Advertisement

ಅಜ್ಜಾವರ: ಅಶಕ್ತ ಕುಟುಂಬಕ್ಕೆ ಇಂದು ಮನೆ ಹಸ್ತಾಂತರ

12:49 AM Sep 21, 2019 | mahesh |

ಅಜ್ಜಾವರ: ಸುಳ್ಯ ತಹಶೀಲ್ದಾರ್‌ ಕುಂಞಿ ಅಹ್ಮದ್‌ ನೇತೃತ್ವದಲ್ಲಿ ಅಶಕ್ತ ಕುಟುಂಬಕ್ಕೆ ದಾನಿಗಳು ಹಾಗೂ ಸಂಘಟನೆಗಳ ನೆರವಿನಿಂದ ಅಜ್ಜಾವರದಲ್ಲಿ ನಿರ್ಮಿಸಲಾದ ಮನೆಯನ್ನು ಸೆ. 21ರಂದು ಹಸ್ತಾಂತರಿಸಲಾಗುವುದು.

Advertisement

ಅಜ್ಜಾವರ ಗ್ರಾಮದ ಅಡ³ಂಗಾಯ ಕಲ್ತಡ್ಕ ಪರಿಸರದಲ್ಲಿ ಮಹಮ್ಮದ್‌ ಕುಂಞಿ ಕುಟುಂಬ ಸಣ್ಣ ಗುಡಿಸಲಿಗೆ ಟಾರ್ಪಲ್‌ ಹಾಕಿ ವಾಸವಾಗಿತ್ತು. ಏಳು ಸದಸ್ಯರಿರುವ ಈ ಕುಟುಂಬಕ್ಕೆ 20 ವರ್ಷಗಳಿಂದ ಈ ಜೋಪಡಿಯೇ ಆಧಾರವಾಗಿತ್ತು. ಈ ಸಲದ ಭಾರೀ ಮಳೆಗೆ ಗುಡಿಸಲು ಸೋರುತ್ತಿತ್ತು. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ದಿಕ್ಕೇ ತೋಚಂದಾಗಿತ್ತು.

ಅಧಾರವಾಯಿತು “ಬೆಳಕು’
ಅಶಕ್ತ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಯೋಜನೆ ಮಹಮ್ಮದ್‌ ಕುಂಞಿ ಕುಟುಂಬಕ್ಕೆ ಆಸರೆಯಾಗಿದೆ. ಕಳೆದ ತಿಂಗಳು ಅಡ³ಂಗಾಯ ನಿವಾಸಿ ರಾಮಣ್ಣ ನಾಯ್ಕ ಕುಟುಂಬಕ್ಕೆ ಬೆಳಕು ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗಿತ್ತು. ಮಹಮ್ಮದ್‌ ಕುಂಞಿ ಅವರ ಪುತ್ರ ಅಪಘಾತವೊಂದರ ಬಳಿಕ ಅಶಕ್ತರಾಗಿದ್ದಾರೆ. ಈ ಕುಟುಂಬಕ್ಕೆ ಯಾವುದೇ ದಾಖಲೆಗಳಿಲ್ಲದ ಕಾರಣ ಸರಕಾರದ ಸವಲತ್ತು ಸಿಕ್ಕಿರಲಿಲ್ಲ. ಮನೆ ನಂಬರ್‌ ಇಲ್ಲದೆ ಪಡಿತರ ಚೀಟಿ, ಆಧಾರ್‌ ಮೊದಲಾದವೂ ಮರೀಚಿಕೆಯಾಗಿದ್ದವು. ವಸತಿ ಯೋಜನೆ ಸೌಲಭ್ಯಕ್ಕೂ ಇದೇ ಅಡ್ಡಿಯಾಗಿತ್ತು. ಈಗ ಆ ಕುಟುಂಬವೂ ಬೆಳಕು ಕಾಣುವಂತಾಗಿದೆ.

