Advertisement
ರಜತ ಮಹೋತ್ಸವದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸೆ. 2ರಂದು ಬೆಳಗ್ಗೆ ಗಂಟೆ 8ಕ್ಕೆ ದೇವತಾ ಪ್ರಾರ್ಥನೆ, ವಿಗ್ರಹ ಪ್ರತಿಷ್ಠಾಪನೆ, 8.45ಕ್ಕೆ ಗಣೇಶೋತ್ಸವದ ಉದ್ಘಾಟನೆ, ಗಂಟೆ 9ಕ್ಕೆ ಗಣಪತಿಹೋಮ, 10.30ರಿಂದ ಹರಿಕಥಾ ಕಾಲಕ್ಷೇಪ ಗಣೇಶ ಮಹಿಮೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಗಂಟೆ 1ರಿಂದ ಶ್ರೀ ರಾಮಮಂದಿರದಲ್ಲಿ ಅನ್ನಸಂತರ್ಪಣೆ, ಅಪರಾಹ್ನ 2.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಸಂಜೆ ಗಂಟೆ 3.30ರಿಂದ ವಿವಿಧ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿ, ರಾತ್ರಿ ಗಂಟೆ 6.30ಕ್ಕೆ ರಂಗಪೂಜೆ, ರಾತ್ರಿ ಗಂಟೆ 7ರಿಂದ ಧಾರ್ಮಿಕ ಸಭೆ, ರಾತ್ರಿ ಗಂಟೆ 8.30ರಿಂದ ನೃತ್ಯ ನಿನಾದ ನಡೆಯಲಿದೆ.
Related Articles
Advertisement
ಸೆ. 6ರಂದು ಬೆಳಗ್ಗೆ 8.30ಕ್ಕೆ ಗಣಪತಿಹೋಮ, 9.30ಕ್ಕೆ ಭಕ್ತಿಗಾನ ಸುಧಾ, 12.30ಕ್ಕೆ ಮಹಾಪೂಜೆ, 1ರಿಂದ ಶ್ರೀ ರಾಮಮಂದಿರದಲ್ಲಿ ಅನ್ನಸಂತರ್ಪಣೆ, ಮಧ್ಯಾಹ್ನ 2ಕ್ಕೆ ಸಮಾರೋಪ ಸಮಾರಂಭ, 3.30ಕ್ಕೆ ವಿಸರ್ಜನೆ ಪೂಜೆ, 4ರಿಂದ ವಿವಿಧ ವಾಧ್ಯಘೋಷಗಳೊಂದಿಗೆ ಪುರಮೆರವಣಿಗೆ ಅಂಡಾರಿನ ಮುದೆಲ್ಕಡಿ ಹೊಳೆಯಲ್ಲಿ ವಿಗ್ರಹ ಜಲಸ್ತಂಭನ ನಡೆಯಲಿದೆ.
ಪದಾಧಿಕಾರಿಗಳುಗೌರವ ಅಧ್ಯಕ್ಷರಾಗಿ ವಿ.ಸುನಿಲ್ ಕುಮಾರ್, ಭಾಸ್ಕರ ಶೆಟ್ಟಿ ಕುಂಠಿನಿ, ಅಧ್ಯಕ್ಷರಾಗಿ ವಿಜಯ ಶೆಟ್ಟಿ, ಕಾರ್ಯದರ್ಶಿ ಕೆ. ಪ್ರಶಾಂತ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ.