ಹೊಸದಿಲ್ಲಿ: ಮಾರಣಾಂತಿಕ ಕೊರೊನಾ ವೈರಸ್ ದಾಳಿಗೆ ಒಳಗಾಗಿರುವ ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರಲ್ಲಿರುವ ಭಾರತೀಯರನ್ನು ಕರೆದುಕೊಂಡು ಬರುವ ಸಲುವಾಗಿ ಏರ್ ಇಂಡಿಯಾ ವಿಮಾನ ತೆರಳಿದೆ.
ಸುಮಾರು 423 ಆಸನಗಳಿರುವ ಬಿ737 ಜಂಬೋ ಏರ್ ಇಂಡಿಯಾ ವಿಮಾನ ವುಹಾನ್ ನಗರಕ್ಕೆ ಹೊರಟಿದೆ.
ಹುಬೇ ಪ್ಯಾಂತ್ಯದಲ್ಲಿ ವಾಸಿಸುತ್ತಿರುವ ಸುಮಾರು 600 ಭಾರತೀಯರೊಂದಿಗೆ ಭಾರತ ಸರ್ಕಾರ ಗುರುವಾರ ಸಂಪರ್ಕ ಸಾಧಿಸಿತ್ತು ಆ ಭಾರತೀಯರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬರಲು ಏರ್ ಇಂಡಿಯಾ ವಿಮಾನ ಸಜ್ಜಾಗಿ ಹೊರಟಿದೆ.
ಅಗತ್ಯ ವೈದ್ಯಕೀಯ ತಪಾಸಣೆಯ ನಂತರವಷ್ಟೇ ವಿಮಾನಕ್ಕೆ ಹತ್ತಿಸಿಕೊಳ್ಳಲಾಗುತ್ತದೆ. ಮಾಸ್ಕ್, ಗ್ಲೌಸ್, ಅಗತ್ಯ ಔಷಧಿಗಳ ಜೊತೆಗೆ ವಿಮಾನದಲ್ಲಿ ಕೆಲ ವೈದ್ಯರನ್ನೂ ಕಳುಹಿಸಲಾಗಿದೆ ಎನ್ನಲಾಗಿದೆ.
ಇಂದು ಹೊರಟ ವಿಮಾನದಲ್ಲಿ ಸುಮಾರು 315 ಭಾರತೀಯರು ಮರಳುವ ಸಾಧ್ಯತೆಯಿದೆ. ಮೊದಲ ಹಂತದ ನಂತರ ಮತ್ತೆ ವುಹಾನ್ ಗೆ ಹಾರಲಿರುವ ಏರ್ ಇಂಡಿಯಾದ ಜಂಬೋ ಉಳಿದವರನ್ನು ಕರೆದುಕೊಂಡು ಬರಲಿದೆ ಎನ್ನಲಾಗಿದೆ.