ದಾನಿ, ಸಂಘಟನೆಗಳ ನೆರವು
ಅಜ್ಜಾವರ ಗ್ರಾಮಸ್ಥರು ಅಡ³ಂಗಾಯದ ಈ ಕುಟುಂಬದ ಕುರಿತು ತಹಶೀಲ್ದಾರ್‌ಗೆ
ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಲೋಕೇಶ್‌ ಗುಡ್ಡಮನೆ ಹಾಗೂ ವಿನೋದ್‌ ಲಸ್ರಾದೊ ನೆರವಿನಿಂದ ಶೀಘ್ರವಾಗಿ ಮನೆ ನಿರ್ಮಿಸಲಾಗಿದೆ. ಸುಳ್ಯದ ಅಂಗಡಿ ಮಾಲಕರು ಕಟ್ಟಡ ಸಾಮಗ್ರಿ ಒದಗಿಸಿದ್ದಾರೆ.

ದಾನಿಗಳು ಸಿಮೆಂಟ್‌, ಕಲ್ಲು, ಇಟ್ಟಿಗೆ, ಶೀಟ್‌, ಪೈಂಟ್‌ ಇತ್ಯಾದಿ ನೀಡಿದ್ದಾರೆ. ಉಬರಡ್ಕ ಯುವಕ ಮಂಡಲ ನೆರವಿನ ಹಸ್ತ ಚಾಚಿದೆ. ಯುವ ಬ್ರಿಗೇಡ್‌, ಎಸ್ಕೆಎಸ್ಸೆಸ್ಸೆಫ್ ವಿಖಾಯ, ಎಸ್ಸೆಸ್ಸೆಫ್ ಸಂಘಟನೆಗಳ ಶ್ರಮದಾನದಿಂದ ಕೇವಲ 18 ದಿನಗಳಲ್ಲಿ 2.25 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣವಾಗಿದೆ.

Advertisement

ಬೆಳಕು-3 ಬೆಳ್ಳಾರೆಯಲ್ಲಿ
ಬೆಳಕು ಯೋಜನೆಯ ಮೂರನೆ ಮನೆಯನ್ನು ಬೆಳ್ಳಾರೆಯ ಅಶಕ್ತ ಕುಟುಂಬವೊಂದಕ್ಕೆ ನಿರ್ಮಿಸಲಾಗುವುದು. ಮನೆಗೆ ಬೇಕಾಗಿರುವ ಕಟ್ಟಡ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಶನಿವಾರವೇ ಕೆಲಸ ಆರಂಭವಾಗಲಿದೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

ಇಂದು ಮನೆ ಹಸ್ತಾಂತರ
ಕಲ್ತಡ್ಕದಲ್ಲಿ ನಿರ್ಮಾಣವಾಗಿರುವ “ಬೆಳಕು’ ಮನೆಯ ಹಸ್ತಾಂತರ ಸೆ. 21ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಶಾಸಕ ಎಸ್‌. ಅಂಗಾರ ಅವರು ಮನೆಯನ್ನು ಮಹಮ್ಮದ್‌ ಕುಂಞಿ ಕುಟುಂಬಕ್ಕೆ ಹಸ್ತಾಂತರಿಸಲಿದ್ದಾರೆ. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ತಹಶೀಲ್ದಾರ್‌ ಕುಂಞಿ ಅಹಮ್ಮದ್‌ ಭಾಗವಹಿಸುವರು.

ಸಹಕಾರ ಮಾದರಿ
ಮಹಮ್ಮದ್‌ ಅವರ ಕುಟುಂಬವು ಟಾರ್ಪಲ್‌ ಹಾಕಿ ಸಣ್ಣ ಗುಡಿಸಲಿನಲ್ಲಿ ವಾಸವಾಗಿತ್ತು. ಅದು ಹಾನಿಯಾಗಿ ಯಾವುದೇ ಸವಲತ್ತುಗಳಿಲ್ಲದೆ ಮನೆ ನಿರ್ಮಿಸಲು ಅಶಕ್ತವಾಗಿದ್ದ ಬಗ್ಗೆ ನನ್ನ ಗಮನಕ್ಕೆ ಬಂದಾಗ ದಾನಿಗಳನ್ನು ಸಂಪರ್ಕಿಸಿದೆವು. ಇಲ್ಲಿನ ಜನರ ಸಹಕಾರ ಶ್ಲಾಘನೀಯ. ಶೀಘ್ರವಾಗಿ ಬೇಕಾದ ಎಲ್ಲ ಸಾಮಗ್ರಿಗಳನ್ನು ಕೊಟ್ಟು ಸಹಕರಿಸಿದ್ದಾರೆ.
– ಕುಂಞಿ ಅಹ್ಮದ್‌, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next