Advertisement

ಬ್ಯಾಂಡೇಜ್‌ ಒಳಗೆ 26 ಲಕ್ಷ ಚಿನ್ನ: ವಿಮಾನ ಪ್ರಯಾಣಿಕ ಸೆರೆ

04:26 PM Nov 06, 2017 | Team Udayavani |

ಕೊಯಮುತ್ತೂರು : ಏರ್‌ ಅರೇಬಿಯ ವಿಮಾನದಲ್ಲಿ ಪ್ರಯಾಣಿಸಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕನೋರ್ವನಿಂದ ಕಸ್ಟಮ್ಸ್‌ ಅಧಿಕಾರಿಗಳು ಸುಮಾರು 26 ಲಕ್ಷ ರೂ. ಮೌಲ್ಯದ ಚಿನ್ನದ ಪುಡಿಯನ್ನು ವಶಪಡಿಸಿಕೊಂಡರು. 

Advertisement

ನಸುಕಿನ 4.30ರ ವೇಳೆಗೆ ವಿಮಾನದಿಂದ ಇಳಿದು ಸಂಶಯಾಸ್ಪದ ರೀತಿಯಲ್ಲಿ ಅತ್ತಿಂದಿತ್ತ ಹೋಗುತ್ತಿದ್ದ ಕೇರಳ ಮೂಲದ ಈ ಪ್ರಯಾಣಿಕನನ್ನು ಕಸ್ಟಮ್ಸ್‌ ಅಧಿಕಾರಿಗಳು ತಡೆದು ಪ್ರಶ್ನಿಸಿದಾಗ ಆತನ ಬಳಿ ಅಕ್ರಮ ಸಾಗಾಟ ಚಿನ್ನದ ಪುಡಿ ಕಂಡುಬಂತು. 

ಒಡನೆಯೇ ಅಧಿಕಾರಿಗಳು ಆತನನ್ನು ಬಂಧಿಸಿ ಆತನ ಬಳಿ ಇದ್ದ ಚಿನ್ನದ ಪುಡಿಯನ್ನು ವಶಕ್ಕೆ ತೆಗೆದುಕೊಂಡರು. ಈ ಪುಡಿಯನ್ನು ಆತನು ತನ್ನ ಎರಡೂ ಕಾಲುಗಳಿಗೆ ಕಟ್ಟಲ್ಪಟ್ಟಿದ್ದ ಬ್ಯಾಂಡೇಜ್‌ ಒಳಗಡೆ ಅವಿತಿರಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next