Advertisement

ಬರ್ತ್‌ಡೇ ಸಂಭ್ರಮದಲ್ಲಿ ಅಜೇಯ್‌: ಲವ್‌ ಯೂ ರಚ್ಚು ಹೊಸ ಚಿತ್ರಕ್ಕೆ ಚಾಲನೆ

09:16 AM Jan 24, 2021 | Team Udayavani |

ಸ್ಯಾಂಡಲ್‌ವುಡ್‌ ಕೃಷ್ಣ ಖ್ಯಾತಿಯ ನಟ ಅಜೇಯ್‌ ರಾವ್‌ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಕೊರೊನಾ ಆತಂಕದಿಂದ ಈ ಬಾರಿ ಅಜೇಯ್‌ ರಾವ್‌ ತಮ್ಮ ಕುಟುಂಬ ವರ್ಗ ಮತ್ತು ಸ್ನೇಹಿತರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಅಜೇಯ್‌ ರಾವ್‌ ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸಚಿತ್ರ “ಲವ್‌ ಯೂ ರಚ್ಚು’ ಮುಹೂರ್ತ ಕೂಡ ಇಂದು ನೆರವೇರಲಿದೆ.

Advertisement

“ಆರ್ಟ್‌ ಆಫ್ ಲೀವಿಂಗ್‌’ನ ರವಿಶಂಕರ್‌ ಗುರೂಜೀ “ಲವ್‌ ಯೂ ರಚ್ಚು’ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ “ಲವ್‌ ಯೂ ರಚ್ಚು’ ಚಿತ್ರದ ಫ‌ಸ್ಟ್ ಲುಕ್‌ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ. ರೊಮ್ಯಾಂಟಿಕ್‌-ಲವ್‌ ಕಥಾಹಂದರ ಹೊಂದಿರುವ “ಲವ್‌ ಯೂ ರಚ್ಚು’ ಚಿತ್ರದಲ್ಲಿ ಅಜೇಯ್‌ ರಾವ್‌ ಅವರಿಗೆ ರಚಿತಾ ರಾವ್‌ ನಾಯಕಿಯಾಗಿ ಜೋಡಿಯಾಗುತ್ತಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ‘ಕೃಷ್ಣ’ನಾಗಿ ಪ್ರೇಕ್ಷಕರ ಮನಗೆದ್ದ ಅಜೇಯ್ ರಾವ್ ಫೋಟೋ ಗ್ಯಾಲರಿ

“ಜಿ ಸಿನಿಮಾಸ್‌’ ಬ್ಯಾನರ್‌ನಲ್ಲಿ ಗುರು ದೇಶಪಾಂಡೆ ನಿರ್ಮಿಸುತ್ತಿರುವ “ಲವ್‌ ಯೂ ರಚ್ಚು’ ಚಿತ್ರಕ್ಕೆ ಶಂಕರ್‌ ಎಸ್‌. ರಾಜ್‌ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಶಶಾಂಕ್‌ ಕಥೆ, ಚಿತ್ರಕಥೆ, ಸಂಭಾಷಣೆಯಿದೆ. ಚಿತ್ರದ ಹಾಡುಗಳಿಗೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಕ್ರೇಜಿಮೈಂಡ್‌ ಶ್ರೀ ಸಂಕಲನವಿದೆ. ಉಳಿದಂತೆ “ಲವ್‌ ಯೂ ರಚ್ಚು’ ಚಿತ್ರದ ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿಗಳು ಮುಹೂರ್ತದ ಬಳಿಕ ಗೊತ್ತಾಗುವ ಸಾಧ್ಯತೆ ಇದೆ.

ಸದ್ಯ ಅಜೇಯ್‌ ರಾವ್‌ ಅಭಿನಯದ “ಕೃಷ್ಣ ಟಾಕೀಸ್‌’ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರತಂಡ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಈಗಾಗಲೇ “ಕೃಷ್ಣ ಟಾಕೀಸ್‌’ ಚಿತ್ರದ ಎರಡು ಹಾಡುಗಳನ್ನು ಬಿಡುಗಡೆಗೊಳಿಸಿರುವ ಚಿತ್ರತಂಡ, ಸಿನಿಪ್ರಿಯರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

Advertisement

ಇದೇ ಏಪ್ರಿಲ್‌ ವೇಳೆಗೆ “ಕೃಷ್ಟ ಟಾಕೀಸ್‌’ ಚಿತ್ರವನ್ನು ಥಿಯೇಟರ್‌ಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಇನ್ನು ಬರ್ತ್‌ಡೇ ಸಂಭ್ರಮದಲ್ಲಿರುವ ನಟ ಕೃಷ್ಣ ಅಜೇಯ್‌ ರಾವ್‌ ಅವರಿಗೆ ಚಿತ್ರರಂಗದ ಅನೇಕ ಗಣ್ಯರು ಮತ್ತು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next