Advertisement

ಅಜೇಯ್‌ ರಾವ್‌ ಈಗ “ಶೋಕಿವಾಲ’

08:09 AM Jun 09, 2020 | Lakshmi GovindaRaj |

ನಟ ಅಜೇಯ್‌ ರಾವ್‌ ಅಭಿನಯದ “ಶೋಕಿವಾಲ’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್‌ ಕಾರ್ಯ ಮಾತ್ರ ಬಾಕಿ ಇತ್ತು. ಆದರೆ ಇದೀಗ ಚಿತ್ರತಂಡ ಸದ್ದಿಲ್ಲದೇ ಡಬ್ಬಿಂಗ್‌ ಮುಗಿಸಿದೆ. ಹೌದು! ಈ ಹಿಂದೆ ಲಾಕ್‌ ಡೌನ್‌ನಿಂದಾಗಿ ಯಾವುದೇ ಸಿನಿಮಾಗಳ ಚಿತ್ರೀಕರಣ ನಡೆದಿರಲಿಲ್ಲ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಂಡು ಡಬ್ಬಿಂಗ್‌ ಮಾಡಿದರೆ ತಪ್ಪಿಲ್ಲ ಎಂಬ ಕಾರಣಕ್ಕೆ ಶೋಕಿವಾಲ ಚಿತ್ರತಂಡ ಡಬ್ಬಿಂಗ್‌ ಮಾಡಿ ಮುಗಿಸಿದೆ.

Advertisement

ಈ ಮೂಲಕ ಸಿನಿಮಾದ ಪ್ರಮುಖ ಕೆಲಸ ಸಂಪೂರ್ಣವಾಗಿದೆ. ಈ ಚಿತ್ರವನ್ನು ಜಾಕಿ ತಿಮ್ಮೇಗೌಡ ನಿರ್ದೇಶಿಸುತ್ತಿದ್ದು, ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದಿರುವ ತಿಮ್ಮೇಗೌಡ ಅವರಿಗೆ ಶೋಕಿವಾಲ ಮೇಲೆ ಇನ್ನಿಲ್ಲದ ನಿರೀಕ್ಷೆ ಇದೆ. ನಾಯಕ ನಟ ಅಜೇಯ್‌ ರಾವ್‌ ಈ ಹಿಂದೆ ಕಾಣಿಸಿಕೊಳ್ಳದಂತಹ ಹೊಸ ಗೆಟಪ್‌ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಸ್ಟಿಲ್‌ಗ‌ಳು ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ.

ಮುಖ್ಯವಾಗಿ ಇದು ಪಕ್ಕಾ ಫ್ಯಾಮಿಲಿ ಎಂಟರ್‌ ಟೈನರ್‌ ಸಿನಿಮಾ. ಎಲ್ಲಾ ವರ್ಗದ ಜನರನ್ನು ಸೆಳೆಯುವ ಸಾಮರ್ಥ್ಯ ಈ ಸಿನಿಮಾಕ್ಕಿದೆ ಎಂಬ ನಂಬಿಕೆ ಚಿತ್ರತಂಡದ್ದು. ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ಆನಂದ್‌ ನಟಿಸಿದ್ದಾರೆ. ಈಗಾಗಲೇ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ, ಭರವಸೆ ಮೂಡಿಸಿರುವ ಸಂಜನಾಗೂ ಈ ಚಿತ್ರದಲ್ಲಿ ಹೊಸ ಬಗೆಯ ಪಾತ್ರವಿದೆಯಂತೆ. ಈ ಚಿತ್ರವನ್ನು ಕ್ರಿಸ್ಟಲ್‌ ಪಾರ್ಕ್‌ ಫಿಲಂಸ್‌ನಡಿ ಟಿ.ಆರ್‌. ಚಂದ್ರಶೇಖರ್‌ ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಮಕ್‌, ಅಯೋಗ್ಯ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿರುವ ಚಂದ್ರಶೇಖರ್‌ ಈಗ ಶೋಕಿವಾಲನ ಮೇಲೆ ನಂಬಿಕೆ ಇಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next