ಲಂಡನ್: ಬೆಚ್ಚಿಬೀಳಿಸುವ ಬಿರುಗಾಳಿಯ ನಡುವೆಯೂ ಎದೆಗುಂದದೇ ಲಂಡನ್‌ನ ಹೀತ್ರೋ ಏರ್‌ಪೋರ್ಟ್‌ನಲ್ಲಿ ಸುರಕ್ಷಿತವಾಗಿ ವಿಮಾನಗಳನ್ನು ಲ್ಯಾಂಡಿಂಗ್ ಮಾಡಿದ ಏರ್‌ಇಂಡಿಯಾ ವಿಮಾನಗಳ ಪೈಲಟ್‌ಗಳ ಕೌಶಲ್ಯ ಹಾಗೂ ಚಾಣಾಕ್ಷತೆಯು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಲಂಡನ್‌ನಲ್ಲಿ ಭಾರೀ ಬಿರುಗಾಳಿ ಎದ್ದ ಕಾರಣ, ಹಲವಾರು ವಿಮಾನಗಳ ಸಂಚಾರವನ್ನೇ ರದ್ದು ಮಾಡಿದರೆ, ಇನ್ನೂ ಕೆಲವು ವಿಮಾನಗಳ ಸಂಚಾರವನ್ನು ವಿಳಂಬ ಮಾಡಲಾಗಿತ್ತು. “ಯೂನಿಸ್’ ಹೆಸರಿನ ಬಿರುಗಾಳಿಯ ತೀವ್ರತೆ ಹಿನ್ನೆಲೆಯಲ್ಲಿ ಲಂಡನ್‌ನಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿತ್ತು. 1987ರ ಬಳಿಕ ಬೀಸಿದ ಭೀಕರ ಬಿರುಗಾಳಿ ಎಂದೇ ಇದನ್ನು ಬಣ್ಣಿಸಲಾಗಿತ್ತು.
ಇದನ್ನೂ ಓದಿ:ಮೋಸ್ಟ್ ರಿವ್ಯೂವ್ಡ್ ಪಟ್ಟಿಯಲ್ಲಿ ಸ್ಥಾನ ಪಡೆದ ಮೈಸೂರು ಅರಮನೆ
ಹೀಗಾಗಿ, ಹೀತ್ರೋ ವಿಮಾನನಿಲ್ದಾಣ ತಲುಪಿದ್ದ ಹಲವು ವಿಮಾನಗಳು ಲ್ಯಾಂಡಿಂಗ್ ಮಾಡಲಾಗದೇ ಆಗಸದಲ್ಲೇ ಸುತ್ತು ಬರುತ್ತಿದ್ದವು. ಆದರೆ, ಏರ್‌ಇಂಡಿಯಾ ವಿಮಾನದ ಪೈಲಟ್‌ಗಳಾದ ಕ್ಯಾಪ್ಟನ್ ಅಂಚಿತ್ ಭಾರದ್ವಾತ್ ಮತ್ತು ಆದಿತ್ಯ ರಾವ್ ಅವರು ಅತ್ಯಂತ ಕೌಶಲ್ಯದಿಂದ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ಅವರ ಈ ಕಾರ್ಯಕ್ಕೆ ಲಂಡನ್‌ನ ಚಾನೆಲ್‌ಗಳು ಹಾಗೂ ಏರಿಂಡಿಯಾ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿವೆ.