ಟಾಷ್ಕೆಂಟ್: ಭಾರತದ ವೇಟ್ಲಿಫ್ಟರ್ ಅಜಯ್ ಸಿಂಗ್ (81 ಕೆಜಿ) ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ಗೆ ನೇರ ಪ್ರವೇಶ ಪಡೆದರು.
ಅಜಯ್ ಸಿಂಗ್ ಒಟ್ಟು 322 ಕೆಜಿ ಭಾರ ಎತ್ತಿದರು. ಸ್ನ್ಯಾಚ್ನಲ್ಲಿ 147 ಕೆಜಿ ಭಾರ ಎತ್ತಿ ನೂತನ ರಾಷ್ಟ್ರೀಯ ದಾಖಲೆಯನ್ನೂ ನಿರ್ಮಿಸಿದರು.
ಕ್ಲೀನ್ ಆ್ಯಂಡ್ ಜರ್ಕ್ ನಲ್ಲಿ 175 ಕೆಜಿ ಎತ್ತಿದರು.
ಅಜಯ್ ಸಿಂಗ್ 2022ರ ಕಾಮನ್ವೆಲ್ತ್ ಗೇಮ್ಸ್ಗೆ ಆಯ್ಕೆಯಾದ ಭಾರತದ 3ನೇ ವೇಟ್ಲಿಫ್ಟರ್.
ಇದಕ್ಕೂ ಮೊದಲು
ಲಾಲ್ರಿನ್ನುಂಗ ಮತ್ತು ಅಚಿಂತ ಶೆವುಲಿ ಅರ್ಹತೆ ಪಡೆದಿದ್ದರು.
ಇದನ್ನೂ ಓದಿ:ಅಭ್ಯಾಸದ ವೇಳೆ ರೋಹಿತ್ ಶರ್ಮ ಕೈಗೆ ಏಟು : ಪಾಂಚಾಲ್ಗೆ ಬುಲಾವ್