Advertisement

ಜು.1ರಿಂದ ವಿಮಾನ ಪ್ರಯಾಣ ತುಟ್ಟಿ

12:21 AM Jun 09, 2019 | Team Udayavani |

ಹೊಸದಿಲ್ಲಿ: ಜುಲೈ 1ರಿಂದ ವಿಮಾನ ಪ್ರಯಾಣವು ಸ್ವಲ್ಪಮಟ್ಟಿಗೆ ದುಬಾರಿಯಾಗಲಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ವೈಮಾನಿಕ ಭದ್ರತಾ ಶುಲ್ಕವನ್ನು ಪ್ರತಿ ಗ್ರಾಹಕನಿಗೆ ಈಗ ಇರುವ 130 ರೂ.ಗಳಿಂದ 150 ರೂ.ಗಳಿಗೆ ಏರಿಸಿ ಆದೇಶ ಹೊರಡಿಸಿದೆ. ಜತೆಗೆ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈ ಶುಲ್ಕವನ್ನು 3.25 ಡಾಲರ್‌ನಿಂದ 4.85 ಡಾಲರ್‌ಗೆ ಏರಿಸಲಾಗಿದೆ. ಜು.1ರಿಂದ ಇದು ಜಾರಿಗೆ ಬರಲಿರುವ ಕಾರಣ, ವಿಮಾನ ಪ್ರಯಾಣ ತುಟ್ಟಿಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next