Advertisement

ರನ್ ಗಳಿಸದಿದ್ದರೂ ಅಜಿಂಕ್ಯಾ ರಹಾನೆ ಸಂಭ್ರಮದಿಂದ ಕುಣಿದಾಡಿದ್ಯಾಕೆ ?

09:45 AM Oct 06, 2019 | Team Udayavani |

ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ  ಟೀಂ ಇಂಡಿಯಾ ಉಪ ನಾಯಕ ಅಜಿಂಕ್ಯಾ ರೆಹಾನೆ ಬ್ಯಾಟಿಂಗ್ ನಲ್ಲಿ ಯಶಸ್ವಿಯಾಗದೇ ಇದ್ದರೂ ಸಂಭ್ರಮದಿಂದ ತೇಲಾಡುತ್ತಿದ್ದಾರೆ. ಕಾರಣ ಏನು ಗೊತ್ತಾ? ಅಜಿಂಕ್ಯಾ ಪತ್ನಿ ರಾಧಿಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Advertisement

2014ರಲ್ಲಿ ಅಜಿಂಕ್ಯಾ ರಹಾನೆ- ರಾಧಿಕಾ ಧೋಪಾವ್ಕರ್ ವಿವಾಹವಾಗಿದ್ದರು. ಈಗ ಮೊದಲ ಮಗುವಿನ ಸಂಭ್ರಮದಲ್ಲಿದ್ದಾರೆ.

ಹರ್ಭಜನ್ ಸಿಂಗ್ ಟ್ವೀಟ್ ಮೂಲಕ ರಹಾನೆ ದಂಪತಿಗೆ ಶುಭ ಕೋರಿದ್ದು, ಅಪ್ಪನಾಗುತ್ತಿರುವ ಅಜಿಂಕ್ಯಾ ರಹಾನೆಗೆ ಶುಭಾಶಯಗಳು. ಮಗು ಮತ್ತು ತಾಯಿ ಕ್ಷೇಮವಾಗಿದ್ದಾರೆಂದು ಭಾವಿಸಿದ್ದೇನೆ. ಜೀವನದ ಸಂತಸದ ಕ್ಷಣಗಳು ಇಂದಿನಿಂದ ಆರಂಭವಾಗಿದೆ ಅಜ್ಜು ಎಂದು ಟರ್ಬನೇಟರ್ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next