Advertisement

ಜೇರಟಗಿಯಲ್ಲಿ ಶಾಸಕ ಅಜಯಸಿಂಗ್ ಗ್ರಾಮ ವಾಸ್ತವ್ಯ : ಆರತಿ ಮಾಡಿ ಸ್ವಾಗತಿಸಿದ ಗ್ರಾಮಸ್ಥರು

11:33 PM Jan 28, 2021 | Team Udayavani |

ಕಲಬುರಗಿ: ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳದೇ ಜನ್ಮ ದಿನಾಚರಣೆ ಅಂಗವಾಗಿ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ತಾಲೂಕಿನ ಕೊನೆ ಹಳ್ಳಿ ಜೇರಟಗಿ ಗ್ರಾಮದಲ್ಲಿ ಗುರುವಾರ ರಾತ್ರಿ ವಾಸ್ಯವ್ಯ ಹೂಡಿದರು.

Advertisement

ಕಲಬುರಗಿ- ವಿಜಯಪುರ ನಡುವಿನ ರಾಷ್ತ್ರೀಯ ಹೆದ್ದಾರಿ ಮೇಲಿರುವ ರಾತ್ರಿ 9;10 ರ ಸುಮಾರಿಗೆ ಜೇರಟಗಿ ಗ್ರಾಮಕ್ಕೆ ಆಗಮಿಸಿದ ಶಾಸಕರನ್ನು ಡೊಳ್ಳು, ಬಾಜಿ ಭಜಂತ್ರಿಗಳಿಂದ ಸ್ವಾಗತ ಕೋರಲಾಯಿತು.

ಜೇರಟಗಿ ಗ್ರಾಮದ ಮೋದಿನಸಾಬ ಹಣಗಿಕಟ್ಟಿ ಅವರ ಮನೆಯಲ್ಲಿ ಊಟ ಮಾಡಿ ಕುಟುಂಬದ ಮಾಹಿತಿ ಪಡೆದುಕೊಂಡ ಶಾಸಕರು ತದನಂತರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಅವಲೋಕಿಸಿದರು. ನಂತರ ಮೋದಿನಸಾಬ ಮನೆಯಲ್ಲಿ ತಂಗಿದರು.

ಕೇವಲ ಮೂರು ಎಕರೆ ಹೊಲ ಹೊಂದಿರುವ ಮೋದಿನಸಾಬ ಮನೆಯು ಹಿಂದಿನ ಭಾಗ ಭಾಗಶ: ಕಳೆದ ಮಳೆಯಲ್ಲಿ ಬಿದ್ದಿದ್ದು, ಈಗ ಪತ್ರಾಸ ಹಾಕಲಾಗಿದೆ.

ಇದನ್ನೂ ಓದಿ:ನಿಂತಿದ್ದ ಲಾರಿಗೆ ಬಸ್ ಡಿಕ್ಕಿ : ಲಾರಿ ಕ್ಲಿನರ್ ಗೆ ಗಂಭೀರ ಗಾಯ, ಬಸ್ ಪ್ರಯಾಣಿಕರು ಪಾರು

Advertisement

ಮೋದಿನಸಾಬ ಹೊಲದ ಬೆಳೆಯು ಮಳೆಯಿಂದ ಹಾನಿಯಾಗಿದ್ದು, ನಾಲ್ಕು ಜನ ಮಕ್ಕಳಿದ್ದಾರೆ. ಶಾಸಕರ ವಾಸ್ತವ್ಯಕ್ಕಾಗಿ ಶೌಚಾಲಯ ನಿರ್ಮಿಸಲಾಗಿದೆ. ಒಟ್ಟಾರೆ ಜೇರಟಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.

ಮನೆಯ ಮಾಲೀಕ ಮೋದಿನ್‍ಸಾಬ್ ಇದರಿಂದ ತುಂಬ ಖುಷಿಯಲ್ಲಿದ್ದಾರೆ. ಶಾಸಕರು ತಮ್ಮೂರಿಗೆ ಬಂದು ಮನೆಯಲ್ಲೇ ಮೊಕ್ಕಾಂ ಮಾಡುತ್ತಿದ್ದಾರಲ್ಲ ಎಂದು ಸಂತಸದಲ್ಲಿದ್ದಾರೆ. ತಮ್ಮ ಮನೆಯಲ್ಲೇ ವಾಸ್ತವ್ಯ ಹೂಡೋದನ್ನ ತುಂಬು ಹೃದಯದಿಂದ ಸ್ವಾಗತಿಸಿರುವ ಮೋದಿನ್ ಸಾಬ್ ಶಾಸಕರು ಊರಿಗೆ ಬಂದು ಜನರ ಸಮಸ್ಯೆ ಆಲಿಸುವುದೇ ತಮಗೆ ಖುಷಿ ಎಂದಿದ್ದಾರೆ.

ಜನ್ಮ ದಿನ: ಜ. 29 ರಂದು ಶಾಸಕ ಡಾ. ಅಜಯಸಿಂಗ್ 47 ನೇ ಜನ್ಮ ದಿನ. ಶುಕ್ರವಾರ ದಂದು ಅಜಯ್ ಸಿಂಗ್ ಶೋಷಿತ ಸಮುದಾಯದ ಕೂಲಿ ಕಾರ್ಮಿಕ ರಮೇಶ ಹೊಸ್ಮನಿ ಇವರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಲಿದ್ದಾರೆ. ರಮೇಶ ಕೂಲಿ ಕಾರ್ಮಿಕನಾದರೂ ಶಾಸಕರಿಗಾಗಿ ಸಂತೋಷದಿಂದ ಉಪಹಾರ ಸಿದ್ಧಪಡಿಸೋದಾಗಿ ಹೇಳಿದ್ದು ಇದು ತನಗೆ ದೊರಕಿರುವ ಅವಕಾಶ ಎಂದಿದ್ದಾನೆ.

ಅಲ್ಪಸಂಖ್ಯಾತರ ಮನೆಯಲ್ಲಿ ವಾಸ್ತವ್ಯ, ಪಜಾ ಸಮುದಾಯದವರ ಮನೆಯಲ್ಲಿ ಉಪಹಾರ ಮಾಡುವ ಮೂಲಕ ತಾವು ಸಾಮರಸ್ಯದ ಸಂದೇಶ ಸಾರುತ್ತಿರೋದಾಗಿಯೂ ಡಾ. ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಡ್ರಗ್ಸ್‌ ಕೇಸ್‌ನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಿದ್ದಾರೆ: ಇಂದ್ರಜಿತ್ ಸ್ಫೋಟಕ ಮಾತು

ಪಾದಯಾತ್ರೆ- ಗ್ರಾಮ ಪ್ರದಕ್ಷಿಣೆ

ಜ. 29 ರಂದು ಜೇರಟಗಿ ಗ್ರಾಮ ಪ್ರದಕ್ಷಿಣೆ ಮಾಡುವ ಶಾಸಕರು ಪಾದಯಾತ್ರೆಯಲ್ಲಿಯೇ ಊರನ್ನು ಸುತ್ತಿ , ಪ್ರದಕ್ಷಿಣೆ ಮೂಲಕ ಜನರನ್ನು ಭೇಟಿ ಮಾಡಲಿದ್ದಾರೆ. ಇದಾದ ನಂತರ ಊರಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಅಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಿದ್ದಾರೆ. ಇದರಂಗವಾಗಿ ಆಸ್ಪತ್ರೆಯ ಪರಿಸರದಲ್ಲಿ ಕಸ ಗೂಡಿಸುವ ಮೂಲಕ ಸ್ವಚ್ಚತಾ ಅಭಿಯಾನದ ಸಂದೇಶ ಸಾರಲಿದ್ದಾರೆ.

ಇಲ್ಲಿಂದ ಮತ್ತೆ ಮೋದೀನ್‍ಸಾಬ್ ಮನೆಗೆ ಹೋಗಿ ಬೆಳಗಿನ ಸ್ನಾನಾದಿಗಳನ್ನು ಪೂರೈಸಿ ಅಲ್ಲಿಂದ ಊರಲ್ಲಿರುವ ರೇವಣಸಿದ್ದೇಶ್ವರ ಹಾಗೂ ಚೆನ್ನಬಸವೇಶ್ವರ ಮಂದಿರಗಳಿಗೆ ತೆರಳಿ ದೇವರ ದರುಶನ ಪಡೆದ ನಂತರ ರಮೇಶ ಹೊಸ್ಮನಿ ಇವರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಲಿದ್ದಾರೆ.

ಶಾಸಕರು ಮೊದೀನಸಾಬ ಮನೆಯಲ್ಲಿ ಖಡಕ್ ಬಿಳಿ ಜೋಳ ರೊಟ್ಟಿ, ಸಜ್ಜೆ ರೊಟ್ಟಿ, ಬದನೆ ಕಾಯಿ ಪಲ್ಯೆ, ಹಿಂಡಿ ಪಲ್ಯೆ, ಕಾಳು ಪಲ್ಯೆ, ಮೊಸರು ಹಿಂಡಿ, ಅನ್ನ ಸಾರು ಸವಿದರು.

ಶಾಸಕರ ಜತೆಯಲ್ಲಿ ತಹಸೀಲ್ದಾರ ಸಿದ್ದ ರಾಯ ಭಾಸಗಿ, ತಾಲೂಕಾ ವೈದ್ಯಾಧಿಕಾರಿ ಡಾ. ಸಿದ್ದು ಪಾಟೀಲ, ತಾಲೂಕಾ ಪಂಚಾಯತ್ ಇಓ ವಿಲಾಸ, ಮುಖಂಡರಾದ ರಾಜಶೇಖರ ಸಿರಿ, ಅಣ್ಣಾರಾಯ ನಿಷ್ಢಿ ದೇಶಮುಖ,ಹಣಮಂತ ಭೂಸನೂರ, ಗಿರೀಶ ವಿಜಯಾಪುರ, ಭೂಬಾ ತಿವಾರಿ, ಮಲ್ಲಿಕಾರ್ಜುನ ಬೂದಿಹಾಳ, ವ, ಧರ್ಮ ಜೋಗುರ ಸೇರಿದಂತೆ ಮುಂತಾದವರಿದ್ದರು.

ಇದನ್ನೂ ಓದಿ:ಗೂಗಲ್‌ ಮ್ಯಾಪ್‌ನಲ್ಲಿ ಕನ್ನಡ ಸೇರಿದಂತೆ ದೇಶದ 10 ಭಾಷೆಗಳಲ್ಲಿ ಸ್ಥಳಗಳ ಹೆಸರು

ಪ್ರತಿ ತಿಂಗಳು ಗ್ರಾಮ ವಾಸ್ತವ್ಯ

ಜನ್ಮ ದಿನದಂದು ಆರಂಭಿಸಲಾಗಿರುವ ಈ ಗ್ರಾಮ ವಾಸ್ತವ್ಯ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಶಾಸಕ ಡಾ. ಅಜಯಸಿಂಗ್ ತಿಳಿಸಿದರು.

ಮೋದಿನಸಾಬ ಮನೆಯಲ್ಲಿ ಊಟ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು ಒಂದು ಗ್ರಾಮದಲ್ಲಿ ಕಡ್ಡಾಯವಾಗಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ಈ ವಾಸ್ತವ್ಯ ದಿಂದ ಗ್ರಾಮದ ಸಮಸ್ಯೆ ಏನು ಎಂಬುದು ತಮಗೆ ಮನವರಿಕೆ ಯಾಗುತ್ತದೆ. ಅನುದಾನ ತರಲಾಗುತ್ತದೆ .ಆದರೆ ಯಾವ ಕಾರ್ಯಕ್ಕೆ ಬಳಸಬೇಕೆಂಬುದು ಇದರಿಂದ ಗೊತ್ತಾಗುತ್ತದೆ. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬಹುದಾಗಿದೆ. ಇನ್ನೂ ದೊಡ್ಡ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಗ್ರಾಮ ವಾಸ್ತವ್ಯ ಮಾಡಿದ ತಕ್ಷಣ ಎಲ್ಲ ಸಮಸ್ಯೆ ಬಗೆಹರಿಯತ್ತವೆ ಎಂಬುದಿಲ್ಲ. ಹಳ್ಳಿ- ಹಳ್ಳಿ ನಡುವೆ ಸಮಸ್ಯೆ ಬೇರೆ- ಬೇರೆಯಾಗಿರುತ್ತವೆ. ಇದನ್ನೆಲ್ಲ ವಾಸ್ತವ್ಯ ದಿಂದ ಗೊತ್ತಾಗುತ್ತದೆಯಲ್ಲದೇ ಅನುದಾನ ಯಾವುದಕ್ಕೆ ಹೆಚ್ಚಿನ ನಿಟ್ಟಿನಲ್ಲಿ ಬಳಸಬೇಕೆಂಬುದನ್ನು ಗೊತ್ತಾಗುತ್ತದೆ ಎಂದು ವಿವರಣೆ ನೀಡಿದರು.

