Advertisement

ಬಿಹಾರ ಶಾಸಕನ ಮನೆಯಲ್ಲಿ ಸಿಕ್ಕಿತು AK 47 ರೈಫಲ್!

09:05 AM Aug 17, 2019 | Team Udayavani |

ಮೊಕಾಮ: ಪಕ್ಷೇತರ ಶಾಸಕ ಅನಂತ್ ಕುಮಾರ್ ಸಿಂಗ್ ಅವರ ಮನೆಯಿಂದ ಎಕೆ 47 ರೈಫಲ್, ಮ್ಯಾಗಝೀನ್ ಗಳು ಹಾಗೂ ಹಲವಾರು ಜೀವಂತ ಬುಲೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಜೀ ಗ್ಯಾಂಗ್ ಸ್ಟರ್ ಆಗಿರುವ ಅನಂತ್ ಕುಮಾರ್ ಸಿಂಗ್ ಅವರು ಮೊಕಾಮ ಕ್ಷೇತ್ರದಿಂದ ಪಕ್ಷೇತರರಾಗಿ ಪಕ್ಷೇತರರಾಗಿ ಸ್ಪರ್ಧಿಸಿ ಬಿಹಾರ ವಿಧಾನಸಭೆಗೆ ಆಯ್ಕೆಯಾಗಿದ್ದರು.

Advertisement

ನಡ್ವಾ ಗ್ರಾಮದಲ್ಲಿರುವ ಅನಂತ ಸಿಂಗ್ ಅವರ ಪೂರ್ವಜರ ಮನೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇಲ್ಲಿ ಪೊಲೀಸ್ ದಾಳಿ ನಡೆದ ಸಂದರ್ಭದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಶೇಷ ಕಾರ್ಯಾಚರಣೆ ಪಡೆ ಮತ್ತು ಉಗ್ರ ನಿಗ್ರಹ ದಳದ ವಿಶೇಷ ತಂಡಗಳು ಈಗಾಗಲೇ ಘಟನಾ ಸ್ಥಳಕ್ಕೆ ಧಾವಿಸಿವೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನೂ ಸಹ ಶಾಸಕರ ಮನೆಯಲ್ಲಿ ವಿಸ್ತೃತ ಶೋಧಕಾರ್ಯವನ್ನು ಇದೀಗ ಕೈಗೊಂಡಿವೆ.

ಶೋಧಕಾರ್ಯ ಚಾಲನೆಯಲ್ಲಿದ್ದು ಅನಂತ್ ಸಿಂಗ್ ಅವರ ಪೂರ್ವಜರ ಮನೆಗೆ ಇದರಿಂದ ಯಾವುದೇ ಹಾನಿಯುಂಟಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next