Advertisement
ಇದೊಂದು ಫ್ಯಾಮಿಲಿ ಪ್ಲ್ಯಾನ್ ಆಗಿದೆ. ಏರ್ ಟೆಲ್ ನ ಪೋಸ್ಟ್‌ಪೇಯ್ಡ್ ಯೋಜನೆ ರೂ. 399 ರಿಂದ ಪ್ರಾರಂಭವಾಗುತ್ತದೆ. ಇದರಲ್ಲಿ 500 ಜಿಬಿ ತನಕದ ಡಾಟ ಸೌಲಭ್ಯ, ಒಟಿಟಿ ಚಂದಾದಾರಿಕೆ ಮತ್ತು ಆಡ್-ಆನ್ ಸಂಪರ್ಕದಂತಹ ಸೌಲಭ್ಯಗಳು ಒಳಗೊಂಡಿವೆ.
Related Articles
Advertisement
ಏರ್ ಟೆಲ್ ನ ಫ್ಯಾಮಿಲಿ ಪ್ಲ್ಯಾನ್ ಬೆಲೆ 749, 999 ಮತ್ತು 1,599 ರೂ. ನಲ್ಲಿ ಲಭ್ಯವಿದೆ., ನೀವು ಸರಳವಾದ ಪೋಸ್ಟ್ ಪೇಯ್ಡ್ ಪ್ಲ್ಯಾನ್ ನಲ್ಲಿ ಆಡ್-ಆನ್ ಸಂಪರ್ಕವನ್ನು ತೆಗೆದುಕೊಂಡರೆ, ಅದರ ಶುಲ್ಕ 299 ರೂ. ಅಂತೆಯೇ, ಡಾಟ ಆಡ್-ಆನ್ ಗಳಿಗಾಗಿ ತಿಂಗಳಿಗೆ 99 ರೂಪಾಯಿಗಳನ್ನು ವಿಧಿಸಲಾಗುತ್ತದೆ. ಅದೇ ಸಮಯದಲ್ಲಿ, ಇದು ಮಿ ಅಂಡ್ ಮೈ ಫ್ಯಾಮಿಲಿ ಪ್ಲ್ಯಾನ್ ನಲ್ಲಿ ಒಟ್ಟಿಗೆ ಬರುತ್ತದೆ.
ಭಾರ್ತಿ ಏರ್ ಟೆಲ್ ನ 749 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ನಲ್ಲಿ ಎರಡು ಉಚಿತ ಆಡ್-ಆನ್ ಸಂಪರ್ಕಗಳು ಲಭ್ಯವಿದ್ದು, ಇದರಲ್ಲಿ ನಿಯಮಿತ ಮತ್ತು ಏಕೈಕ ಡಾಟಾ ಆಡ್-ಆನ್ ಲಭ್ಯವಿದೆ.
ಈ ಪ್ಲ್ಯಾನ್ ಒಂದು ತಿಂಗಳಿಗೆ 125 ಜಿಬಿ ಡಾಟವನ್ನು ನೀಡುತ್ತದೆ, ಇದರೊಂದಿಗೆ ಡೇಟಾ ರೋಲ್ ಓವರ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಇದರಲ್ಲಿ, ಎಲ್ಲಾ ನೆಟ್ ವರ್ಕ್ ಗಳಲ್ಲಿ ಅನಿಯಮಿತ ಕರೆ ಮತ್ತು 100 ಎಸ್ ಎಂ ಎಸ್ ಸಹ ಏರ್ ಟೆಲ್ ನೀಡಿದೆ.
ಓದಿ : ಜರ್ಮನಿ, ಫ್ರಾನ್ಸ್, ಇಟಲಿಯಲ್ಲಿ ಆಸ್ಟ್ರಾಜೆನಿಕಾ ಲಸಿಕೆ ನೀಡಿಕೆ ಸ್ಥಗಿತ: ಕಾರಣವೇನು?