Advertisement

ಅಜೆಕಾರು:ದಾರಿದೀಪ ಅಳವಡಿಸಿ 4 ತಿಂಗಳಾದರೂ ವಿದ್ಯುತ್‌ ಸಂಪರ್ಕ ಇಲ್ಲ!

07:55 AM Mar 25, 2018 | |

ಅಜೆಕಾರು: ಇಲ್ಲಿನ ಮರ್ಣೆ ಪಂಚಾಯತ್‌ ವ್ಯಾಪ್ತಿಯ ಅಜೆಕಾರು ಪೇಟೆಯಲ್ಲಿ ರಸ್ತೆಯನ್ನು ಅಗಲೀಕರಣ ಕಾಮಗಾರಿ ನಡೆಸಿ ರಸ್ತೆಯ ನಡುವೆ ವಿಭಾಜಕವನ್ನು ನಿರ್ಮಿಸಲಾಗಿದ್ದು ಅದರಲ್ಲಿ ದಾರಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ ದಾರಿದೀಪ ನೋಡಲಷ್ಟೇ ಲಭ್ಯವಿದ್ದು ವಿದ್ಯುತ್‌ ಸಂಪರ್ಕವಿಲ್ಲದೆ ಜನಸಾಮಾನ್ಯರಿಗೆ ಪ್ರಯೋಜನ ಇಲ್ಲದಂತಾಗಿದೆ. 

Advertisement

9 ಲಕ್ಷ ರೂ. ವೆಚ್ಚ
2017ರ ಡಿಸೆಂಬರ್‌ ತಿಂಗಳಿನಲ್ಲಿ ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ವಿಭಾಜಕದ ನಡುವೆ ದಾರಿದೀಪ ಅಳವಡಿಸಲಾಗಿತ್ತು. ಈಗ ನಾಲ್ಕು ತಿಂಗಳು ಕಳೆದರೂ ಇನ್ನೂ ಸಹ ಈ ದಾರಿದೀಪಗಳಿಗೆ ವಿದ್ಯುತ್‌ ಸಂಪರ್ಕ ದೊರೆತಿಲ್ಲ. ಈ ಬಗ್ಗೆ ಮರ್ಣೆ ಪಂಚಾಯತ್‌ ಡಿ. 14ರಂದು ಹೆಬ್ರಿ ಮೆಸ್ಕಾಂ  ಕಚೇರಿಗೆ ನಿರಾಪೇಕ್ಷಣಾ ಪತ್ರ ಸಲ್ಲಿಸಿದೆ. 

ದಾರಿದೀಪ ಅಳವಡಿಸಿದ ಗುತ್ತಿಗೆ ದಾರರು ಮೆಸ್ಕಾಂ ನೋಂದಾವಣೆ ಪತ್ರ ನೀಡಿದ ಕೂಡಲೇ ವಿದ್ಯುತ್‌ ಸಂಪರ್ಕ ಒದಗಿಸಲಾಗುವುದು ಎಂದು ಪಂಚಾಯತ್‌ಗೆ ತಿಳಿಸಿದ್ದಾರೆ.ಆದರೆ ಗುತ್ತಿಗೆದಾರರ ನಿಧಾನ ಗತಿಯ ಧೋರಣೆಯಿಂದಾಗಿ ದಾರಿದೀಪ ಅಳವಡಿಸಿಯೂ ದಾರಿಹೋಕರಿಗೆ ಪ್ರಯೋಜನಕ್ಕೆ ಬಾರದೆ ಊಟಕ್ಕಿಲ್ಲದ ಉಪ್ಪಿನಕಾಯಿ ಯಂತಾಗಿದೆ ಎನ್ನುವುದು ಜನರ ಆರೋಪ

ಗುತ್ತಿಗೆದಾರರ ನಿರ್ಲಕ್ಷ್ಯ
ದಾರಿದೀಪ ಅಳವಡಿಸಲು ಟೆಂಡರ್‌ ಪಡೆದುಕೊಂಡಿರುವ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ದಾರಿದೀಪಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲದಂತಾಗಿದೆ. ಈ ಬಗ್ಗೆ ಹಲವು ಬಾರಿ ಗುತ್ತಿಗೆದಾರರನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನ ಇಲ್ಲವಾಗಿದೆ. 
– ದಿನೇಶ್‌ ಕುಮಾರ್‌
ಅಧ್ಯಕ್ಷರು, ಮರ್ಣೆ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next