Advertisement
ಅ. 19ರ ಮಧ್ಯರಾತ್ರಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಪತಿಯ ಊಟದಲ್ಲಿ ನಿರಂತರವಾಗಿ ವಿಷ ಪದಾರ್ಥವನ್ನು ಸ್ವಲ್ಪ-ಸ್ವಲ್ಪವೇ ಬೆರೆಸಿ ಕೊಲೆಗೆ ಯತ್ನಿಸಿದ್ದರು.
ಆರೋಪಿ ದಿಲೀಪ್ ಹೆಗ್ಡೆ ರಾತ್ರಿ ವೇಳೆ ಅಜೆಕಾರಿನ ದೆಪ್ಪುತ್ತೆಗೆ ವಾಹನದಲ್ಲಿ ಬಂದಿದ್ದ. ಆತ ಬಂದು ಹೋಗಿರುವ ರಸ್ತೆ ಬದಿಗಳಲ್ಲಿನ ಸಿಸಿ ಕೆಮರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.ಪ್ರತಿಮಾಳಿಗೆ ವಿಷ ವಸ್ತು ಪೂರೈಕೆ ಮಾಡಿದ್ದ ಸ್ಥಳಗಳಲ್ಲಿನ ಸಿಸಿ ಕೆಮರಾಗಳಲ್ಲೂ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಪ್ರಬಲ ಸಾಕ್ಷ್ಯಗಳ ಸಂಗ್ರಹದಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.
Related Articles
ಅಂತ್ಯಸಂಸ್ಕಾರ ನಡೆದು ಹೋಗಿರುವ ಕಾರಣ ಗುರುತು ಪತ್ತೆಗಾಗಿ ಅ. 28ರಂದು ಮೃತ ಬಾಲಕೃಷ್ಣ ಅವರ ದೇಹದ ಎಲುಬಿನ ತುಂಡುಗಳನ್ನು ಮನೆಯವರಿಂದ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿದೆ. ಶೀಘ್ರ ವರದಿ ಬರಬಹುದು ಎನ್ನುವ ಆಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
Advertisement
ಪೊಲೀಸರ ನಡೆಯೇ ಕುತೂಹಲ!ಪತ್ನಿಯೇ ಈ ಕೊಲೆಯ ಸೂತ್ರಧಾರೆಯಾಗಿರುವ ಕಾರಣ ಈ ಪ್ರಕರಣ ಅಚ್ಚರಿಯ ಬೆಳವಣಿಗೆಗಳಿಗೆ ಕಾರಣವಾಗಿತ್ತು. ಆರೋಪಿ ಪ್ರತಿಮಾಳ ಸಹೋದರ ಕೊಲೆ ಪ್ರಕರಣವನ್ನು ಬೆಳಕಿಗೆ ತಂದಿದ್ದರು. ಆನಂತರದಲ್ಲಿ ಪ್ರತಿಮಾ ಮತ್ತು ದಿಲೀಪ್ ಹೆಗ್ಡೆಯನ್ನು ಪೊಲೀಸರು ಬಂಧಿಸಿದ್ದರು. ಅನಂತರದಲ್ಲಿ ಪೊಲೀಸರ ನಡೆಯೇ ಕುತೂಹಲಕಾರಿಯಾಗಿದೆ. ಯಾಕೆಂದರೆ ಪೊಲೀಸರು ಪ್ರತಿಮಾಳನ್ನು ಕೋರ್ಟಿಗೆ ಹಾಜರುಪಡಿಸಿದ್ದು, ಪೊಲೀಸ್ ಕಸ್ಟಡಿಗೆ ಪಡೆದಿಲ್ಲ. ದಿಲೀಪ್ ಹೆಗ್ಡೆಯನ್ನು 3 ದಿನ ಪೊಲೀಸರು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದ್ದು ಕೆಲವೊಂದು ಸಾಕ್ಷ್ಯಗಳನ್ನು ಕ್ರೋಢೀಕರಿಸಿದ್ದಾರೆ. ಮನೆಮಂದಿಯಲ್ಲೂ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ದಿಲೀಪ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ಕುತೂಹಲವೆಂದರೆ ಎ1 ಆರೋಪಿ ಪ್ರತಿಮಾಳನ್ನು ವಿಚಾರಣೆಗಾಗಿ ಪೊಲೀಸರು ಅವರ ಕಸ್ಟಡಿಗೇ ಪಡೆದುಕೊಂಡಿಲ್ಲ. ಪೊಲೀಸರ ಈ ನಡೆಯಿಂದ ಸಾರ್ವಜನಿಕರಲ್ಲಿ ಬಗೆ-ಬಗೆಯ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ ಪ್ರಕರಣವನ್ನು ಬಿಗಿಗೊಳಿಸುವ ಸಲುವಾಗಿ ಪ್ರಾಥಮಿಕ ಸಾಕ್ಷ್ಯಗಳನ್ನು ಕಲೆ ಹಾಕಿ, ಅನಂತರದಲ್ಲಿ ಪ್ರತಿಮಾಳನ್ನು ಪೊಲೀಸರು ಕಸ್ಟಡಿಗೆ ಪಡೆದು ಸಮಗ್ರ ವಿಚಾರಣೆ ನಡೆಸಲಿದ್ದಾರೆ. ಅಗತ್ಯ ಬಿದ್ದಲ್ಲಿ ಇಬ್ಬರನ್ನೂ ಒಟ್ಟಿಗೇ ಕಸ್ಟಡಿಗೆ ಪಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.