Advertisement
ಹಾಲ್ಟ್ಸ್ಟೇಷನ್ ಬೆನ್ನಲ್ಲೇ ಯಲಹಂಕ-ದೇವನಹಳ್ಳಿ ನಡುವೆ ಮಾರ್ಗ ವಿದ್ಯುದ್ದೀಕರಣ ನಿರ್ಮಾಣಗೊಳ್ಳುತ್ತಿದೆ. ದೊಡ್ಡಜಾಲ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಕ್ರಾಸಿಂಗ್ ಕಲ್ಪಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಮಧ್ಯೆ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಟ್ ಫೀಲ್ಡ್ ನಿವಾಸಿಗಳು ಕೂಡ ಕಾರ್ಮೆಲ್‌ರಾಂ, ಹೀಲಳಿಗೆ ನಿಲ್ದಾಣದಿಂದಲೂ ಏರ್ ಪೋರ್ಟ್‌ಗೆ ರೈಲು ಸೇವೆ ಕಲ್ಪಿಸುವ ಬಗ್ಗೆ ಒತ್ತಾಯ ಕೇಳಿಬರುತ್ತಿದೆ. ಒಂದು ವೇಳೆ ಈಗಿನ ಪ್ರಯೋಗ ಯಶಸ್ವಿಯಾದರೆ, ಮುಂದಿನ “ರೈಲ್ವೆ ಹಾದಿ’ ಸುಗಮ ಆಗಲಿದೆ.
Related Articles
Advertisement
“ಆರಂಭದಲ್ಲಿ ತುಸು ಕಷ್ಟ’: ಬೆಳಗಿನಜಾವ ಹಾಗೂ ತಡರಾತ್ರಿಯಲ್ಲಿ ಹತ್ತಿರದ ನಿಲ್ದಾಣಗಳಿಗೆ ಬಂದುರೈಲುಗಳನ್ನು ಏರಿ, ಹಾಲ್ಟ್ ಸ್ಟೇಷನ್‌ಗೆ ಬರಬೇಕು. ಅಲ್ಲಿಂದ ಶೆಟಲ್ ಸೇವೆಗಳಿಗೆ ಕಾದು, 5 ಕಿ.ಮೀ. ದೂರದ ಏರ್ ಪೋರ್ಟ್ ತಲುಪುವುದು ಆರಂಭದಲ್ಲಿ ತುಸು ಕಷ್ಟಅನಿಸಬಹುದು. ಉದಾಹರಣೆಗೆ ರಾಜಾಜಿನಗರದಲ್ಲಿ ಮನೆ ಇದ್ದರೆ, ಮೆಜೆಸ್ಟಿಕ್ ಅಥವಾ ಮಲ್ಲೇಶ್ವರಕ್ಕೆ ತೆರಳಿ, ಅಲ್ಲಿಕೌಂಟರ್‌ನಲ್ಲಿ ಟಿಕೆಟ್ ಪಡೆದು, ರೈಲು ಹತ್ತಿ ಹೋಗಬೇಕಾಗುತ್ತದೆ. ಅಂದರೆ ಫಸ್ಟ್ ಅಥವಾ ಲಾಸ್ಟ್‌ಮೈಲ್ ಕನೆಕ್ಟಿವಿಟಿ ಇಲ್ಲದೆ ಕಿರಿಕಿರಿ ಆಗಬಹುದು. ಒಮ್ಮೆ ಈ ವ್ಯವಸ್ಥೆಗೆ ಹೊಂದಿಕೊಂಡರೆ, ಮುಂದಿನ ದಿನಗಳಲ್ಲಿ ಇದು”ನೆಮ್ಮದಿಯ ಸೇವೆ’ ಆಗಲಿದೆ ಎಂದು ಉಪನಗರ ರೈಲು ತಜ್ಞ ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ.ರೈಲು ಸೇವೆಗಳಿಗೆ ಪೂರಕವಾಗಿ ಬಿಎಂಟಿಸಿಯು ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಬಸ್ ಸೇವೆಗಳನ್ನು ಕಲ್ಪಿಸುವ ಅವಶ್ಯಕತೆ ಇದೆ. ಇದಕ್ಕೂ ಮುನ್ನ ಹೆಚ್ಚಾಗಿ ಯಾವಭಾಗದ ಪ್ರಯಾಣಿಕರು ಈ ರೈಲುಗಳನ್ನು ಬಳಕೆ ಮಾಡುತ್ತಾರೆಎಂಬುದರ ಅಧ್ಯಯನ ನಡೆಸಬೇಕು. ಅದಕ್ಕೆ ತಕ್ಕಂತೆ ಮಿಡಿಬಸ್‌ಗಳನ್ನು ಪರಿಚಯಿಸುವ ಬಗ್ಗೆ ಚಿಂತನೆ ಆಗಬೇಕು. ಜತೆಗೆ ಆ್ಯಪ್ ಆಧಾರಿತ ಟ್ಯಾಕ್ಸಿಗಳು ಕೂಡ ಇರುತ್ತವೆ. ಇದರಿಂದಾಗಿ ಅಷ್ಟೇನೂ ಸಮಸ್ಯೆ ಆಗದು ಎಂದು ಅಭಿಪ್ರಾಯಪಡುತ್ತಾರೆ.
ಮೈಸೂರು-ಹಾಲ್ಟ್ ಸ್ಟೇಷನ್; ಚಿಂತನೆ ಇದೆ : ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತರೆ, ತಡೆರಹಿತ ರೈಲು ಸೇವೆಗಳನ್ನು ಪರಿಚಯಿಸುವ ಚಿಂತನೆ ಇದೆ. ಈ ಪ್ರತಿ ನಿಲ್ದಾಣದಲ್ಲಿ 1 ನಿಮಿಷ ನಿಲುಗಡೆಯಾದರೂ, ಅದು ಸಹಜ ವೇಗ ಪಡೆದುಕೊಳ್ಳಲು 5-6 ನಿಮಿಷ ಆಗುತ್ತದೆ. ಇನ್ನು ವಿದ್ಯುದ್ದೀಕರಣ ಪೂರ್ಣಗೊಂಡರೆ, ಮೈಸೂರು, ಮಂಡ್ಯದಿಂದ ನಗರಕ್ಕೆ ಬರುವ ರೈಲುಗಳ ಸೇವೆಯನ್ನು ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್‌ಗೆ ವಿಸ್ತರಿಸುವ ಚಿಂತನೆಯೂ ಇದೆ. ಹೊಸೂರಿನಿಂದಲೂ ಸೇವೆ ಕಲ್ಪಿಸಬಹುದು.– ಇ. ವಿಜಯಾ, ಉಪ ಪ್ರಧಾನ ವ್ಯವಸ್ಥಾಪಕಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲೆ
– ವಿಜಯಕುಮಾರ್ ಚಂದರಗಿ