Advertisement

ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ

10:46 AM Dec 05, 2021 | Team Udayavani |

ಬೀದರ: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ಸಂವಿಧಾನದ ದಿನ ಮತ್ತು ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಜರುಗಿತು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿವಿ ಕುಲಪತಿ ಪ್ರೊ| ಎಚ್‌.ಡಿ. ನಾರಾಯಣಸ್ವಾಮಿ ಅವರು ಸಂವಿಧಾನ ರಚಿಸಲು ಡಾ| ಬಿ.ಅರ್‌. ಅಂಬೇಡ್ಕರ್‌ ಅವರ ಪಾತ್ರ ಬಹು ಮುಖ್ಯವಾಗಿದೆ ಎಂದು ಹೇಳಿದರು.

ವಿವಿ ವ್ಯವಸ್ಥಾಪಕ ಮಂಡಳಿ ಸದಸ್ಯ ದೀಪಕ ದೋಡಯ್ನಾ ಮಾತನಾಡಿ, ಸಂವಿಧಾನದಲ್ಲಿ ಅಳವಡಿಸಿರುವ ಮೂಲಭೂತ ಹಕ್ಕುಗಳ ಕುರಿತು ವಿವರವಾಗಿ ತಿಳಿಸಿದರು.

ಇನ್ನೊರ್ವ ಸದಸ್ಯ ಭೋಜ್ಯಾ ನಾಯ್ಕ ಮಾತನಾಡಿ, ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳು ಕಳೆದಿವೆ ಮತ್ತು ಪ್ರತಿಯೊಬ್ಬರು ಸಂವಿಧಾನದ ಪರಿಕಲ್ಪನೆಯಂತೆ ನಾವೆಲ್ಲರೂ ನಡೆಯಬೇಕು ಎಂದರು. ವಿವಿ ಅಧಿಕಾರಿಗಳಾದ ಡಾ| ಬಿ.ವಿ. ಶಿವಪ್ರಕಾಶ, ಡಾ| ಎನ್‌.ಎ. ಪಾಟೀಲ, ಡಾ| ಬಸವರಾಜ ಅವಟಿ, ಡಾ| ಎಂ.ಡಿ. ಸೂರಣಗಿ, ಸುಭಾಷ, ಹಾಗೂ ರಾಮಪ್ಪ ಕೋರವಾರ್‌ ಪಾಲ್ಗೊಂಡಿದ್ದರು. ಡೀನ್‌ ಡಾ| ದಿಲೀಪಕುಮಾರ ಡಿ. ಅಧ್ಯಕ್ಷತೆ ವಹಿಸಿದ್ದರು. ಡಾ| ಆರ್‌.ಜಿ ಬಿಜೂರಕರ್‌ ಸ್ವಾಗತಿಸಿದರು. ಡಾ| ಸಿ.ಎಂ. ಕೃಷ್ಣಮೂರ್ತಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next