Advertisement

ಕುಡಿವ ನೀರಿಗೆ ಹಾಹಾಕಾರ: ಚನ್ನಾಪುರ ಗ್ರಾಮಸ್ಥರು ಹೈರಾಣ

05:27 PM May 29, 2019 | Naveen |

ಅಜ್ಜಂಪುರ: ಇಲ್ಲಿಗೆ ಸಮೀಪದ ಚನ್ನಾಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಗ್ರಾಮಸ್ಥರು ಹೈರಾಣಾಗಿ ಹೋಗಿದ್ದಾರೆ.

Advertisement

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಾದ ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಗ್ರಾಮದ ನಾಲ್ಕು ಕಡೆಗಳಲ್ಲಿ ನೀರಿನ ನಳ ಅಳವಡಿಸಿ, ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ.ಆದರೆ ಅದು, ಕೆಲವೇ ಗಂಟೆಗಳ ಕಾಲ ಮಾತ್ರ ನೀರು ಪೂರೈಸಲಾಗುತ್ತಿದೆ. ಆದರೆ ಇದರಿಂದ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಕೊಳವೆ ಬಾವಿಯಲ್ಲಿ ನೀರು ಆಳಕ್ಕಿಳಿದಿವೆ. ನೀರಿನೊಂದಿಗೆ ಮಣ್ಣು, ಕಸ-ಕಡ್ಡಿಯೂ ಬರುತ್ತಿದೆ. ನೀರು ಮಲಿನವಾಗಿವೆ. ಉಪ್ಪು ನೀರಾದರೂ ಸರಿ, ಕೊಳಚೆ ನೀರು ಬೇಡ. ಹಾಗಾಗಿ ಟ್ಯಾಂಕರ್‌ ಮೂಲಕವಾದರೂ ಶುದ್ಧ ಕುಡಿಯುವ ನೀರು ನೀಡುವಂತೆ ಗ್ರಾಮದ ಶಶಿ ಒತ್ತಾಯಿಸಿದ್ದಾರೆ.

ನೀರು ಕೊಂಡೊಯ್ಯಲು ಬೀರೂರು-ದಾವಣಗೆರೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾದು ಹೋಗಬೇಕಿದೆ. ವೇಗವಾಗಿ ಸಾಗುವ ವಾಹನಗಳ ಸಾಗುವಿಕೆಯ ನಡುವೆಯೂ ನೀರೊತ್ತು ನಡೆಯುವುದು ಸವಾಲಾಗಿದೆ. ಅನಿವಾರ್ಯವಾಗಿ ನೀರು ಕೊಂಡೊಯ್ಯುಬೇಕಾಗಿದೆ ಎಂದು ಶಾರದಮ್ಮ ಅಳಲು ತೋಡಿಕೊಂಡಿದ್ದಾರೆ.

ಬೇಸಿಗೆಯಿಂದ ಈವರೆಗೂ ನೀರಿನ ಸಮಸ್ಯೆ ಕಾಡುತ್ತಲೇ ಇದೆ.ಇಲ್ಲಿನ ಜನಪ್ರತಿನಿಧಿಗಳಿಗೆ ಗ್ರಾಮಸ್ಥರ ನೀರಿನ ಬವಣೆಯ ಸ್ಪಷ್ಟ ಅರಿವಿದೆ. ಆದರೆ ಅವರು ನೋಡಿಯೂ ನೋಡದಂತೆ ಇದ್ದಾರೆ ಎಂದು ಶಿವಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಹಲವು ಬಾರಿ ಪಂಚಾಯಿತಿ ಅಭಿವೃದ್ಧಿಗೆ ಮನವಿ ಮಡಲಾಗಿದೆ.ಆದರೆ ಅವರು ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಜತೆಗೆ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀರಿನ ಸಮಸ್ಯೆಯನ್ನು ಕಿರಿಯ ಅಧಿಕಾರಿಗಳು ಜಿಲ್ಲಾಡಳಿತದ ಗಮನಕ್ಕೆ ತರದೇ ಇರೋದರಿಂದ ಪರಿಹಾರ ಕಾಣುತ್ತಿಲ್ಲ. ಜಿಲ್ಲಾಡಳಿತ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಹಲವು ಕ್ರಮ ಕೈಗೊಂಡ ಬಳಿಕವೂ ಗ್ರಾಮೀಣ ಪ್ರದೇಶಗಳು ನೀರಿನ ಕೊರತೆಯಿಂದ ನರಳುತ್ತಿರುವುದು ವಿಪರ್ಯಾಸವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next