Advertisement

ವಾಹನ ಚಾಲಕರಿಗೆ ಕ್ವಾರಂಟೈನ್‌

04:15 PM Apr 24, 2020 | Naveen |

ಅಜ್ಜಂಪುರ: ಹೊರ ಜಿಲ್ಲೆ ಅಥವಾ ರಾಜ್ಯಕ್ಕೆ ಹೋಗಿ ಹಿಂತಿರುಗಿದ ಸರಕು ವಾಹನ ಚಾಲಕರು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ತಹಶೀಲ್ದಾರ್‌ ವಿಶ್ವೇಶ್ವರ ರೆಡ್ಡಿ ತಿಳಿಸಿದರು.

Advertisement

ಅಜ್ಜಂಪುರದ ಜಾಮೀಯಾ ಮಸೀದಿ ಮುಂಭಾಗ ಗುರುವಾರ ನಡೆದ ಲಾರಿ ಮಾಲೀಕರ ಮತ್ತು ಚಾಲಕರ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್‌-19 ರೋಗ ಪ್ರಕರಣಗಳು ಕೆಲವು ಜಿಲ್ಲೆ ಮತ್ತು ರಾಜ್ಯಗಳಲ್ಲಿ ಸಕ್ರಿಯವಾಗಿವೆ. ಇಂತಹ ಕಡೆಗೆ ಹೋಗಿ ಹಿಂತಿರುಗುವ ವಾಹನ ಚಾಲಕರಿಗೆ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಇದ್ದು, ಮುಂದಿನ ಚಾಲನೆಗೆ ತೆರಳಬೇಕು ಎಂದರು.

ಪಿಎಸ್‌ಐ ಬಸವರಾಜು ಮಾತನಾಡಿ, ಸರಕು ವಾಹನಗಳಿಗೆ ಮಾತ್ರ ಲಾಕ್‌ ಡೌನ್‌ ಸಡಿಲತೆ ಇದೆ. ಆದರೆ ಸರಕು ವಾಹನಗಳಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅವಕಾಶವಿಲ್ಲ. ಇದನ್ನು ಉಲ್ಲಂಘಿಸಿದರೆ ವಾಹನ ವಶಕ್ಕೆ ಪಡೆದು, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ತಾಲೂಕು ಮುಸ್ಲಿಂ ಸಮಾಜದ ಅಧ್ಯಕ್ಷ ಮಸೂದ್‌ ಅಹಮದ್‌ ಮಾತನಾಡಿ, ಕೋವಿಡ್‌-19 ಹರಡುವ ಭೀತಿ ಹಿನ್ನೆಲೆಯಲ್ಲಿ ಅನ್ಯ ಜಿಲ್ಲೆ, ರಾಜ್ಯಗಳಿಗೆ ಸರಕು ವಾಹನಗಳ ಸಂಚಾರ ರದ್ದುಗೊಳಿಸಿ ಎಂದು ತಹಶೀಲ್ದಾರರಿಗೆ ಮನವಿ ಮಾಡಿದರು. ಪಂಚಾಯತ್‌ ಸದಸ್ಯ ಮುಜೀಬ್‌ ಉರ್‌ ರೆಹಮಾನ್‌, ರಾಘವೇಂದ್ರ, ಲಾರಿ ಮಾಲೀಕ ರಾಜು ಮತ್ತು ಚಾಲಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next