Advertisement

ಅಜೆಕಾರು ಕಲಾಭಿಮಾನಿ ಬಳಗ: ಸುಧನ್ವ ಮೋಕ್ಷ ತಾಳಮದ್ದಳೆ

01:54 PM Aug 29, 2017 | |

ಮುಂಬಯಿ: ಚೆಂಬೂರ್‌ ಕರ್ನಾಟಕ ಸಂಘದ ಆಶ್ರಯದಲ್ಲಿ ಆ. 19ರಂದು ಸಂಜೆ 4ರಿಂದ ಚೆಂಬೂರ್‌ ಕರ್ನಾಟಕ ಹೈಸ್ಕೂಲಿನ  ಸಭಾಗೃಹದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ ಊರಿನ ಸುಪ್ರಸಿದ್ಧ ಕಲಾವಿದರಿಂದ ಸುಧನ್ವ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆಯು ವಿಜೃಂಭಣೆಯಿಂದ ಜರಗಿತು.

Advertisement

ಆರಂಭದಲ್ಲಿ ಸಂಘದ ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ದಯಾ ಸಾಗರ್‌ ಚೌಟ ಅವರು ನೆರೆದ ಕಲಾಭಿ ಮಾನಿಗಳನ್ನು ಹಾಗೂ ಕಲಾವಿದರನ್ನು ಸ್ವಾಗತಿಸಿದರು.

ಭಾಗವತರ ಗಣಪತಿ ಸ್ತುತಿ ಯೊಂದಿಗೆ ಘಾಟ್ಕೊàಪರ್‌ನ
ಹೊಟೇಲು ಉದ್ಯಮಿ ಗಣೇಶ್‌ರೈ ಅವರು ಸಂಘದ ಪದಾಧಿ ಕಾರಿಗಳೊಂದಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಊರಿನ ಹಿರಿಯ ಕಲಾವಿದರನ್ನು ಪುಷ್ಪಗೌರವದೊಂದಿಗೆ ಸ್ವಾಗತಿಸಲಾಯಿತು. ಅಜೆಕಾರು ಕಲಾಭಿಮಾನಿ ಬಳಗದ ಪರವಾಗಿ ಕುಕ್ಕುವಳ್ಳಿ ಭಾಸ್ಕರ್‌ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಮುಂಬಯಿ ಕನ್ನಡಿಗರ ಹಿರಿಯ ವಿದ್ಯಾಸಂಸ್ಥೆಗಳ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಊರಿನ ಹಿರಿಯ ಕಲಾವಿದರನ್ನು ಸಭಿಕರಿಗೆ ಪರಿಚಯಿಸಿದರು.

ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ತಮ್ಮ ಬಳಗದ ಕೊನೆಯ ಕಾರ್ಯಕ್ರಮದ  ವ್ಯವಸ್ಥೆ ಮಾಡಿದ ಸಂಘದ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಸುಧನ್ವ ಮೋಕ್ಷ ತಾಳಮದ್ದಳೆ ಭಾಗವತರ ಸುಮಧುರ ಕಂಠದ ಗಾಯನ, ಪ್ರಬುದ್ಧ ಅರ್ಥದಾರಿಗಳ ಮಾತಿನ ಮೋಡಿಯಿಂದ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಚ್‌. ಕೆ. ಸುಧಾಕರ್‌, ಉಪಾಧ್ಯಕ್ಷ ಪ್ರಭಾಕರ ಬೋಳಾರ್‌ ಗೌರವ ಕಾರ್ಯದರ್ಶಿ ರಂಜನ್‌ಕುಮಾರ್‌ ಅಮೀನ್‌ ಇತರ ಪದಾಧಿಕಾರಿಗಳಾದ ಗುಣಾಕರ ಹೆಗ್ಡೆ, ಟಿ. ಆರ್‌. ಶೆಟ್ಟಿ, ಮಧುಕರ ಬೈಲೂರು, ಸುಧಾಕರ ಅಂಚನ್‌, ಯೋಗೀಶ್‌ ಗುಜರನ್‌ ಮತ್ತಿತರರು ಉಪಸ್ಥಿತರಿದ್ದರು. ದಯಾಸಾಗರ ಚೌಟ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಂಘದ ವತಿಯಿಂದ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next