ಶಾಸಕರನ್ನು ನಿಲ್ಲಿಸಿ ಸಮಸ್ಯೆ ತೋಡಿಕೊಂಡ ಮಹಿಳೆಯರು

ಶಾಸಕ ಡಾ. ಅಜಯಸಿಂಗ್ ಅವರು ಮೋದಿನಸಾಬ ಮನೆಯಲ್ಲಿ ಊಟ ಮುಗಿಸಿ ಹೊರ ಬರುತ್ತಿದ್ದಂತೆ ಗ್ರಾಮದ ಮಹಿಳೆಯರು, ಊಳ್ಳವರ ಮಾತ್ರ ಕಡೆ ನೋಡಬೇಡಿ, ಬಡವರ ಕಡೆ ನೋಡಿ, ರೇಷನ ಸರಿಯಾಗಿ ಸಿಕ್ತಾ ಇಲ್ಲ. ಮೊನ್ನೆಯ ಮಳ್ಯಾಗ ಮನೆ ಬಿದ್ದು ಹೊರಗೆ ಬಿದ್ದೇವೆ. ವಿಧವಾ ಮಾಸಾಶನ ಸಹ ಸಿಕ್ತಾ ಇಲ್ಲ ಎಂದು ಗೋಳು ತೋಡಿಕೊಂಡರು.

ಮಹಿಳೆಯರು ಶೌಚಾಲಯ ಇಲ್ಲದಿದ್ದಕ್ಕೆ ಪಡಬಾರದ ಕಷ್ಡ ಅನುಭವಿಸುತ್ತಿದ್ದೇವೆ ಎಂದು ಸಮಸ್ಯೆಗಳನ್ನು ಮಹಿಳೆ ಯರು ನಿವೇದಿಸಿಕೊಂಡರು.

ಶಾಸಕರು, ತಮ್ಮ ಸಮಸ್ಯೆಗಳನ್ನು ಖುದ್ದಾಗಿ ಅರಿಯಲು ತಮ್ಮ ಬಳಿ ಬಂದಿದ್ದೇನೆ. ಹಂತ- ಹಂತವಾಗಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಮಹಿಳೆಯರನ್ನು ಸಮಾಧಾನಪಡಿಸಿದರು.

ಸಣ್ಣ ಹಳ್ಳಿಯಲ್ಲಿ ವಾಸ್ತವ್ಯ ಮಾಡಲಿ

ಶಾಸಕರು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ಸಣ್ಣ ಹಳ್ಳಿ ಮಾಹೂರದಂತಹ ಹಳ್ಳಿಯಲ್ಲಿ ವಾಸ್ತವ್ಯ ಮಾಡಿದರೆ ಅರ್ಥ ಬರುತ್ತದೆ.

ಮಾಹೂರ ಸಣ್ಣ ಗ್ರಾಮ ಕಳೆದ ಪ್ರವಾಹ ಸಂದರ್ಬದಲ್ಲಿ ಇಡೀ ಗ್ರಾಮವೇ ತೊರೆದಿತ್ತು. ಗ್ರಾಮ ಸ್ಥಳಾಂತರ ಬೇಡಿಕೆ ಹಾಗೆ ನನೆಗುದಿಗೆ ಬಿದ್ದಿದೆ. ಸಣ್ಣ ಗ್ರಾಮವೆಂದು ಅಧಿಕಾರಿಗಳು ಸಹ ಬರೋದಿಲ್ಲ. ಶಾಸಕರು ವಾಸ್ತವ್ಯ ಮಾಡಿದರೆ ಗ್ರಾಮದ ಸಣ್ಣ ಪುಟ್ಟ ಸಮಸ್ಯೆಗಳು ಬಗೆಹರಿಯಬಹುದಾಗಿದೆ.

– ಮಲ್ಲಯ್ಯ ಸ್ವಾಮಿ ಹಿರೇಮಠ, ಮಾಹೂರ ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next