Advertisement

ವಂದೇ ಭಾರತ ಮಿಷನ್: 177 ಭಾರತೀಯರನ್ನು ಹೊತ್ತ ವಿಮಾನ UAEಯಿಂದ ಹೊರಟಿದೆ

08:19 AM May 08, 2020 | Hari Prasad |

ದುಬಾಯಿ: ಕೋವಿಡ್ ಸಂಬಂಧಿತ ಲಾಕ್ ಡೌನ್ ಕಾರಣದಿಂದ ವಿಶ್ವದ ನಾನಾ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ದೇಶಕ್ಕೆ ಕರೆತರುವ ‘ವಂದೇ ಭಾರತ ಮಿಷನ್’ಗೆ ಚಾಲನೆ ದೊರಕಿದೆ.

Advertisement

177 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನವು ಯು.ಎ.ಇ.ಯಿಂದ ಕೇರಳದ ಕೊಚ್ಚಿಗೆ ಇಂದು ಹೊರಟಿದೆ. ಇಲ್ಲಿಂದ ಒಟ್ಟು 2 ವಿಮಾನಗಳು ಹೊರಡಲಿದ್ದು 354 ಭಾರತೀಯರು ಸ್ವದೇಶಕ್ಕೆ ವಾಪಸಾಗಲಿದ್ದಾರೆ. ಇವರಲ್ಲಿ 11 ಗರ್ಭಿಣಿಯರು, ಎರಡು ಜೊತೆ ಅವಳಿಗಳೂ ಸೇರಿದ್ದಾರೆ.

ಏರ್ ಇಂಡಿಯಾ ಎಕ್ಸ್ ಪ್ರಸ್ ಐಎಕ್ಸ್ 452 ವಿಮಾನ ಅಬುಧಾಬಿಯಿಂದ ಕೊಚ್ಚಿಗೆ ತೆರಳಲಿದ್ದರೆ ಇನ್ನೊಂದು ದುಬಾಯಿಯಿಂದ ಕೋಝಿಕ್ಕೋಡ್ ಗೆ ಬಂದಿಳಿಯಲಿದೆ. ವಿದೇಶಗಳಲ್ಲಿ ಸಿಲುಕಿರುವ ಭಾರತೀಯರು ತಮ್ಮ ಊರುಗಳಿಗೆ ಮರಳುವ ತವಕದಲ್ಲಿದ್ದಾರೆ. ಇವರಲ್ಲಿ ಕೆಲವರು ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಭಾರತೀಯ ರಾಯಭಾರಿ ಪವನ್ ಕಪೂರ್ ಅವರು ಖುದ್ದು ಭಾರತಕ್ಕೆ ತೆರಳುವವರಿಗೆ ಮಾರ್ಗದರ್ಶನ ನೀಡಿದರು ಹಾಗೂ ಎಲ್ಲರನ್ನೂ ಕಡ್ಡಾಯ ವೈದ್ಯಕೀಯ ತಪಾಸಣೆಗೊಳಪಡಿಸಿದ ಬಳಿಕವೇ ವಿಮಾನ ಏರಲು ಅವಕಾಶ ಮಾಡಿಕೊಡಲಾಯಿತು.

ಈ ಮಿಷನ್ ಅಡಿಯಲ್ಲಿ ಭಾರತ ಸರಕಾರವು ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿದ್ದು ತವರಿಗೆ ಮರಳಲು ಬಯಸುತ್ತಿರುವ ಭಾರತೀಯರನ್ನು ಕರೆತರಲಿದೆ. ಇದಕ್ಕಾಗಿ ಇಂಡಿಯನ್ ಏರ್ ಲೈನ್ಸ್ ನ 64 ವಿಮಾನಗಳು ಮೇ 7ರಿಂದ ಮೇ 13ರವರೆಗೆ ಹಾರಾಟವನ್ನು ನಡೆಸಲಿವೆ. ಮತ್ತು ಸರಿಸುಮಾರು 15 ಸಾವಿರ ಭಾರತೀಯರನ್ನು ದೇಶಕ್ಕೆ ಕರೆದುಕೊಂಡು ಬರಲಿವೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next