Advertisement
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರೋಗಿಯ ಪಿತ್ಥ ಕೋಶ ಹಾನಿಗೀಡಾಗಿತ್ತು. ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ದಾಖಲಾದಾಗ ಲಿವರ್ ಕಸಿ ಬಗ್ಗೆ ಚಿಂತಿಸಲಾಯಿತು. ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಪಿತ್ಥಕೋಶವನ್ನು ದಾನವಾಗಿ ಪಡೆದು, ಎ.ಜೆ. ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಜೋಡಿಸಲಾಗಿದ್ದು, ರೋಗಿ ಗುಣಮುಖರಾಗಿದ್ದಾರೆ ಎಂದರು. ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‌ನ ಕನ್ಸಲ್ಟೆಂಟ್ ಹೆಪಟೋಬಿಲಿಯರಿ ಮತ್ತು ಬಹು ಅಂಗ ಕಸಿ ಶಸ್ತ್ರಚಿಕಿತ್ಸಕರಾದ ಡಾ| ರಾಘವೇಂದ್ರ ಸಿ.ವಿ. ಮತ್ತು ಡಾ| ಸುರೇಶ್ ರಾಘವಯ್ಯ, ಡಾ| ದೀಪ್ತಿ ರಾಮಚಂದ್ರ ಹಾಗೂ ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್‌ಗಳಾದ ಡಾ| ರೋಹನ್ ಶೆಟ್ಟಿ, ಡಾ| ಅಶ್ವಿನ್ ಆಳ್ವ ಅವರನ್ನು ಒಳಗೊಂಡ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ ಎಂದು ಅವರು ಹೇಳಿದರು.
Advertisement
ಎ.ಜೆ.: ಕರಾವಳಿಯ ಮೊದಲ ಲಿವರ್ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ
10:27 AM Jan 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.