Advertisement

ಅಜೆಕಾರು: ದರ್ಬುಜೆ- ದೆಪ್ಪುತ್ತೆ ಸೇತುವೆ ಕಾಮಗಾರಿ ಪ್ರಗತಿಯಲ್ಲಿ

11:50 PM Jun 08, 2019 | Team Udayavani |

ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್‌ ಹಾಗೂ ಮರ್ಣೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ದರ್ಬುಜೆ ಮತ್ತು ದೆಪ್ಪುತ್ತೆ ಭಾಗವನ್ನು ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು ಪಿಲ್ಲರ್‌ ಕಾರ್ಯ ಪೂರ್ಣಗೊಂಡಿದೆ.

Advertisement

ದೆಪ್ಪುತ್ತೆ ದರ್ಬುಜೆ ಭಾಗದ ನಾಗರಿಕರು ಹಲವು ದಶಕಗಳಿಂದ ಈ ಸೇತುವೆ ನಿರ್ಮಾಣಕ್ಕಾಗಿ ನಿರಂತರ ಹೋರಾಟ ನಡೆಸಿದ್ದರು. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನಿರಂತರ ಮನವಿ ಮಾಡುತ್ತಾ ಬಂದಿದ್ದು, ಕಳೆದ ಜನವರಿ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭಗೊಂಡಿತ್ತು.

1 ಕೋಟಿ ರೂ. ಮಂಜೂರು

ಸಿಆರ್‌ಎಫ್ ಫ‌ಂಡ್‌ನಿಂದ ಸೇತುವೆಗೆ 1 ಕೋಟಿ ರೂ. ಮಂಜೂರಾಗಿದ್ದು ಸೇತುವೆಯ ಪಿಲ್ಲರ್‌ ಕಾಮಗಾರಿ ಪೂರ್ಣಗೊಂಡಿದೆ. ಮಳೆಗಾಲದ ಸಮಯದಲ್ಲಿ ಸೇತುವೆಯ ಇತರ ಕಾಮಗಾರಿಗಳನ್ನು ನಡೆಸಲಾಗುತ್ತದೆ ಎಂದು ಗುತ್ತಿಗೆದಾರರು ಹೇಳಿದ್ದಾರೆ.

ಈ ಸೇತುವೆ ನಿರ್ಮಾಣದಿಂದಾಗಿ ದೆಪ್ಪುತ್ತೆ ದರ್ಬುಜೆ ಭಾಗದ ಜನತೆ ಕುಕ್ಕುಜೆ ಪೆರ್ಡೂರು ಹಾಗೂ ಅಜೆಕಾರು ಕಾರ್ಕಳಕ್ಕೆ ಸುತ್ತುಬಳಸಿ ಪ್ರಯಾಣಿಸುವ ಸಂಕಷ್ಟ ತಪ್ಪಲಿದೆ.

Advertisement

ಈ ಮಳೆಗಾಲಕ್ಕೆ ಕಷ್ಟ

ಇನ್ನೂ ಹಲವು ಕಾಮಗಾರಿಗಳು ನಡೆಯ ಬೇಕಿರುವುದರಿಂದ ಈ ಬಾರಿಯ ಮಳೆಗಾಲಕ್ಕೆ ಸೇತುವೆ ಕಾಮಗಾರಿ ಮುಗಿಯುವುದು ಕಷ್ಟವಾಗಿದೆ. ಕಾಮಗಾರಿ ಕಾಮಗಾರಿ ಪೂರ್ಣಗೊಳ್ಳಲು ಒಂದು ವರ್ಷದ ಅವಕಾಶವಿರುವುದರಿಂದ ಮುಂದಿನ ಮಳೆಗಾಲಕ್ಕೆ ಕಾಮಗಾರಿ ಪೂರ್ಣಗೊಂಡು ಸ್ಥಳೀಯರ ಸಂಕಷ್ಟಕ್ಕೆ ಮುಕ್ತಿ ಸಿಗುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next