Advertisement

ಅಜ್ಜಾವರ: ಅಗತ್ಯ ವಸ್ತು ಪೂರೈಕೆಗೆ ತಂಡ

09:47 PM Apr 20, 2020 | Sriram |

ಸುಳ್ಯ: ಕೋವಿಡ್‌ 19 ಪಾಸಿಟಿವ್‌ ಪ್ರಕರಣ ಹಿನ್ನೆಲೆಯಲ್ಲಿ ಕಂಟೈನ್‌ಮೆಂಟ್‌ ವಲಯವಾಗಿ ಗುರುತಿಸಲ್ಪಟ್ಟಿರುವ ಅಜ್ಜಾವರ ಗ್ರಾಮದ ಮನೆಗಳಿಗೆ ಅಗತ್ಯ ವಸ್ತು ಪೂರೈಸಲು ತಾಲೂಕು ಆಡಳಿತವು ತಂಡವನ್ನು ರಚಿಸಿದೆ.

Advertisement

ಸೋಂಕು ಪೀಡಿತ ವ್ಯಕ್ತಿಯ ಮನೆ ವ್ಯಾಪ್ತಿಯ 5 ಮನೆಗಳನ್ನು ಕಂಟೈನ್‌ಮೆಂಟ್‌ ವಲಯದೊಳಗೂ ಅಲ್ಲಿಂದ ಒಂದು ಕಿ.ಮೀ. ವ್ಯಾಪ್ತಿಯ 318 ಮನೆಗಳನ್ನು ತೀವ್ರ ಬಫರ್‌ ಝೋನ್‌ ಎಂದೂ ಗುರುತಿಸಲಾಗಿದೆ. ಈ ಎರಡು ವಲಯಗಳಲ್ಲಿ ಜನರು ಮನೆಗಳಿಂದ ಹೊರ ಬರುವಂತಿಲ್ಲ. ಎಲ್ಲ ಅಗತ್ಯ ವಸ್ತುಗಳನ್ನು ಈ ತಂಡವೇ ಪೂರೈಸಲಿದೆ. ಮಂಗಳವಾರದಿಂದಲೇ ಇದು ಜಾರಿಗೆ ಬರುತ್ತದೆ.

ಬೆಳಗ್ಗೆ 8ರಿಂದ ಆರಂಭಗೊಂಡು ಸಂಜೆ ತನಕ ಬೇಡಿಕೆ ಕರೆ ಆಧರಿಸಿ ವಸ್ತುಗಳನ್ನು ವಿತರಿಸಲಾಗುತ್ತದೆ. ಆಯಾ ಮನೆಯವರು ತಾಲೂಕು ಆಡಳಿತ ಗೊತ್ತುಪಡಿಸಿರುವ ಅಂಗಡಿ ಮಾಲಕರಿಗೆ ದೂರವಾಣಿ ಮೂಲಕ ತಿಳಿಸಿದರೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಮನೆಯವರು ಅದಕ್ಕೆ ತಗಲುವ ವೆಚ್ಚವನ್ನು ನೀಡಿ ಸಾಮಗ್ರಿ ಪಡೆದುಕೊಳ್ಳಬೇಕು.

ಸಂಪರ್ಕ ಸಂಖ್ಯೆ
ಸೀಲ್‌ಡೌನ್‌ ವ್ಯಾಪ್ತಿಯ ಪ್ರದೇಶದ ಜನರು ಅಗತ್ಯ ವಸ್ತುಗಳಿಗೆ ಸಂಪರ್ಕಿಸಬೇಕಾದ ತಂಡದ ವಿವರ ಹೀಗಿದೆ. ಹಾಲು-ದಿನಸಿ ಸಾಮಗ್ರಿ- 9483075258 (ಮೋಹನ್‌), ತರಕಾರಿ – 7337796838 (ಲತೀಫ್‌), ಔಷಧ – 9480064077 (ಸಿಟಿ ಮೆಡಿಕಲ್‌), ಕೋಳಿ ಮಾಂಸ – 9844479400 (ದಿನೇಶ್‌), ಮೀನು – 9008978904 (ಸೀ ಫುಡ್‌) ಸಂಪರ್ಕಿಸಬಹುದು. ತಾಲೂಕು ಕಂಟ್ರೋಲ್‌ ರೂಂ ನಂಬರ್‌ 08257-230330 ಅಥವಾ ಸ್ಥಳೀಯ ಗ್ರಾ.ಪಂ. ಅಧಿಕಾರಿ, ಸಿಬಂದಿಗೆ ಕರೆ ಮಾಡಿ ವಿಚಾರಿಸಬಹುದು.

ನಿಯಂತ್ರಕರ ಕೊಠಡಿ
ಅಜ್ಜಾವರ ಗ್ರಾ.ಪಂ. ಕಚೇರಿ ಕಟ್ಟಡದ ಮೇಲ್ಭಾಗದಲ್ಲಿ ಘಟಕ ನಿಯಂತ್ರಣ ಕಚೇರಿ ಇದೆ. ಘಟಕ ನಿಯಂತ್ರಣಾಧಿಕಾರಿ, ಆರೋಗ್ಯ ಇಲಾಖೆ ಸಿಬಂದಿಯನ್ನು ನಿಯೋಜಿಸಲಾಗಿದೆ.ಸೀಲ್‌ಡೌನ್‌ ಮಾಡಿರುವ ಪ್ರದೇಶಗಳನ್ನು ಸೋಮವಾರ ತಹಶೀಲ್ದಾರ್‌ ಅನಂತಶಂಕರ, ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಎಸ್‌ಐ ಹರೀಶ್‌ ಪರಿಶೀಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next