ಚಿಕ್ಕಮಗಳೂರು: ಮಳೆ ಕೊರತೆಯಿಂದ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನಾಶವಾದ ಹಿನ್ನೆಲೆ ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.
ಅಜ್ಜಂಪುರ ತಾಲೂಕಿನ ಚಿಕ್ಕನ ಲ್ಲೂರು ಗ್ರಾಮದ ಪರಮೇಶ್ವರಪ್ಪ (52) ಆತ್ಮಹತ್ಯೆಗೆ ಶರಣಾದ ರೈತ.
ಮೂರು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಬ್ಯಾಂಕ್ ಸಾಲ ಸೇರಿದಂತೆ ಖಾಸಗಿ ವ್ಯಕ್ತಿಗಳಿಂದ 5 ಲಕ್ಷ ಸಾಲ ರೂ. ಮಾಡಿಕೊಂಡಿದ್ದರು.ಒಂದು ಕಡೆ ಸಾಲ ಮತ್ತೊಂದು ಕಡೆ ಈರುಳ್ಳಿ ಬೆಳೆ ನಾಶವಾದ ಹಿನ್ನೆಲೆ ಮನನೊಂದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಾಫಿನಾಡಿನಲ್ಲಿ ಇಂದು ಆತ್ಮಹತ್ಯೆಗೆ ಶರಣಾದ ರೈತ ಸೇರಿದಂತೆ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ಗಿರಿಯಾಪುರದ ರೈತ ಸತೀಶ್ ಆತ್ಮಹತ್ಯೆಗೆ ಶರಣಾಗಿದ್ದರು.
ಅಜ್ಜಂಪುರ ತಾಲೂಕು ಚಿಕ್ಕನಲ್ಲೂರು ಗ್ರಾಮದ ರೈತ ಪರಮೇಶ್ವರಪ್ಪ ಆತ್ಮಹತ್ಯೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.