Advertisement
ಪ್ರಸಿದ್ಧ ಕಾಸ್ಟೂಮ್ ಡಿಸೈನರ್ ಜೀನ್ ಲ್ಯೂಯಿಸ್ ಸಬಾಜಿ ವಿನ್ಯಾಸಗೊಳಿಸಿದ್ದ, ಒಂದು ಕಡೆಯ ಅರ್ಧ ತೋಳು ಇರುವ ಮತ್ಸಕನ್ಯೆ ಉಡುಪು ಧರಿಸಿ, ನ್ಯೂಡ್ ಲಿಪ್‌ಸ್ಟಿಕ್ ಹಾಕಿ ಯಾವುದೇ ಆಭರಣ ಇಲ್ಲದೆ ಐಶ್ವರ್ಯಾ ರೈ ಆಗಮಿಸಿದ್ದರು. ಇನ್ನೊಂದು ವಿಶೇಷವೆಂದರೆ, ಈ ಬಾರಿಯ “ಕೇನ್ಸ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್’ ಕಾರ್ಯಕ್ರಮಕ್ಕೆ ಐಶ್ವರ್ಯಾ ರೈ ಐಶ್ವರ್ಯಾ ತಮ್ಮ ಮಗಳು ಆರಾಧ್ಯಾಳನ್ನು ಕರೆದುಕೊಂಡು ಬಂದಿದ್ದರು. ಆರಾಧ್ಯಾ ತನ್ನ ತಾಯಿಯ ಉಡುಪಿನ ಜೊತೆ ಮ್ಯಾಚ್ ಆಗಲು ಹಳದಿ ಬಣ್ಣದ ಫ್ರಾಕ್ ಧರಿಸಿದ್ದರು. ಐಶ್ವರ್ಯ ಎಂಟ್ರಿ ಕೊಡುವ ವೇಳೆ ತಮ್ಮ ಮಗಳ ಕೈ ಹಿಡಿದುಕೊಂಡು ಆಕೆಯನ್ನು ಸುತ್ತಿಸಿದ್ದಾರೆ.
ಐಶ್ವರ್ಯಾ ರೈ ಕೂಡ “ಕೇನ್ಸ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್’ನ ಇಂಥ ಅಪರೂಪದ ಕ್ಷಣಗಳನ್ನು ತಮ್ಮ ಇನ್ಸಾ$rಗ್ರಾಂನಲ್ಲಿ ಹಂಚಿಕೊಂಡಿದ್ದು, ಮಗಳ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿ, “ನಿಮ್ಮ ಪ್ರೀತಿಗೆ ಧನ್ಯವಾದಗಳು. ಕೇನ್ಸ್ 2019′ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಬಾರಿಯ “ಕೇನ್ಸ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್’ನಲ್ಲಿ ಐಶ್ವರ್ಯಾ ರೈ ಅವರೊಂದಿಗೆ, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಹಿನಾ ಖಾನ್, ಕಂಗನಾ ರಣಾವುತ್, ಮಲ್ಲಿಕಾ ಶೆರಾವತ್, ಹುಮಾ ಖುರೇಶಿ, ಡಯಾನಾ ಪೆಂಟಿ ಮೊದಲಾದ ಸ್ಟಾರ್ ಕಲಾವಿದರು ಭಾಗವಹಿಸಿದ್ದಾರೆ. ಒಟ್ಟಾರೆ ತಾಯಿಯಾದ ಬಳಿಕವೂ ಐಶ್ವರ್ಯಾ ರೈ ತನ್ನನ್ನು ತಾನು ಜವಾಬ್ದಾರಿ ಮತ್ತು ವೃತ್ತಿಪರತೆಯನ್ನು ನಿರೂಪಿಸಲು “ಕೇನ್ಸ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್’ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.