Advertisement

ಐವರ್ನಾಡು: ಕಾರು ತಡೆದು ನಿಲ್ಲಿಸಿ 5 ಲ.ರೂ. ದರೋಡೆ

03:45 AM Jan 24, 2017 | Team Udayavani |

ಬೆಳ್ಳಾರೆ: ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ಸೋಮವಾರ  ಬೆಳಗ್ಗೆ ಬೆಳ್ಳಾರೆ ಯಿಂದ ಗುತ್ತಿಗಾರಿಗೆ ತೆರಳು ತ್ತಿದ್ದ ವರ್ತಕರೊಬ್ಬರ ಕಾರನ್ನು ಹಿಂಬಾಲಿಸಿಕೊಂಡು ಕಾರಿನಲ್ಲಿ ಬಂದ ನಾಲ್ವರ ತಂಡವೊಂದು ತಡೆದು ನಿಲ್ಲಿಸಿ  ರಿವಾಲ್ವರ್‌ ಮತ್ತು ಕತ್ತಿ ತೋರಿಸಿ ರೂ. 5 ಲಕ್ಷ ಹಾಗೂ ಇತರ ದಾಖಲೆಗಳನ್ನು  ದೋಚಿ ಪರಾರಿಯಾದ ಘಟನೆ ನಡೆದಿದೆ.

Advertisement

ಬೆಳ್ಳಾರೆ ಉಮ್ಮಿಕಳ ಮಾಸ್ತಿಕಟ್ಟೆ ನಿವಾಸಿ  ಅಬ್ದುಲ್‌ ಖಾದರ್‌  ಗುತ್ತಿಗಾರಿನಲ್ಲಿ ಪ್ರಗತಿ ಎಂಟರ್‌ಪ್ರ„ಸಸ್‌  ನಡೆಸುತ್ತಿದ್ದು ಅವರು ತನ್ನ ಕೆಲಸಗಾರರಾದ ಶಫೀಕ್‌, ಬಸವರಾಜ್‌, ಜಾಸೀರ್‌ ಅವರೊಂದಿಗೆ ತನ್ನ ಸ್ವಿಫ್ಟ್ ಕಾರಿನಲ್ಲಿ  ಗುತ್ತಿಗಾರಿಗೆ ಹೋಗುತ್ತಿದ್ದಾಗ  ನಾಲ್ಕು ಮಂದಿ ಯುವಕರ ತಂಡ ಇವರನ್ನು ಕಾರಿನಲ್ಲಿ ಹಿಂಬಾಲಿಸಿತ್ತು. ಅಬ್ದುಲ್‌ ಖಾದರ್‌  ಅವರ ಕಾರು ಮುಂದೆ ಮುಂದೆ ಸಾಗುತ್ತಿದ್ದಂತೆ ಯುವಕರ ತಂಡ ಅದನ್ನು ನಿಲ್ಲಿಸುವ ಪ್ರಯತ್ನ ಮಾಡಿ ಐವರ್ನಾಡು ತಲುಪುವಷ್ಟರಲ್ಲಿ ಕಾರನ್ನು ತಡೆದು ನಿಲ್ಲಿಸಲಾಯಿತು. ಮೂವರು ರಿವಾಲ್ವರ್‌ ಹಿಡಿದು ಇನ್ನೊಬ್ಬ ಚೂರಿ   ಹಿಡಿದು ಬೆದರಿಸಿ ಕಾರಿನ ಕೀ ಎಳೆದುಕೊಂಡು ಹಣದ ಚೀಲ ಹಾಗೂ  ಚೆಕ್‌ ಪುಸ್ತಕ ಸೇರಿದಂತೆ ಇತರ ದಾಖಲೆಗಳನ್ನು ಎಳೆದುಕೊಂಡರು. ಬಳಿಕ ಆರೋಪಿಗಳು  ಐವರ್ನಾಡು- ಸೋಣಂಗೇರಿ ರಸ್ತೆಯ ಮೂಲಕ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಅಬ್ದುಲ್‌ ಖಾದರ್‌ ಬಗ್ಗೆ ಗೊತ್ತಿರುವವರೇ ಈ ಕೃತ್ಯದ   ಸಂಚು ರೂಪಿಸಿರಬಹುದು.ಇದೊಂದು ವ್ಯವಸ್ಥಿತ ಕೃತ್ಯ ಎಂದು ಸಂಶಯಪಡಲಾಗಿದೆ. 

ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಭೂಷಣ್‌  ಗುಲಾಬ್‌ ರಾವ್‌ ಬೊರಸೆ, ಬೆರಳಚ್ಚು ತಜ್ಞರು, ಸುಳ್ಯ ಎಸ್‌.ಐ. ಚಂದ್ರಶೇಖರ್‌, ಬೆಳ್ಳಾರೆ ಎಸ್‌.ಐ. ಚೆಲುವಯ್ಯ ಮತ್ತಿತರ ಸಿಬಂದಿ, ಜಿಲ್ಲಾ ಅಪರಾಧ ಪತ್ತೆದಳದವರು, ಶ್ವಾನ ದಳದವರು  ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.  ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶೀಘ್ರ ಆರೋಪಿಗಳ ಬಂಧನ ಎಸ್‌.ಪಿ.
ಆರೋಪಿಗಳ  ಬಗ್ಗೆ ಈಗಾಗಲೇ ಮಾಹಿತಿ ದೊರೆತಿದ್ದು ಶೀಘ್ರವಾಗಿ ಬಂಧಿಸಲಾಗುವುದು. ಆರೋಪಿಗಳ ಪತ್ತೆಗಾಗಿ ಸುಳ್ಯ ಎಸ್‌.ಐ. ಚಂದ್ರಶೇಖರ್‌ ಹಾಗೂ ಬೆಳ್ಳಾರೆ ಎಸ್‌.ಐ. ಚೆಲುವಯ್ಯ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿದೆ. ಅಬ್ದುಲ್‌ ಖಾದರ್‌ ಬಗ್ಗೆ ಗೊತ್ತಿರುವವರೇ ಆರೋಪಿಗಳಿಗೆ ಮಾಹಿತಿ ನೀಡಿರುವ ಸಾಧ್ಯತೆ ಹೆಚ್ಚಿದೆ. ಬೆಳ್ಳಾರೆ ಠಾಣೆಗೆ ವಿಸ್ತೃತ ಕಟ್ಟಡಕ್ಕೆ ಹಾಗೂ ವಸತಿ ಗೃಹಕ್ಕೆ ಹಾಗೂ ಜಾಲೂÕರು ಹೊರಠಾಣೆಗೆ ಬೇಡಿಕೆ ಸಲ್ಲಿಸಲಾಗಿದೆ. ಸದ‌Âದಲ್ಲಿ ದ.ಕ. ಜಿಲ್ಲೆಗೆ  ಹೊಸ ನೇಮಕಾತಿಗೆ ಆಯ್ಕೆಗೊಂಡಿರುವ 162 ಪಿ.ಸಿ.ಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇದರಿಂದ ಸ್ವಲ್ಪಮಟ್ಟಿಗೆ ಪೊಲೀಸರ ಕೊರತೆ ನೀಗಬಹುದು ಎಂದು ಎಸ್‌.ಪಿ.ತಿಳಿಸಿದರು.  

Advertisement

ಅಪರಾಧ ಕೃತ್ಯ ಹೆಚ್ಚುತ್ತಿದೆಯಾ ?
ಐವರ್ನಾಡು ಪರಿಸರದಲ್ಲಿ ಅಪರಾಧ ಪ್ರಕರಣ ಜಾಸ್ತಿಯಾಗುತ್ತಿದೆಯಾ ಎಂಬ ಸಂಶಯ ಜನರಿಗೆ ಕಾಡಲಾರಂಭಿಸಿದೆ. ಎರಡು ತಿಂಗಳ ಹಿಂದೆ ಈ ಭಾಗದಲ್ಲಿ ನೇಲ್ಯಮಜಲು ಇಸ್ಮಾಯಿಲ್‌ ಅವರನ್ನು ಹಾಡುಹಗಲೇ ತಲವಾರ್‌ ನಿಂದ ಕಡಿದು ಕೊಲೆ ಮಾಡಲಾಗಿತ್ತು. ಕೆಲವು ವರ್ಷಗಳ ಹಿಂದೆ ಐವರ್ನಾಡಿ ನಲ್ಲಿ ವೃದ್ಧೆ ಮೀರಾ ಬಾಲಕೃಷ್ಣ ಅವರನ್ನು ಹಾಡುಹಗಲೇ ಕೊಲೆ ಮಾಡಿ ದರೋಡೆ ಮಾಡಿದ್ದರು. ಇದಲ್ಲದೆ ಸಣ್ಣ ಅಪರಾಧ ಪ್ರಕರಣಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next