Advertisement
ರಾಜಧಾನಿಯೂ ಹೊರತಲ್ಲ2018ರಲ್ಲಿ ಸ್ವಿಸ್ ಮೂಲದ ಸಂಸ್ಥೆಯೊಂದು ನಡೆಸಿದ ಸಂಶೋಧನೆಯ ಪ್ರಕಾರ ಜಗತ್ತಿನ ಅತ್ಯಂತ ಹೆಚ್ಚು ವಾಯು ಮಾಲಿನ್ಯ ನಗರಗಳಲ್ಲಿ ಭಾರತದ ಗುರುಗ್ರಾಮ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಗಾಜಿಯಾಬಾದ್ ಇದ್ದರೆ ಪಾಕಿಸ್ಥಾನದ ಫೈಸಲಾಬಾದ್ ಮೂರನೇ ಸ್ಥಾನದಲ್ಲಿದೆ. ದಿಲ್ಲಿಗೆ ಈ ಪಟ್ಟಿಯಲ್ಲಿ 11ನೇ ಸ್ಥಾನ. ಆದರೆ, ಗರಿಷ್ಠ ಮಾಲಿನ್ಯವಾದ ರಾಜಧಾನಿ ಎಂಬ ಹಣೆಪಟ್ಟಿ ಕಳವಳಕಾರಿ.
ವಾಯು ಮಾಲಿನ್ಯ ಕಾರಣದಿಂದ ಪ್ರತಿ ವರ್ಷ ಜಗತ್ತಿನಾದ್ಯಂತ 7 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ವಾಯು ಮಾಲಿನ್ಯ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುವುದು ಮಾತ್ರವಲ್ಲ ಹವಾಮಾನ ಬದಲಾವಣೆ, ನೀರಿನ ಸಹಜ ಗುಣದ ಮೇಲೆ ದುಷ್ಪರಿಣಾಮ ಮತ್ತು ಆಹಾರ ಉತ್ಪಾದನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಉಷ್ಣಾಂಶ ಹೆಚ್ಚಳ
ಉಷ್ಣಾಂಶ ಹೆಚ್ಚಳಕ್ಕೂ ವಾಯು ಮಾಲಿನ್ಯದ ಕೊಡುಗೆ ಅಪಾರ. ಇಂಧನದ ಉತ್ಪಾದನೆ ಮತ್ತು ಬಳಕೆ ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣ. ಪಳೆಯುಳಿಕೆ ಇಂಧನ ಉರಿಸಿದಾಗ ಅದು ಗ್ಯಾಸ್ ಮತ್ತು ರಾಸಾಯನಿಕವನ್ನು ಬಿಡುಗಡೆಗೊಳಿಸುತ್ತದೆ. ಇದು ವಾತಾವರಣದ ಉಷ್ಣಾಂಶ ಹೆಚ್ಚಿಸುತ್ತದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಸಂಶೋಧಕರು. ಹಿಮಗಡ್ಡೆ ಕರಗಿ ಸಮುದ್ರದ ನೀರಿನ ಮಟ್ಟ ಏರಿಕೆಯಾಗಿ ಅಪಾಯ ಎರುರಾಗುವ ಸಾಧ್ಯತೆ ಇದೆ.
Related Articles
1 ಮಲಿನ ವಾಯು ಆಸ್ತಮಾಕ್ಕೆ ಕಾರಣವಾಗುತ್ತದೆ.
2 ಶ್ವಾಸಕೋಶದ ಸಾಮರ್ಥ್ಯ ಕುಗ್ಗುತ್ತದೆ.
3 ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ
4 ಕೆಮ್ಮು ಮತ್ತು ಉಬ್ಬಸ.
5 ರೋಗ ನಿರೋಧಕ ಮತ್ತು ಸಂತಾನೋತ್ಪತ್ತಿ ಶಕ್ತಿ ಕುಂಠಿತ
6 ಅತಿಯಾದ ವಾಯು ಮಾಲಿನ್ಯ ಹೃದ್ರೋಗಕ್ಕೂ ಕಾರಣವಾಗಬಲ್ಲದು.
Advertisement
ಮಾಲಿನ್ಯಕ್ಕೆ ಕಾರಣವಾದ ಅಂಶಗಳುಶೇ. 45 ಧೂಳು ಮತ್ತು ನಿರ್ಮಾಣ ಕಾಮಗಾರಿ
ಶೇ. 17 ತ್ಯಾಜ್ಯಗಳನ್ನು ಉರಿಸುವುದರಿಂದ
ಶೇ. 14 ವಾಹನಗಳು
ಶೇ. 9 ಡೀಸೆಲ್ ಜನರೇಟರ್
ಶೇ. 8 ಕಾರ್ಖಾನೆಗಳು
ಶೇ. 7 ಅಡುಗೆ ತಯಾರಿ ಭಾರತದಲ್ಲಿ…
ಭಾರತದಲ್ಲೂ ವಾಯು ಮಾಲಿನ್ಯ ಬೀರುವ ಪರಿಣಾಮ ಭೀಕರವಾಗಿದೆ. ಈ ಕಾರಣದಿಂದ ದೇಶದಲ್ಲಿ ಪ್ರತಿ ವರ್ಷ 1.5 ಮಿಲಿಯನ್ ಜನ ಸಾಯುತ್ತಿದ್ದಾರೆ. ಇದು ಐದನೇ ಅತಿ ದೊಡ್ಡ ಕೊಲೆಗಾರ ಎನಿಸಿದೆ. ಆಸ್ತಮಾ ಸಹಿತ ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆಯೂ ಭಾರತದಲ್ಲೇ ಅಧಿಕ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.