Advertisement

ಅಜಯ್‌ ಜಯರಾಮ್‌ಗೆ ಫೈನಲ್‌ನಲ್ಲಿ ಸೋಲು

07:00 AM Aug 13, 2018 | |

ಹೊಸದಿಲ್ಲಿ: ಭಾರತದ ಅಜಯ್‌ ಜಯರಾಮ್‌ ಅವರು ವಿಯೆಟ್ನಾಂ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಫೈನಲ್‌ನಲ್ಲಿ ಶೇಸರ್‌ ಹಿರೆನ್‌ ರುಸ್ತಾವಿಟೊ ಅವರ ಕೈಯಲ್ಲಿ ನೇರ ಗೇಮ್‌ಗಳಲ್ಲಿ ಶರಣಾಗಿ ನಿರಾಶೆ ಅನುಭವಿಸಿದರು.

Advertisement

ರವಿವಾರ ನಡೆದ ಫೈನಲ್‌ ಹೋರಾಟದಲ್ಲಿ 30ರ ಹರೆಯದ ಅಜಯ್‌ ಕೇವಲ 28 ನಿಮಿಷಗಳ ಕಾದಾಟದಲ್ಲಿ 14-21, 10-21 ಗೇಮ್‌ಗಳಿಂದ ರುಸ್ತಾವಿಟೊ ಅವರಿಗೆ ಶರಣಾದರು. ಅಜಯ್‌ ಸತತ ಎರಡನೇ ಕೂಟದಲ್ಲಿ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಅವರು ಕಳೆದ ತಿಂಗಳು ನಡೆದ ವೈಟ್‌ ನೈಟ್ಸ್‌ ಇಂಟರ್‌ನ್ಯಾಶನಲ್‌ ಚಾಲೆಂಜ್‌ ಕೂಟದಲ್ಲೂ ರನ್ನರ್‌ ಅಪ್‌ ಪ್ರಶಸ್ತಿಗೆ ತಪ್ಪಿಪಟ್ಟುಕೊಂಡಿದ್ದರು.

ಕಳೆದ ವರ್ಷ ಪಾದದ ಗಾಯಕ್ಕೆ ಒಳಗಾಗಿದ್ದ ಅಜಯ್‌ ಈಗ ಪೂರ್ಣ ಚೇತರಿಸಿಕೊಂಡಿದ್ದಾರೆ. ಅವರು ಈ ಸೆಮಿಫೈನಲ್‌ ಪಂದ್ಯದಲ್ಲಿ ಜಪಾನಿನ ಏಳನೇ ಶ್ರೇಯಾಂಕದ ಯು ಇಗರಾಶಿ ಅವರನ್ನು ಸುಲಭವಾಗಿ ಮಣಿಸಿ ಪ್ರಶಸ್ತಿ ಸುತ್ತಿಗೇರಿದ್ದರು. ಇದೇ ವೇಳೆ ರುಸ್ತಾವಿಟೊ ಅವರು ಭಾರತದ ಮಿಥುನ್‌ ಮಂಜುನಾಥ್‌ ಅವರನ್ನು 21-17, 19-21, 21-14 ಗೇಮ್‌ಗಳಿಂದ ಉರುಳಿಸಿದ್ದರು. ರುಸ್ತಾವಿಟೊ ಈ ಹಿಂದೆ ನಾಲ್ಕು ಇಂಡೋನೇಶ್ಯ ಇಂಟರ್‌ನ್ಯಾಶನಲ್‌ ಕೂಟದ ಪ್ರಶಸ್ತಿ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next