Advertisement
ಮನೆಯಲ್ಲಿನ ಕೆಟ್ಟ ವಾಸನೆ ನಿಮ್ಮ ನೆಮ್ಮದಿಯನ್ನೇ ಕೆಡಿಸಿ ಬಿಡಬಹುದು. ಏರ್‌ಫ್ರೆಶ್‌ನರ್‌ನಿಂದ ಈ ಸಮಸ್ಯೆಗೆ ಮುಕ್ತಿ ಹಾಡಬಹುದು. ಆದರೆ ರಾಸಾ ಯನಿಕಗಳಿಂದ ತಯಾರಿಸ್ಪಡುವ ಇವುಗಳ ನಿರಂತರ ಉಪಯೋಗ ಗಂಭೀರ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. ಅಸ್ತಮಾ, ತಲೆನೋವು, ಮೂಗಿನಲ್ಲಿ, ಗಂಟಲಿನಲ್ಲಿ ಕಿರಿಕಿರಿ ಕಾಣಿಸಿ ಕೊಳ್ಳಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಇದಕ್ಕೆಲ್ಲ ಪರಿಹಾರ ಎಂದರೆ ನೈಸರ್ಗಿಕ ಏರ್‌ಫ್ರೆಶ್‌ನರ್ ಬಳಕೆ. ಎಣ್ಣೆ, ಗಿಡ ಮೂಲಿಕೆ, ಹೂವುಗಳನ್ನು ಬಳಸಿ ಏರ್‌ಫ್ರೆಶ್‌ನರ್ ತಯಾರಿಸಬಹುದು. ಇಲ್ಲದದಿದ್ದರೆ ಅಗರ್‌ಬತ್ತಿ, ಕರ್ಪೂರಗಳನ್ನು ಬಳಸಬಹುದು.
ಲೋಬಾನ, ಕರ್ಪೂರ, ಅಗರ್‌ಬತ್ತಿ ಮುಂತಾದವುಗಳನ್ನು ಉರಿಸಿದರೆ ಮನೆಯೊಳಗೆ ಸುವಾಸನೆ ಹರಡುತ್ತದೆ. ಅಗರ್‌ಬತ್ತಿ ವಿವಿಧ ಸುವಾಸನೆಗಳ ಮಾದರಿಗಳಲ್ಲಿ ಲಭ್ಯವಿದ್ದು, ನಿಮ್ಮ ನೆಚ್ಚಿನವುಗಳನ್ನು ಆಯ್ಕೆ ಮಾಡಿಕೊಳ್ಳಹುದು. ಸಾಧಾರಣವಾಗಿ ಭಾರತೀಯರ ಮನೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತು ದೇವರ ಕೋಣೆಗಳಲ್ಲಿ ಅಗರಬತ್ತಿ ಉರಿಸುವ ಪರಿಪಾಠ ರೂಢಿಯಲ್ಲಿದೆ. ಇದರಿಂದ ಮನೆಯೆಲ್ಲ ಸುವಾಸನೆ ಹರಡಿ ಮನಸ್ಸು ಉಲ್ಲಾಸಿತವಾಗುತ್ತದೆ. ಸುವಾಸನೆಯುಕ್ತ ಕ್ಯಾಂಡಲ್
ಸುವಾಸನೆಯುಕ್ತ ಕ್ಯಾಂಡಲ್ ಉರಿಸುವುದರಿಂದ ಮನೆಯನ್ನು ಘಮ್ ಎನಿಸಬಹುದು. ಜೇನು, ಸೋಯಾ ಮೇಣ ಬಳಸಿ ಕ್ಯಾಂಡಲ್ ತಯಾರಿಸಬಹುದು. ಇದಕ್ಕೆ ಸುವಾಸನೆಯುಕ್ತ ಎಣ್ಣೆ, ದ್ರವ್ಯಗಳನ್ನು ಬಳಸಬಹುದು. ಇದನ್ನು ತಯಾರಿಸುವಾಗ ರಾಸಾಯನಿಕ ವಸ್ತು ಬಳಸದಂತೆ ಎಚ್ಚರ ವಹಿಸಿ.
Related Articles
ಕಾಫಿ ಪ್ರಿಯರು ಅದರ ಸುವಾಸನೆ, ಆಸ್ವಾದದೊಂದಿಗೆ ದಿನ ಆರಂಭಿಸಲು ಇಚ್ಛಿಸುತ್ತಾರೆ. ಕಾಫಿ ಬೀಜ ಕುದಿಯಲಿ, ಉರಿಯಲಿ ಅಥವಾ ಬೇಯಲಿ ಅದರ ಪರಿಮಳ ಸುತ್ತ ಹರಡುತ್ತದೆ. ಕಾಫಿ ಬೀಜದ ಪರಿಮಳ ಖಂಡಿತವಾಗಿಯೂ ನಿಮ್ಮ ಮನಸ್ಸು ಉಲ್ಲಸಗೊಳಿಸುತ್ತದೆ. ಮಾತ್ರವಲ್ಲ ಇದಕ್ಕೆ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಪರಿಮಳವನ್ನೂ ಹೀರಿಕೊಳ್ಳುವ ಶಕ್ತಿ ಇದೆ. ಅಡುಗೆ ಮನೆಯ ಕಸದ ಬುಟ್ಟಿ ದುರ್ವಾಸನೆ ಬೀರುತ್ತಿದ್ದರೆ ಅದರಲ್ಲಿ ಸ್ವಲ್ಪ ಕಾಫಿ ಬೀಜಗಳನ್ನು ಹಾಕಿಡಿ.
