Advertisement

ಇನ್ನು ಮುಂದೆ ಸಾಕು ಪ್ರಾಣಿಗಳಿಗೂ ವಿಮಾನ ಯಾನ ಭಾಗ್ಯ

10:38 PM Oct 06, 2022 | Team Udayavani |

ನವದೆಹಲಿ: ನವೆಂಬರ್‌ನಿಂದ ಪ್ರಯಾಣಿಕ ವಿಮಾನ ಮತ್ತು ಕಾರ್ಗೊ ವಿಮಾನದಲ್ಲಿ ಸಾಕು ಪ್ರಾಣಿಗಳ ಸಂಚಾರಕ್ಕೆ ಅಕಾಶ್‌ ಏರ್‌ಲೈನ್ಸ್‌ ಅವಕಾಶ ಕಲ್ಪಿಸಲಿದೆ. ಅಲ್ಲದೇ ಮುಂದಿನ ವಾರಗಳಲ್ಲಿ ಹೊಸ ಮಾರ್ಗಗಳಲ್ಲಿ ವಿಮಾ ಸಂಚಾರ ಆರಂಭಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

Advertisement

ನವೆಂಬರ್‌ನಿಂದ ಸಾಕು ನಾಯಿಗಳು ಮತ್ತು ಸಾಕು ಬೆಕ್ಕುಗಳು ವಿಮಾನದಲ್ಲಿ ಸಂಚರಿಸಬಹುದಾಗಿದೆ. ಇದಕ್ಕಾಗಿ ಅ.15ರಿಂದ ಬುಕ್ಕಿಂಗ್‌ ಆರಂಭವಾಗಲಿದೆ. ಪ್ರತಿ ಸಾಕುಪ್ರಾಣಿಯು ಬೋನಿನಲ್ಲಿ ಇರಿಸಬೇಕಾಗುತ್ತದೆ.

ಪ್ರಯಾಣಿಕ ವಿಮಾನದಲ್ಲಿ ಬೋನ್‌ ಸೇರಿ ತೂಕ ಏಳು ಕೆಜಿ ಮೀರಬಾರದು. ಚೆಕ್‌-ಇನ್‌ನಲ್ಲಿ 32 ಕೆ.ಜಿ. ಮೀರಬಾರದು. ಹೆಚ್ಚಿನ ತೂಕದ ಸಾಕು ಪ್ರಾಣಿಗಳಿಗೆ ಬೇರೆ ವ್ಯವಸ್ಥೆ ಇದೆ ಎಂದು ಅಕಾಶ್‌ ಏರ್‌ಲೈನ್ಸ್‌ನ ಸಹ ಸಂಸ್ಥಾಪಕ ಪ್ರವೀಣ್‌ ಐಯ್ಯರ್‌ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next