ಮುಂಬೈ: ಬಿಜೆಪಿ – ಶಿವಸೇನಾ ಸರ್ಕಾರವನ್ನು ಸೇರಿಕೊಂಡ ಎರಡು ದಿನದ ಬಳಿಕ ಇದೀಗ ನೂತನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಹೊಸ ಎನ್ ಸಿಪಿ ಕಚೇರಿ ತೆರೆದಿದ್ದಾರೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯು ಇದೀಗ ತನ್ನ ಬಳಿಯಲ್ಲಿದೆ ಎಂದು ಅಜಿತ್ ಪವಾರ್ ಹೇಳಿಕೊಂಡಿದ್ದು, ಮುಂಬೈನಲ್ಲಿ ನೂತನ ಕಚೇರಿ ತೆರೆದಿದ್ದಾರೆ.
ಅಜಿತ್ ಪವಾರ್ ಅವರು ರಾಜ್ಯ ಸಚಿವಾಲಯದ ಬಳಿ ಹೊಸ ಎನ್‌ಸಿಪಿ ಕಚೇರಿಯನ್ನು ಉದ್ಘಾಟಿಸಲು ಸಜ್ಜಾಗಿದ್ದರು. ಆದರೆ ಕೀಲಿಗಳು ನಾಪತ್ತೆಯಾದ ಕಾರಣ ಬೀಗ ಒಡೆಯಲಾಯಿತು.
ಬಂಗಲೆಯೊಳಗೆ ಪ್ರವೇಶಿಸಿ ಉದ್ಘಾಟನೆಗೆ ಸಿದ್ಧತೆ ನಡೆಸುವಂತೆ ಬೀಗ ಒಡೆದು ಹಾಕಲು ಯತ್ನಿಸಿದರಾದರೂ ಒಳಗಿದ್ದ ಕೊಠಡಿಗಳ ಬಾಗಿಲು ಹಾಕಲಾಗಿತ್ತು. ಲೋಕೋಪಯೋಗಿ ಇಲಾಖೆಯು (ಪಿಡಬ್ಲ್ಯುಡಿ) ಸಮಯಕ್ಕೆ ಸರಿಯಾಗಿ ಕೀಗಳನ್ನು ನೀಡಲು ವಿಫಲವಾಗಿದೆ ಎಂದು ಪಕ್ಷದ ಕಾರ್ಯಕರ್ತರು ಆರೋಪಿಸಿದರು.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಅಜಿತ್ ಪವಾರ್ ಗುಂಪಿನ ನಾಯಕ ಪ್ರಫುಲ್ ಪಟೇಲ್ ಸೋಮವಾರ ಜಂಟಿ ಸಮಾವೇಶದಲ್ಲಿ ಲೋಕಸಭೆಯ ಸಂಸದ ಸುನೀಲ್ ತಟ್ಕರೆ ಅವರನ್ನು ಮಹಾರಾಷ್ಟ್ರದ ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಘೋಷಿಸಿದರು.
ಇದನ್ನೂ ಓದಿ:ವಿದ್ಯುತ್ ಸಂಪರ್ಕ ಕಡಿತಕ್ಕೆ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಲೈನ್ ಮ್ಯಾನ್
ಜಂಟಿ ಸಮಾವೇಶದಲ್ಲಿ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ “ನಾವು ಜಯಂತ್ ಪಾಟೀಲ್ ಅವರನ್ನು ಅವರ ಜವಾಬ್ದಾರಿಗಳಿಂದ ಮುಕ್ತಗೊಳಿಸುತ್ತಿದ್ದೇವೆ ಮತ್ತು ಅವರ ಸ್ಥಾನದಲ್ಲಿ ನಾನು ಸುನೀಲ್ ತಟ್ಕರೆ ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಅಧ್ಯಕ್ಷರನ್ನಾಗಿ ನೇಮಿಸುತ್ತಿದ್ದೇನೆ. ಸುನೀಲ್ ತಟ್ಕರೆ ಅವರು ಸಂಘಟನಾ ಬದಲಾವಣೆಗಳನ್ನು ಮಾಡುವ ಅಧಿಕಾರವನ್ನು ಹೊಂದಿದ್ದಾರೆ” ಎಂದರು.