Advertisement
ಪಾಟ್ಪೌರಿಪಾಟ್ಪೌರಿ-ಮನೆ ಅಲಂಕಾರಿಕ ವಸ್ತುಗಳ್ಲಲಿ ಸದ್ಯ ಜನಪ್ರಿಯವಾಗುತ್ತಿದೆ. ಜಾಡಿಯಲ್ಲಿ ಹೂಗಳ ಪಕಳೆಗಳನ್ನು ಹಾಕಿಡುವ ರೀತಿ ಇದು. ಮನೆ ಅಲಂಕಾರಕ್ಕೆ ಮಾತ್ರವಲ್ಲ ಏರ್‌ಫ್ರೆಶ್‌ನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಹೂಗಳ ಜತೆಗೆ ಒಣ ಹಣ್ಣು, ಗಿಡ ಮೂಲಿಕೆ, ಎಲೆಗಳನ್ನು ಬಳಸಿಯೂ ನೀವು ಮನೆಯಲ್ಲೇ ಪಾಟ್‌ಪೌರಿ ತಯಾರಿಸಬಹುದು. ಸುವಾಸನೆಯುಕ್ತ ಎಣ್ಣೆ
ರೋಸ್ ವಾಟರ್, ನೀಲಗಿರಿ, ಲ್ಯಾವೆಂಡರ್ ಎಣ್ಣೆಗಳನ್ನು ಜಾಡಿಯಲ್ಲಿ ಹಾಕಿಟ್ಟು ಕೋಣೆಗಳಲ್ಲಿ ಇರಿಸಿದರೆ ನಿರಂತರವಾಗಿ ಪರಿಮಳ ಬೀರುತ್ತಿರುತ್ತದೆ. ಹತ್ತಿಯ ಉಂಡೆಯನ್ನು ಸುವಾಸನೆಯುಕ್ತ ಎಣ್ಣೆಯಲ್ಲಿ ಅದ್ದಿ ಶೌಚಾಲಯ, ಸ್ನಾನದ ಕೋಣೆಗಳಲ್ಲಿ ಇರಿಸದರೆ ದುರ್ವಾಸನೆ ಕಡಿಮೆಯಾಗುತ್ತದೆ. ನಿಂಬೆ ಹಣ್ಣಿನ ಬಳಕೆ
ನಿಂಬೆ ಹಣ್ಣಿನ ಸುವಾಸನೆ ಸಾಧಾರಣವಾಗಿ ಎಲ್ಲರಿಗೂ ಅಚ್ಚುಮೆಚ್ಚು. ನಿಂಬೆ ಹಣ್ಣನ್ನು ಕತ್ತರಿಸಿ ಮೈಕ್ರೋ ವೇವ್ ಒವೆನ್‌ನಲ್ಲಿ ಸ್ವಲ್ಪ ಹೊತ್ತು ಬೇಯಿಸಿ. ತಣ್ಣಗಾದ ಮೇಲೆ ಬಾಗಿಲು ತೆರೆಯಿರಿ. ಈಗ ನಿಮ್ಮ ಮನೆ ಇಡೀ ಪರಿಮಳ ಹರಡುತ್ತದೆ. ಇದನ್ನು ಗಮನಿಸಿ
· ಅಡುಗೆ ಕೋಣೆ ಮತ್ತು ಸ್ನಾನದ ಕೋಣೆಗೆ ಸರಿಯಾಗಿ ಬೆಳಕು ಬೀಳುವಂತಿರಬೇಕು, ಗಾಳಿಯಾಡುವಂತಿರಬೇಕು
· ಸಾಕು ಪ್ರಾಣಿಗಳ ಹಾಸಿಗೆ, ತಟ್ಟೆಗಳನ್ನು ನಿಯಮಿತವಾಗಿ ಶುಚಿಗೊಳಿಸಿ
· ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಬಾಗಿಲು, ಕಿಟಕಿಗಳನ್ನು ತೆರೆದಿಡಿ
· ಮನೆಯೊಳಗೆ ಶುದ್ಧ ವಾಯು ಪ್ರವೇಶಿಸುವಂತಿರಲಿ
· ಮನೆಯೊಳಗೆ ತೇವಾಂಶ ಇರದಂತೆ ನೋಡಿಕೊಳ್ಳಿ ನೈಸರ್ಗಿಕ ವಿಧಾನ ಬಳಸಿ
ಸುವಾಸನೆಗೆ ನಿಮ್ಮ ಒತ್ತಡ ಕಡಿಮೆ ಮಾಡುವ ಶಕ್ತಿ ಇದೆ. ಆದ್ದರಿಂದ ಮನೆಯೊಳಗೆ ಉತ್ತಮ ಸುವಾಸನೆ ಹರಡಿರಲಿ. ಹಾಗಂತ ರಾಸಾಯನಿಕಯುಕ್ತ ಏರ್‌ಫ್ರೆಶ್‌ನರ್‌ಗಳ ನಿರಂತರ ಬಳಕೆ ಕೆಲವು ರೋಗಗಳಿಗೆ ಕಾರಣವಾಗಹುದು. ಆದ್ದರಿಂದ ನೈಸರ್ಗಿಕ ಮಾರ್ಗಗಳನ್ನು ಹುಡುಕುವುದು ಅಗತ್ಯ. ಮನೆಯೊಳಗೆ ತಾಜಾ ಹೂವುಗಳನ್ನು, ಕೆಲವು ಪರಿಮಳಯುಕ್ತ ಗಿಡಮೂಲಿಕೆಗಳನ್ನು ಇರಿಸುವುದು ಮುಂತಾದ ಕ್ರಮಗಳನ್ನು ಅನುಸರಿಸಬಹುದು.
– ಗೌತಮ್ ಕಶ್ಯಪ್ ಒಳಾಂಗಣ ವಿನ್ಯಾಸಕಾರ, ಬೆಂಗಳೂರು – ರಮೇಶ್ ಬಳ್ಳಮೂಲೆ