Advertisement

ಕಮಾಂಡರ್‌ನಿಂದ ಲೈಂಗಿಕ ಕಿರುಕುಳ, ಏರಿಂಡಿಯಾ ಮಹಿಳಾ ಪೈಲಟ್‌ ದೂರು: ತನಿಖೆಗೆ ಆದೇಶ

09:26 AM May 16, 2019 | Sathish malya |

ಹೊಸದಿಲ್ಲಿ : ಕಮಾಂಡರ್‌ ವಿರುದ್ಧ ಮಹಿಳಾ ಪೈಲಟ್‌ ಲೈಂಗಿಕ ಕಿರುಕುಳದ ಆರೋಪ ಮಾಡಿರುವುದನ್ನು ಅನುಸರಿಸಿ ಏರಿಂಡಿಯಾ ವಿಮಾನ ಯಾನ ಸಂಸ್ಥೆ ಉನ್ನತ ಮಟ್ಟದ ತನಿಖೆಯನ್ನು ಆರಂಭಿಸಿದೆ.

Advertisement

ತಾನು ಕಳೆದ ಮೇ 5ರಂದು ಹೈದರಾಬಾದ್‌ ನಲ್ಲಿ ತರಬೇತಿ ಪಡೆಯುತ್ತಿದ್ದಾಗ ಕಮಾಂಡರ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಮಹಿಳಾ ಪೈಲಟ್‌ ಆರೋಪಿಸಿದ್ದಾರೆ.

ಈ ಲೈಂಗಿಕ ಕಿರುಕುಳದ ವಿಷಯ ನಮ್ಮ ಗಮನಕ್ಕೆ ಬಂದೊಡನೆಯೇ ನಾವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದೇವೆ ಎಂದು ಏರಿಂಡಿಯಾ ವಕ್ತಾರ ತಿಳಿಸಿದ್ದಾರೆ.

ಮಹಿಳಾ ಪೈಲಟ್‌ ತನ್ನ ದೂರಿನಲ್ಲಿ ತಾನು ಕಮಾಂಡರ್‌ ನಿಂದ ಅನುಭವಿಸಿದ್ದ ಲೈಂಗಿಕ ಕಿರುಕುಳವನ್ನು ಹೀಗೆ ವಿವರಿಸಿದ್ದಾರೆ :

ಮೇ 5ರಂದು ಹೈದರಾಬಾದ್‌ ನಲ್ಲಿ ನನ್ನ ತರಬೇತಿ ಹೊತ್ತು ಮುಗಿದ ಬಳಿಕ ಕಮಾಂಡರ್‌ ನನ್ನನ್ನು ಮಧ್ಯಾಹ್ನದ ಊಟಕ್ಕೆ ನಾವು ಜತೆಯಾಗಿ ಹೊಟೇಲಿಗೆ ಹೋಗೋಣ ಎಂದು. ನಾನು ಒಪ್ಪಿದೆ. ಆದರೆ ಹೊಟೇಲ್‌ನಲ್ಲಿ ಆತ ತನ್ನ ಖಾಸಗಿ ಬದುಕಿನ ವಿಷಯ ಹೇಳತೊಡಗಿದ. ತನ್ನ ವೈವಾಹಿಕ ಬದುಕಿನಲ್ಲಿ ತಾನು ಅಸಂತುಷ್ಟನಾಗಿದ್ದು ಖಿನ್ನನಾಗಿದ್ದೇನೆ ಎಂದ.

Advertisement

ಆ ಬಳಿಕ ಮುಂದುವರಿದು ಆತ, ಪತಿಯಿಂದ ದೂರ ಇರುವ ಬದುಕು ನಿನಗೆ ಹೇಗನ್ನಿಸುತ್ತಿದೆ ? ದಿನಾಲೂ ಸೆಕ್ಸ್‌ ಬೇಕೆಂದು ಅನ್ನಿಸುವುದಿಲ್ಲವೇ ? ಹಾಗೆ ಅನ್ನಿಸಿದಾಗ ನೀನು ಹಸ್ತ ಮೈಥುನ ಮಾಡಿಕೊಳ್ಳುತ್ತೀಯಾ ಎಂದೆಲ್ಲ ಕೇಳಿದ. ಆಗ ನಾನು ಇದನ್ನೆಲ್ಲ ಮಾತನಾಡಲು ಇಷ್ಟಪಡುವುದಿಲ್ಲ ಎಂದು ಕ್ಯಾಬ್‌ ಗೆ ಕರೆ ಮಾಡಿದೆ.

ಕ್ಯಾಬ್‌ ಬರಲು ಅರ್ಧ ತಾಸು ಕಾಯುವಾಗ ಆತನ ನಡತೆ ಇನ್ನಷ್ಟು ಕೆಟ್ಟದಾಯಿತು. ನನಗಂತೂ ಆತನ ವರ್ತನೆಯಿಂದ ಶಾಕ್‌ ಆಯಿತು; ನನಗೆ ತುಂಬ ಅವಮಾನ, ಮುಜುಗರ, ಜುಗುಪ್ಸೆ, ಅಸಹನೆ ಉಂಟಾಯಿತು’.

Advertisement

Udayavani is now on Telegram. Click here to join our channel and stay updated with the latest news.

Next