ಬೆಳಗಾವಿ: ಇಲ್ಲಿಯ ಸಾಂಬ್ರಾ ಭಾರತೀಯ ಏರ್ ಮ್ಯಾನ್ ತರಬೇತಿ ಕೇಂದ್ರದಲ್ಲಿ ಹರಿಯಾಣಾ ಮೂಲದ ಕರ್ತವ್ಯ ನಿರತ ಯೋಧನೋರ್ವ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಹರಿಯಾಣಾ ಮೂಲದ ಸಂದೀಪ್ ಕುಮಾರ್ ಎಂಬ ವಾಯುನೆಲೆಯ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಲೆಗೆ ಗುಂಡು ಹಾರಿಸಿಕೊಂಡು ರಕ್ತಸ್ರಾವವಾಗಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. 2016ರಿಂದ ಸಾಂಬ್ರಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದೀಪ್ ಕುಮಾರ್ ಕೆಲ ದಿನಗಳಿಂದ ಮಾನಸಿಕವಾಗಿ ಕುಗ್ಗಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಪೋಷಕರನ್ನು ಕಳೆದುಕೊಂಡ ಮಕ್ಕಳ ನೆರವಿಗೆ ಸರ್ಕಾರದ ಯೋಜನೆಗೆಳು ತೃಪ್ತಿದಾಯಕ : ಸುಪ್ರೀಂ
ಹರಿಯಾಣದಲ್ಲಿರುವ ಸಂದೀಪ್ ಕುಮಾರ್ ಅವರ ಕುಟುಂಬವನ್ನು ಸಂಪರ್ಕಿಸಿರುವ ವಾಯುನೆಲೆಯ ಅಧಿಕಾರಿಗಳು ಹಾಗೂ ಮಾರೀಹಾಳ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಕುರಿತು ಮಾರೀಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.