ಮುಂಬಯಿ: ಮಹಾರಾಷ್ಟ್ರ ಚುನಾವಣೆ ಯಲ್ಲಿ ಬಿಟ್‌ಕಾಯಿನ್ ಹಣ ಬಳಕೆಯಾ ಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅಜಿತ್ ಪವಾರ್ “ಆಡಿಯೋದಲ್ಲಿನ ಧ್ವನಿ ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ಅವರದ್ದೇ’ ಎಂದಿದ್ದಾರೆ. ಹೀಗಾಗಿ, ಬುಧವಾರ ವಿವಾದ ಮತ್ತಷ್ಟು ತಾರಕಕ್ಕೆ ಏರಿದೆ.
ಬಾರಾಮತಿಯಲ್ಲಿ ಮಾತನಾಡಿ, “ನಾನಾ ಪಟೋಲೆಯನ್ನು ಹಿಂದಿನಿಂದ ಬಲ್ಲೆ. ಆ ಧ್ವನಿಮುದ್ರಿಕೆ ಯಲ್ಲಿರುವ ಧ್ವನಿ ಸುಪ್ರಿಯಾ ಹಾಗೂ ಪಟೋಲೆಯದ್ದೇ ಆಗಿದೆ’ ಎಂದಿದ್ದಾರೆ.
ಮಾನನಷ್ಟ ಕೇಸು: ಅದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದೆ ಸುಪ್ರಿಯಾ ಸುಳೆ, “ಅಜಿತ್ ಪವಾರ್ ಏನು ಬೇಕಾದರೂ ಮಾತನಾಡುತ್ತಾರೆ’ ಎಂದಿದ್ದಾರೆ. ಇದೇ ವೇಳೆ, ತಮ್ಮ ವಿರುದ್ಧ ಆರೋಪ ಮಾಡಿದ ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ವಿರುದ್ಧ ಮಾನನಷ್ಟ ಕೇಸು ಹಾಕುತ್ತೇನೆ’ ಎಂದು ಹೇಳಿದ್ದಾರೆ. ವಿವಾದದ ಬಗ್ಗೆ ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಸ್ಪಷ್ಟನೆ ನೀಡಲಿ ಎಂದು ಬಿಜೆಪಿ ಒತ್ತಾಯಿಸಿದೆ.
ಇ.ಡಿ. ದಾಳಿ: ಈ ನಡುವೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಆಡಿಟ್ ಕಂಪೆನಿಯೊಂದರ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇದನ್ನೂ ಓದಿ: Maharashtra Polls: ಘರ್ಷಣೆ, ವಾಗ್ವಾದ ನಡುವೆ ಮಹಾರಾಷ್ಟ್ರ ಮತ ಕುಸಿತ