Advertisement

ಯಕ್ಷಮಹೋತ್ಸವದಲ್ಲಿ ರತಿ ಕಲ್ಯಾಣ

06:00 AM Jun 08, 2018 | |

ಐರೋಡಿಯ ಯಕ್ಷಗಾನ ಕಲಾಕೇಂದ್ರವು ಸಂಸ್ಕೃತಿ ಇಲಾಖೆ,ಹೊಸದಿಲ್ಲಿ ಇದರ ಸಹಯೋಗದೊಂದಿಗೆ ಯಕ್ಷಮಹೋತ್ಸವದ ಅಂಗವಾಗಿ ರತಿ ಕಲ್ಯಾಣ ಎನ್ನುವ ಪ್ರಸಂಗವನ್ನು ಪ್ರದರ್ಶಿಸಿತು. ರುಕ್ಮಿಣಿ ತನ್ನ ಪತಿ ಕೃಷ್ಣನಲ್ಲಿ ಮಗನಾದ ಪ್ರದ್ಯುಮ್ನನಿಗೆ ವಿವಾಹ ಮಾಡುವ ಯೋಚನೆಯನ್ನು ಮುಂದಿಟ್ಟಾಗ, ಕೃಷ್ಣನು ಇನ್ನು ಎಂಟು ದಿನದೊಳಗಾಗಿ ವಿವಾಹ ಮಾಡಿಸುತ್ತೇನೆ ಎಂದು ಮಾತು ನೀಡುತ್ತಾನೆ. ಆರು ದಿನ ಕಳೆದರೂ ಸರಿಯಾದ ವಧು ಸಿಗದಾಗ, ತಂಗಿಯಾದ ದ್ರೌಪದಿಯನ್ನು ಸಹಾಯಕ್ಕಾಗಿ ನೆನೆಯುತ್ತಾನೆ. ಅರ್ಜುನನ ಶಯ್ನಾಗಾರದಲ್ಲಿದ್ದ ದ್ರೌಪದಿಯು ಅಕ್ಷಯಾಂಬರ ನೀಡಿ ತನ್ನನ್ನು ಕಾಪಾಡಿದ ಅಣ್ಣನಿಗೆ ಸಹಾಯ ಮಾಡಲು ಬರುತ್ತಾಳೆ. ಸೋದರಳಿಯನಿಗೆ ಸರಿಯಾದ ವಧು ಕಮಲಭೂಪನ ಮಗಳಾದ ರತಿ ಎಂಬುದನ್ನು ತಿಳಿದು, ಆತನಲ್ಲಿಗೆ ಕನ್ಯಾರ್ಥಿಯಾಗಿ ಕಮಲಾವತಿಗೆ ಬರುತ್ತಾಳೆ. ಗೋವಳನಿಗೆ ತನ್ನ ಮಗಳನ್ನು ನೀಡಲಾರೆ ಎಂದು ಆತನು ತಿರಸ್ಕರಿಸಲು ದ್ರೌಪದಿಯು ಹಿಂತಿರುಗುವಳು. ಮಧ್ಯ ಪ್ರವೇಶಿಸಿದ ರತಿಯು ತಂದೆಗೆ ತನ್ನ ಪೂರ್ವ ಜನ್ಮದ ವೃತ್ತಾಂತವನ್ನು ಅರುಹುತ್ತಾ ಆತನೇ ತನ್ನ ಪತ್ನಿ ಎನ್ನುತ್ತಾಳೆ. ಮದುವೆಯ ತಯಾರಿಯು ನಡೆಯುತ್ತಿರುವ ಸಂದರ್ಭದಲ್ಲಿ ಕಮಲಭೂಪನ ಸೋದರಳಿಯ ಕೌಂಡ್ಲಿಕನು ರತಿಯನ್ನು ತನಗೇ ನೀಡಬೇಕೆಂದು ಹಠಮಾಡಿದಾಗ, ನಿರಾಕರಿಸಿದ ಮಾವನನ್ನು ಮತ್ತು ಕೃಷ್ಣನನ್ನು ಯುದ್ಧದಲ್ಲಿ ಸೋಲಿಸುತ್ತಾನೆ. ಆಗ ಕೆರಳಿದ ದ್ರೌಪದಿಯು ಚಂಡಿ ರೂಪವನ್ನು ತಾಳಿ ಆತನನ್ನು ಸಂಹರಿಸುತ್ತಾಳೆ. ರತಿ ಮನ್ಮಥರ ವಿವಾಹವೂ ನಿರ್ವಿಘ್ನವಾಗಿ ನೆರವೇರುತ್ತದೆ. ಕೃಷ್ಣನಾಗಿ ವಿಜಯಕುಮಾರ್‌, ದ್ರೌಪದಿಯಾಗಿ ಸೀತಾರಾಮ ಸೋಮಯಾಜಿ, ಕಮಲ ಭೂಪನಾಗಿ ಐರೋಡಿ ರಾಜಶೇಖರ ಹೆಬ್ಟಾರ್‌, ಮೇಘಾಸುರನಾಗಿ ರಾಮ ಬಾೖರಿ, ಅರ್ಜುನನಾಗಿ ಅಶೋಕ್‌ ಆಚಾರ್‌, ಭೀಮನಾಗಿ ವೈಕುಂಠ ಹೇಳೆì, ಚಂಡಿಯಾಗಿ ಕುಮಾರ ವಿಶ್ವಂಭರ ಅಲ್ಸೆ, ಕೌಂಡ್ಲಿಕನಾಗಿ ಪ್ರಶಾಂತ್‌ ಮಯ್ಯ, ಚಾರಕನಾಗಿ ಮಟಪಾಡಿ ಪ್ರಭಾಕರ ಆಚಾರ್‌ ತಮ್ಮ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸಿದ್ದು, ಇವರೊಂದಿಗೆ ಮನ್ಮಥನಾಗಿ ಕು. ಅಭಿನವ ತುಂಗ, ರತಿಯಾಗಿ ಕು| ಪುನೀತ ಕುಮಾರ, ಬಾಲಗೋಪಾಲ ಮತ್ತು ವರುಣನಾಗಿ ಕು| ಸಚಿನ್‌, ಅಗ್ನಿಯಾಗಿ ಕು| ಶೋಭಿತಾ ಮಿಂಚಿದರು.  

Advertisement

 ಕೆ. ದಿನಮಣಿ ಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next