Advertisement

ಕಲಹ ಪೀಡಿತ ಕಾಬೂಲ್ ನಿಂದ ದೆಹಲಿಗೆ ಬಂದಿಳಿದ 129 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ

08:06 PM Aug 15, 2021 | Team Udayavani |

ಹೊಸದಿಲ್ಲಿ: 129 ಭಾರತೀಯ ಪ್ರಯಾಣಿಕರನ್ನು ಹೊತ್ತ ಯುದ್ಧಪೀಡಿತ ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನ ಇಂದು ಸಂಜೆ  8 ಗಂಟೆಗೆ ದೆಹಲಿಗೆ ಬಂದು ಲ್ಯಾಂಡ್ ಆಗಿದೆ.

Advertisement

ತಾಲಿಬಾನ್ ಅಫ್ಘಾನಿಸ್ತಾನದ ದೇಶದ ಮೇಲೆ ಸಂಪೂರ್ಣ ಅಧಿಕಾರ ವಹಿಸಿಕೊಂಡಿರುವ ಕಾರಣ ಏರ್ ಇಂಡಿಯಾ ವಿಮಾನವು ವಾರಕ್ಕೆ ಮೂರು ಬಾರಿ ಕಾಬೂಲ್‌ಗೆ ಹೋಗುವುದು ಅನಿಶ್ಚಿತವಾಗಿದೆ.

ಇಂದು ಮುಂಜಾನೆ ಕಾಬೂಲ್‌ಗೆ ಒಂದು ಚಾರ್ಟರ್ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಬೂಲ್ ವಾಯುಪ್ರದೇಶದಲ್ಲಿ ಮಿಲಿಟರಿ ಚಟುವಟಿಕೆ ಹೆಚ್ಚಾಗುತ್ತಿದ್ದಂತೆ, ನಾಗರಿಕ ವಿಮಾನಗಳನ್ನು ನಿರ್ವಹಿಸುವುದು ಸವಾಲಾಗಿ ಪರಿಣಮಿಸಿದೆ.

Advertisement

ತಾಲಿಬಾನ್ ಇಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಪ್ರವೇಶಿಸಿದೆ. ಹೀಗಾಗಿ ಅಮೆರಿಕವು ತನ್ನ ರಾಯಭಾರ ಕಚೇರಿಯಿಂದ ರಾಜತಾಂತ್ರಿಕರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಿದೆ. ಸರಕಾರದ ಸಚಿವರು ಅಧಿಕಾರವನ್ನು ಮಧ್ಯಂತರ ಆಡಳಿತಕ್ಕೆ ನೀಡಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next