸಿಲುಕಿದೆ. 24.1 ಓವರ್ ಗಳಲ್ಲಿ 112 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿದೆ. ಆಕಾಶ್ ದೀಪ್ ಮೂರು ವಿಕೆಟ್ ಪಡೆದರೆ, ಅಶ್ವಿನ್ ಮತ್ತು ಜಡೇಜಾ ತಲಾ ಒಂದು ವಿಕೆಟ್ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next