ಬಾಗೇಪಲ್ಲಿ: ಗ್ರಾಹಕರ ಅಡುಗೆ ಅನಿಲ ಸಬ್ಸಿಡಿ ಹಣವನ್ನು ಏರ್‌ಟೆಲ್ ಕಂಪನಿ ಯವರು ತಮ್ಮ ಏರ್‌ಟೆಲ್ ಬ್ಯಾಂಕಿಗೆ ಜಮಾವಣೆ ಮಾಡಿಕೊಂಡು, ಗ್ರಾಹಕರಿಗೆ ವಂಚಿಸುತ್ತಿದ್ದಾರೆ. ಮೊದಲಿನಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಜಮಾವಣೆ ಮಾಡಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಕಾರ್ಯಕರ್ತರು ಏರ್‌ಟೆಲ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಕನ್ನಡ ಸೇನೆ ತಾಲೂಕು ಘಟಕದ ಅಧ್ಯಕ್ಷ ಬಿ.ಎ.ಬಾಬಾಜಾನ್ ಮಾತನಾಡಿ, ಗ್ರಾಹಕರ ಅಡುಗೆ ಅನಿಲ ಸಹಾಯಧನ ಸುಮಾರು ತಿಂಗಳಿನಿಂದ ಗ್ರಾಹಕರ ಬ್ಯಾಂಕ್‌ಗಳ ಖಾತೆಗೆ ಬರುತ್ತಿಲ್ಲ. ಈ ಕುರಿತು ಗ್ರಾಹಕರು ಬ್ಯಾಂಕ್‌ನಲ್ಲಿ ವಿಚಾರಿಸಿದರೆ, ನೀವು ಆಧಾರ್ ಕಾರ್ಡ್ ಸಂಖ್ಯೆ ಸಂಯೋಜನೆ ಮಾಡಿಸಿಲ್ಲ ಎಂದು ಹೇಳುತ್ತಾರೆ. ಅಡುಗೆ ಅನಿಲ ಏಜೆನ್ಸಿಯವರನ್ನು ಕೇಳಿದರೆ ನಾವು ಸಹಾಯಧನ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಬ್ಯಾಂಕ್ ಖಾತೆಗಳಲ್ಲಿ ಮಾತ್ರ ಅಡುಗೆ ಅನಿಲ ಸಬ್ಸಿಡಿ ಹಣ ಮಾತ್ರ ಬಂದಿಲ್ಲ ಎಂದು ದೂರಿದರು.
ಅಡುಗೆ ಅನಿಲದ ಸಬ್ಸಿಡಿ ಹಣವನ್ನು ಏರ್‌ಟೆಲ್ ಪೆಮೆಂಟ್ ಬ್ಯಾಂಕ್ ಪಡೆದಿದೆ. ಕೇವಲ 10 ರೂ. ಕಮಿಷನ್‌ಗಾಗಿ ಗ್ರಾಹಕರಿಗೆ ಮಾಹಿತಿ ತಿಳಿಸದೇ ಏರ್‌ಟೆಲ್ ಪೆಮೆಂಟ್ ಖಾತೆಗೆ ಜಮಾಯಿಸಿಕೊಂಡು ಜನಸಾಮಾನ್ಯರ ಬಡ ಕುಟುಂಬಗಳಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು. ನೇರವಾಗಿ ಅಡುಗೆ ಅನಿಲದ ಸಬ್ಸಿಡಿ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳ ಗ್ರಾಹಕರ ಖಾತೆಗೆ ವರ್ಗಾಯಿಸಬೇಕು. ಕೂಡಲೇ ಏರ್‌ಟೆಲ್ ಪೆಮೆಂಟ್ ಖಾತೆಗೆ ರದ್ದುಗೊಳಿಸಿ ಕಾನೂನು ಕ್ರಮ ಜರುಗಿಸಬೇಕು ಎಂದರು.
ಏರ್‌ಟೆಲ್ ಕಂಪನಿ ಹಿರಿಯ ಅಧಿಕಾರಿಗಳು ಸಮಸ್ಯೆ ಇತ್ಯರ್ಥ ಮಾಡದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ಕನ್ನಡ ಸೇನೆ ಕಾರ್ಯಕರ್ತರು, ಏರ್‌ಟೆಲ್ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು. ಇದೇ ವೇಳೆ ತಹಶೀಲ್ದಾರ್ ಮೂಲಕ ಪೆಟ್ರೋಲಿಯಂ ಸಚಿವರ ಧರ್ಮೆಂದ್ರ ಪ್ರಧಾನ್‌ಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಬಿ.ಎ.ಬಾಬಾಜಾನ್, ಮುಖಂಡರಾದ ಜಿ.ವಿ.ಪ್ರದೀಪ್ ಕುಮಾರ್, ವೆಂಕಟಶಿವಪ್ಪ, ಸಮೀವುಲ್ಲಾ, ಷೇಕ್ ಹಿದಾಯುತುಲ್ಲಾ, ರಾಮು, ಅಸ್ಲಾಂ ಬಾಷ, ನರೇಶ, ಮುದ್ದುಕೃಷ್ಣ, ಷμàವಲ್ಲಾ, ಶ್ರೀನಿವಾಸ್ ಇತರರಿದ್ದರು.