ನವ ದೆಹಲಿ : ದೇಶದ ಅತ್ಯಂತ ದೊಡ್ಡ ಟೆಲಿಕಾಂ ನೆಟ್ ವರ್ಕ್ ಏರ್ ಟೆಲ್ ಸಂಸ್ಥೆ ತನ್ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ದರವನ್ನು ಹೆಚ್ಚೆಳ ಮಾಡಿದೆ.
ಟೆಲಿಕಾಂ ನೆಟ್ ವರ್ಕ್ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಆಗುತ್ತಿರುವ ಸಂದರ್ಭದಲ್ಲಿಯೇ ಏರ್ ಟೆಲ್ ತನ್ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ದರವನ್ನು ಶೇಕಡಾ 60 ಷ್ಟು ಏರಿಕೆ ಮಾಡಿದ್ದು, ಇಂದಿನಿಂದ(ಗುರುವಾರ, ಜುಲೈ 29) ಜಾರಿಗೆ ಬರಲಿದೆ.
ಇದನ್ನೂ ಓದಿ : ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ :ಸಿದ್ದುಗೆ ಬಿಜೆಪಿ ತಿರುಗೇಟು
ಶೇಕಡಾ 60 ರಷ್ಟು ಹೆಚ್ಚಳ ಮಾಡಿರುವುದರಿಂದ 49 ರೂ ಗೆ ಇದ್ದ ರೀಚಾರ್ಜ್ ಬೆಲೆ ಈಗ 79 ರೂ ಆಗಿದೆ. ಕಂಪೆನಿ ಜಾರಿಗೆ ತಂದಿರುವ ಈ ಹೊಸ ಯೋಜನೆಯಲ್ಲಿ ಎರಡುಪಟ್ಟು ಡೇಟಾದೊಂದಿಗೆ ಗ್ರಾಹಕರಿಗೆ ಮೊದಲಿಗಿಂತ ನಾಲ್ಕು ಪಟ್ಟು ಹೆಚ್ಚು ಔಟ್ ಗೋಯಿಂಗ್ ಕರೆ ಮಾಡಲು ಸಹಾಯವಾಗಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
79ರ ಸ್ಟಾರ್ಟ್ ಪ್ರೀಪೇಯ್ಡ್ ರೀಚಾರ್ಜ್ ಮಾಡಿದರೆ 28 ದಿನಗಳ ಸಿಂಧುತ್ವ ಇರಲಿದ್ದು, 64 ರ ಟಾಕ್ ಟೈಮ್ ಮತ್ತು 200 ಎಂಬಿ ಡೇಟಾ ದೊರೆಯಲಿದೆ.
ಇದನ್ನೂ ಓದಿ : ತಾಲಿಬಾನಿಗಳು ಸಾಮಾನ್ಯ ನಾಗರಿಕರು, ಅವರನ್ನು ಗುರುತಿಸಿ ಕೊಲ್ಲುವುದು ಹೇಗೆ?ಖಾನ್