ಅಜ್ಜಂಪುರ: ಭದ್ರಾ ಮೇಲ್ದಂಡೆ ಯೋಜನೆಗಾಗಿ ಭೂ ಸ್ವಾಧೀನಪಡಿಸಿಕೊಳ್ಳುವ ಪ್ರತಿ ಎಕರೆಗೆ 40 ಲಕ್ಷ ರೂ.ಪರಿಹಾರ ನೀಡುವಂತೆ ಸಭೆಯಲ್ಲಿ ಕೈಗೊಂಡಿರುವ ನಿರ್ಣಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಅಲ್ಲದೇ, ಇತರ ಯೋಜನೆಗಳಡಿ ಭೂ ಸ್ವಾ ಧೀನಕ್ಕೆ ಸರ್ಕಾರ ನಿಗದಿಗೊಳಿಸಿರುವ ಪರಿಹಾರಕ್ಕಿಂತ ಹೆಚ್ಚಿನ ಪ್ರಮಾಣದ ಹಣ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಶಾಸಕ ಡಿ.ಎಸ್.ಸುರೇಶ್ ಭರವಸೆ ನೀಡಿದರು.
ಅಜ್ಜಂಪುರ ಸಮೀಪದ ಗೌರಾಪುರದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆ ಕಾಮಗಾರಿಗಾಗಿ ಭೂ-ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಏಕರೂಪದಲ್ಲಿ ಪರಿಹಾರ ನಿಗ ದಿಪಡಿಸುವ ಸಂಬಂಧ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಉಪವಿಭಾಗಾಧಿಕಾರಿ ರೂಪಾ ಮಾತನಾಡಿ, ಭೂಮಿಯ ಮೇಲ್ಮೆ„ಲಕ್ಷಣ, ಬೆಳೆ, ರೈತರ ಪರಿಸ್ಥಿತಿ, ಬೆಲೆಗೆ ಅನುಗುಣವಾಗಿ ಪರಿಹಾರದ ಮೊತ್ತ ನಿಗ ದಿಗೊಳ್ಳಲಿದೆ. ಇಲ್ಲಿನ ಭೂಸ್ವಾಧೀನಕ್ಕೆ ಏಕರೂಪದ ಬೆಲೆ ನಿಗ ದಿಗೆ ಸಭೆ ಕರೆಯಲಾಗಿದೆ. ಎಲ್ಲರಿಂದಲೂ ಒಪ್ಪಿಗೆ ವ್ಯಕ್ತವಾದರೆ ಸರಿ. ಇಲ್ಲವಾದರೆ, ಕಾಯ್ದೆಗೆ ಅನುಗುಣವಾಗಿ ಪರಿಹಾರ ನೀಡಲಾಗುವುದು. ಒಂದೆರಡು ದಿನಗಳಲ್ಲಿ ಭೂ ಸ್ವಾಧೀನ ಅಧಿಕಾರಿಗಳು ಭೇಟಿ ನೀಡುವರು. ಆಗ ಅವರಿಗೆ ನಿಖರ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಹೆಬ್ಬೂರು ನಾಗೇಂದ್ರಪ್ಪ ಮಾತನಾಡಿ, ಇಲ್ಲಿನ ಭೂಮಿ ಉತ್ಕೃಷ್ಠವಾಗಿದೆ. ಉತ್ತಮ ಫಸಲು ಬರುತ್ತಿತ್ತು. ಜೀವನಕ್ಕೆ ಆಧಾರವಾಗಿತ್ತು. ನೀರಾವರಿ ಯೋಜನೆಗಾಗಿ ಅದನ್ನು ಕಳೆದುಕೊಳ್ಳುತ್ತಿದ್ದೇವೆ. ಭೂಮಿಗೆ ಅಧಿಕ ಪರಿಹಾರ ನಿಗದಿಗೊಳಿಸಬೇಕೆಂದು ಕೋರಿದರು.
ಸೊಲ್ಲಾಪುರದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ದೇವರಾಜು, ಸ್ವಾಧೀನಕ್ಕೆ ಒಳಪಡುತ್ತಿರುವ ಭೂಮಿಗೆ ಪರಿಹಾರದ ಮೊತ್ತವಾಗಿ ಕನಿಷ್ಠ 40 ಲಕ್ಷ ರೂ. ನೀಡಿ ಎಂದು ಮನವಿ ಮಾಡಿದರು. ಅದಕ್ಕೆ ಚಪ್ಪಾಳೆ ಮೂಲಕ ಇತರ ರೈತರು ಒಪ್ಪಿಗೆ ಸೂಚಿಸಿದರು.
ತಹಶೀಲ್ದಾರ್ ವಿಶ್ವೇಶ್ವರರೆಡ್ಡಿ, ಕಂದಾಯ ಅಧಿಕಾರಿ ಕೃಷ್ಣಮೂರ್ತಿ, ಭದ್ರಾ ಮೇಲ್ದಂಡೆ ಎಇಇ ಸುರೇಶ್ ಹಾಗೂ ಭೂ ಸ್ವಾ ಧೀನಗೊಳ್ಳುತ್ತಿರುವ ಹೆಬ್ಬೂರು, ಸೊಲ್ಲಾಪುರ, ಕಾಟಿಗನರೆ, ಸೌತನಹಳ್ಳಿ, ಚಿಣ್ಣಾಪುರ, ಗೌರಾಪುರ, ಕಾರೇಹಳ್ಳಿ ಜಮೀನು ಮಾಲಿಕರು, ಅಧಿಕಾರಿಗಳು ಪಾಲ್ಗೊಂಡಿದ್ದರು.