Advertisement

ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಯಕ್ಷರಕ್ಷಾಪ್ರಶಸ್ತಿ ಪ್ರದಾನ

03:02 PM Aug 24, 2017 | |

ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಷೋಡಶ ಉತ್ಸವದ ಹರ್ಷ ಮಾನಿಷಾದ ಯಕ್ಷಗಾನ ಬಯಲಾಟ, ತಾಳಮದ್ದಳೆಯ ಸಮಾರೋಪ ಕೂಟ ಹಾಗೂ ಯಕ್ಷರಕ್ಷಾ ಪ್ರಶಸ್ತಿ-ಪುರಸ್ಕಾರ ಪೇಟ, ತ್ರಿವಳಿ ಸಂಭ್ರಮದ ನೋಟ ಸಂಭ್ರಮದ ಸಮಾರೋಪ ಸಮಾರಂಭವು ಆ. 20ರಂದು ಮಧ್ಯಾಹ್ನ 1.30ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಿತು.

Advertisement

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಯಕ್ಷಗಾನ ರಂಗದ ಆಟಕೂಟಗಳಲ್ಲಿ ಪ್ರಸಿದ್ಧಿಯನ್ನು ಪಡೆದ ಊರಿನ ಅಶೋಕ್‌ ಭಟ್‌ ಉಜಿರೆ ಅವರಿಗೆ ಸಂಸ್ಥೆಯ ವಾರ್ಷಿಕ 50 ಸಾವಿರ ರೂ. ನಗದು ಪುರಸ್ಕಾರ ಸಹಿತ ಯಕ್ಷರಕ್ಷಾ ವಾರ್ಷಿಕ ವಿಶೇಷ ಪ್ರಶಸ್ತಿಯನ್ನು ಹಾಗೂ ಹಿರಿಯ ಅರ್ಥದಾರಿ, ಯಕ್ಷಗಾನ ವಿದ್ವಾಂಸರಾದ ಡಾ| ಎಂ. ಪ್ರಭಾಕರ ಜೋಶಿ ಹಾಗೂ ಪ್ರಸಂಗಕರ್ತ ಮತ್ತು ಛಾಂದಸ, ಕವಿ, ಯಕ್ಷಕಲಾಗುರು ಗಣೇಶ್‌ ಕೊಲಕಾಡಿ ಅವರಿಗೆ ಸಂಸ್ಥೆಯ ಯಕ್ಷರಕ್ಷಾ ಪ್ರಶಸ್ತಿಯನ್ನು ಗೌರವ ನಿಧಿಯೊಂದಿಗೆ ನೀಡಿ ಗೌರವಿಸಲಾಯಿತು.

ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಮಾತೋಶ್ರೀ ಸಂಪಾ ಎಸ್‌. ಶೆಟ್ಟಿ ಅವರ ಸ್ಮರಣಾರ್ಥ ಯಕ್ಷರಕ್ಷಾ ಪ್ರಶಸ್ತಿಯನ್ನು ಪ್ರಸಿದ್ಧ ಮದ್ದಳೆಗಾರ ದಯಾನಂದ ಶೆಟ್ಟಿಗಾರ್‌ ಮಿಜಾರ್‌, ಪತ್ರಕರ್ತ ರೋನ್ಸ್‌ ಬಂಟ್ವಾಳ್‌, ಯಕ್ಷಗಾನ ರಂಗದ ಹಾಸ್ಯ ಕಲಾವಿದ ದಿನೇಶ್‌ ರೈ ಕಡಬ, ಪತ್ತನಾಜೆ ತುಳು ಚಲನಚಿತ್ರದ ನಾಯಕಿ, ಕಲಾವಿದೆ ರೇಷ್ಮಾ ಎಸ್‌. ಶೆಟ್ಟಿ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು. ಮುಂಬಯಿಯ ಖ್ಯಾತ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಅರ್ಥದಾರಿ, ಪ್ರಾಧ್ಯಾಪಕ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರು ಅಭಿನಂದನ ಭಾಷಣಗೈದರು.

ಯಕ್ಷಗಾನ ಪ್ರಸಂಗಕರ್ತ ಹಾಗೂ ಶ್ರೀ ಕಟೀಲು ಮೇಳದ ಪ್ರಧಾನ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಮಾನಿಷಾದ ಮತ್ತು ಪಾಂಚಜನ್ಯ ಪ್ರಸಂಗಗಳ ಅರ್ಥ ಸಹಿತ ಆವೃತ್ತಿಯನ್ನು ಹಾಗೂ ಯಕ್ಷಗಾನ ಅರ್ಥದಾರಿ, ಕಲಾವಿದ ಸದಾಶಿವ ಆಳ್ವ ತಲಪಾಡಿ ಅವರ ಭಾರತೀಯ ಚಿಂತನ ವಿಧಾನ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. 

ಸಮಾರಂಭದ ವೇದಿಕೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಅತಿಥಿ ಕಲ್ಕೂರು ಪ್ರತಿಷ್ಠಾನ ಮಂಗಳೂರು ಇದರ ಪ್ರದೀಪ್‌ ಕುಮಾರ್‌ ಕಲ್ಕೂರ, ಬಂಟರ ಸಂಘದ ಕೋಶಾಧಿಕಾರಿ ಸಿಎ ಐ. ಆರ್‌. ಶೆಟ್ಟಿ, ಅಶೋಕ್‌ ಇಂಡಸ್ಟ್ರೀಸ್‌ನ ಅಶೋಕ್‌ ಶೆಟ್ಟಿ ಪೆರ್ಮುದೆ, ಬಂಟರ ಸಂಘ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ, ಉದ್ಯಮಿ ಚಂದ್ರಶೇಖರ್‌ ಎಸ್‌. ಶೆಟ್ಟಿ, ಎಸ್‌ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಥಾಣೆ ಬಂಟ್ಸ್‌ನ ಕೋಶಾಧಿಕಾರಿ ವೇಣುಗೋಪಾಲ್‌ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಮುಂಬಯಿ ಬಂಟರ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಮತ್ತು ಉದ್ಯಮಿ, ದಿವ್ಯಾ ಸಾಗರ್‌ ಗ್ರೂಪ್‌ ಇದರ ಸಿಎಂಡಿ ದಿವಾಕರ ಶೆಟ್ಟಿ ಮುದ್ರಾಡಿ, ಅಜೆಕಾರು ಕಲಾಭಿಮಾನಿ ಬಳಗದ ಸಂಸ್ಥಾಪಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ, ಬಳಗದ ಕಾರ್ಯದರ್ಶಿ ಸುಧಾಕರ ಎನ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಂಗ ಕಲಾವಿದ ಅಶೋಕ್‌ ಪಕ್ಕಳ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. 

Advertisement

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next