Advertisement

ಹೀನಾಯವಾಗುತ್ತಿದೆ ದಿಲ್ಲಿ ಹವಾಮಾನ: 500 ತಲುಪಿದ ಗುಣಮಟ್ಟ ಸೂಚ್ಯಂಕ

10:10 AM Nov 17, 2019 | keerthan |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. ವಾಯು ಮಾಲಿನ್ಯದಿಂದಾಗಿ ದಿಲ್ಲಿ ಜನರು ಉಸಿರಾಡುವುದು ಕೂಡಾ ಕಷ್ಟವಾಗಿದೆ.

Advertisement

ಸರಕಾರದ ಗಾಳಿ ಗುಣಮಟ್ಟ ಮಾಹಿತಿ ಸೇವಾ ಕೇಂದ್ರ ನೀಡಿದ ವರದಿಯ ಪ್ರಕಾರ ದೆಹಲಿಯ ಗಾಳಿಯ ಗುಣಮಟ್ಟ 500ಕ್ಕೂ ಹೆಚ್ಚಿದೆ. ನೋಯ್ಡಾದಲ್ಲೂ 500 ತಲುಪಿದ್ದು, ಘಾಜಿಯಾಬಾದ್ ನಲ್ಲಿ 438ಕ್ಕೆ ತಲುಪಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ ಬೆಸ ಸಂಖ್ಯೆಯ ವಾಹನ ಪದ್ದತಿ ತಂದರೂ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ.

ಗುಣಮಟ್ಟ ಸೂಚ್ಯಂಕ 1-50 ಇದ್ದರೆ ಉತ್ತಮ, 51-100 ಇದ್ದರೆ ಪರವಾಗಿಲ್ಲ, 101-200 ಇದ್ದರೆ ಮಧ್ಯಮ, 201-300 ನಡುವೆ ಕಳಪೆ, 301-400 ನಡುವೆ ಅತ್ಯಂತ ಕಳಪೆ ಮತ್ತು 401ರಿಂದ ಹೆಚ್ಚಿದ್ದರೆ ಪ್ರಯಾಸಕರ ಅಥವಾ ತೀವ್ರ ಎಂದು ಗುರುತಿಸಲಾಗುವುದು. ಆದರೆ ದಿಲ್ಲಿಯಲ್ಲಿ 500 ಮುಟ್ಟಿದ್ದು ಪರಿಸ್ಥಿತಿ ಹೀನಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next