Advertisement

ಭಾರತೀಯ ಗ್ರಾಹಕರಿಗೆ ಎರಡು ಬಂಪರ್ ಆಫರ್ ಘೋಷಿಸಿದ ಏರ್ ಟೆಲ್

02:46 PM May 17, 2021 | Team Udayavani |

ದೇಶದಲ್ಲಿ ಕೊವಿಡ್ -19 ಸಾಂಕ್ರಾಮಿಕ ಎರಡನೇ ಅಲೆಯು ಸೃಷ್ಟಿಸಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರಿಗೆ ಉಪಯೋಗವಾಗಲೆಂದು ಟೆಲಿಕಾಂ ಸಂಸ್ಥೆ ಭಾರತೀಯ ಏರ್ ಟೆಲ್ ಎರಡು ಆಫರ್ ಗಳನ್ನು ಘೋಷಿಸಿದೆ.

Advertisement

ಏರ್‌ಟೆಲ್‌ 49ರೂ. ಉಚಿತ ರಿಚಾರ್ಜ್ :

ಭಾರ್ತಿ ಏರ್‌ಟೆಲ್‌ ಟೆಲಿಕಾಂನ 49ರೂ. ಪ್ಯಾಕ್ ರಿಚಾರ್ಜ್ ಮಾಡಿಕೊಂಡರೆ 38 ರೂ. ಟಾಕ್‌ಟೈಮ್ ಸಿಗಲಿದೆ. ಮತ್ತು 100 ಎಂಬಿ ಡೇಟಾ ಸೌಲಭ್ಯ ಸಿಗಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಯಾಕ್ ಅನ್ನು ಬಳಕೆದಾರರಿಗೆ ಏರ್‌ಟೆಲ್‌ ಯಾವುದೇ ಶುಲ್ಕವಿಲ್ಲದೆ ನೀಡುತ್ತಿದೆ.

79ರೂ. ಪ್ಯಾಕ್ :

ಈ ಡಬಲ್ ಕೂಪನ್ ಆಫರ್ ಮೂಲಕ 79 ರೂಪಾಯಿಗಳ ರಿಚಾರ್ಜ್ ಮಾಡಿದರೆ, ಏರ್‌ಟೆಲ್ ಉಚಿತವಾಗಿ 79 ರೂಪಾಯಿ ರಿಚಾರ್ಜ್ ಮಾಡಿಕೊಡಲಿದೆ. ಅಂದರೆ ಈ ಯೋಜನೆಯಡಿ 79ರೂ. ಪ್ಯಾಕ್ ರೀಚಾರ್ಜ್ ಮಾಡಿಸಿದರೆ 128ರೂ. ಮೌಲ್ಯದ ಟಾಕ್‌ಟೈಮ್ ಮತ್ತು 200MB ಡೇಟಾದೊಂದಿಗೆ ದೊರೆಯಲಿದೆ. ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ.

Advertisement

ಲಾಕ್‌ಡೌನ್‌ಗಳಿಂದಾಗಿ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿರುವ ಕಡಿಮೆ-ಆದಾಯದ ಗ್ರಾಹಕರಿಗೆ ಹಾಗೂ ಆನ್‌ಲೈನ್‌ನಲ್ಲಿ ತಮ್ಮ ಫೋನ್‌ಗಳನ್ನು ಹೇಗೆ ರೀಚಾರ್ಜ್ ಮಾಡುವುದನ್ನು ತಿಳಿದಿಲ್ಲದ ಗ್ರಾಹಕರಿಗೆ ಏರ್‌ಟೆಲ್‌ ಟೆಲಿಕಾಂ ಉಚಿತ ರೀಚಾರ್ಜ್ ಕೊಡುಗೆ ನೀಡಿದೆ. ಈ ಮೂಲಕ ಗ್ರಾಹಕರು ಅವರ ಪ್ರೀತಿಪಾತ್ರರೊಂದಿಗೆ ಕರೆ ಮಾಡಲು ಮತ್ತು ಸಂಪರ್ಕಿಸಲು ಸಾಧ್ಯವಾಗಿಸುವುದಾಗಿದೆ. ಈ ಯೋಜನೆಯೂ ಮುಂದಿನ ವಾರದಿಂದ ಶುರುವಾಗಲಿದೆ ಎಂದು ಭಾನುವಾರ ಏರ್ ಟೆಲ್ ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next